- Home
- Entertainment
- TV Talk
- Bigg Boss ಮನೆಯಿಂದ ಹೊರಬಂದ ಗಿಲ್ಲಿನಟ: ಫ್ಯಾನ್ಸ್ ಭರ್ಜರಿ ಸ್ವಾಗತ- ಆಟದ ದಿಕ್ಕು ಬದಲಾಯ್ತು ಎಂದದ್ಯಾಕೆ ಬಿಗ್ಬಾಸ್?
Bigg Boss ಮನೆಯಿಂದ ಹೊರಬಂದ ಗಿಲ್ಲಿನಟ: ಫ್ಯಾನ್ಸ್ ಭರ್ಜರಿ ಸ್ವಾಗತ- ಆಟದ ದಿಕ್ಕು ಬದಲಾಯ್ತು ಎಂದದ್ಯಾಕೆ ಬಿಗ್ಬಾಸ್?
ಬಿಗ್ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿ ಗಿಲ್ಲಿ ನಟ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿ ಭಾವುಕರಾದರು. ಆದರೆ, "ಆಟದ ದಿಕ್ಕನ್ನು ಜೋಕರ್ ಬದಲಾಯಿಸಬಹುದು" ಎಂಬ ಬಿಗ್ಬಾಸ್ ಅವರ ಅನಿರೀಕ್ಷಿತ ಹೇಳಿಕೆಯು, ಗಿಲ್ಲಿ ನಟನ ಗೆಲುವಿನ ಬಗ್ಗೆಯೇ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ.

ಕೆಲವೇ ಗಂಟೆ ಬಾಕಿ
ಬಿಗ್ಬಾಸ್ ವಿನ್ನರ್ ಯಾರು ಎಂದು ತಿಳಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸ್ಪರ್ಧಿಗಳನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ. ನಿನ್ನೆ ಕಾವ್ಯಾ ಶೈವ, ಧನುಷ್ ಮತ್ತು ಧ್ರುವಂತ್ ಅವರಿಗೆ ಅವಕಾಶ ನೀಡಲಾಗಿತ್ತು.
ಗಿಲ್ಲಿ ಭೇಟಿಗೆ ಅವಕಾಶ
ಇಂದು ಗಿಲ್ಲಿ ನಟನನ್ನು ಭೇಟಿಯಾಗಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಹೊರಗಡೆಯಲ್ಲಿ ಗಿಲ್ಲಿ ನಟನಿಗೆ ಯಾವ ರೀತಿಯ ಕ್ರೇಜ್ ಇದೆ ಎನ್ನುವುದು ಬೇರೆ ಹೇಳಬೇಕಾಗಿಲ್ಲ. ಇವರೇ ವಿನ್ನರ್ (BBK 12 winner) ಎಂದೂ ಘೋಷಣೆ ಮಾಡಿಬಿಟ್ಟಿದ್ದಾರೆ ವೀಕ್ಷಕರು.
ಟ್ಯಾಟೂಗೆ ಭಾವುಕ
ಅದೇ ರೀತಿ ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಕಂಡು ಗಿಲ್ಲಿ ಭಾವುಕರಾದರು. ‘’ಮನಿಗೂ ಅಭಿಮಾನಿಗೂ ಏನು ವ್ಯತ್ಯಾಸ ಗೊತ್ತಾ? ಮನಿ ಇವತ್ತು ಬರ್ತದೆ, ನಾಳೆ ಹೋಗ್ತದೆ. ಅಭಿಮಾನಿ ಬಂದರೆ ಯಾವತ್ತೂ ಹೋಗಲ್ಲ’ ಎನ್ನುವ ಮೂಲಕ ಅಭಿಮಾನಿಗಳ ಬಗ್ಗೆ ಒಳ್ಳೆಯ ಮಾತು ಆಡಿದ್ದರು ಗಿಲ್ಲಿ.
ಬಿಗ್ಬಾಸ್ ಯಾಕೆ ಹೀಗೆ ಹೇಳಿದ್ರು?
ಆದರೆ, ಇದರ ನಡುವೆಯೇ ಬಿಗ್ಬಾಸ್ ನೀಡಿರುವ ಹಿನ್ನೆಲೆ ದನಿಯ ಬಗ್ಗೆ ಅಭಿಮಾನಿಗಳಿಗೆ ಯಾಕೋ ತಲೆಬಿಸಿ ಶುರುವಾದಂತಿದೆ. ಅಷ್ಟಕ್ಕೂ ಅಭಿಮಾನಿಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಬಿಗ್ಬಾಸ್, ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಾಯಿಸುವ ತಾಕತ್ತು ಇರುವುದು ಕೇವಲ ಜೋಕರ್‌ಗೆ ಮಾತ್ರ" ಎಂದಿದ್ದಾರೆ ಬಿಗ್ಬಾಸ್. ಅಂದರೆ ಆಟದ ದಿಕ್ಕು ಬದಲಾಗುತ್ತಾ? ಇದನ್ನು ಹೇಳಿದ್ದು ಯಾಕೆ? ಇಲ್ಲಿಯವರೆಗೆ ಗಿಲ್ಲಿನೇ ವಿನ್ನರ್ ಎಂದೇ ಹೇಳಲಾಗ್ತಿದೆ. ಇದ್ಯಾಕೆ ಈಗ ಹೀಗೆ ಎಂದು ಪ್ರಶ್ನಿಸಲಾಗುತ್ತಿದೆ.
ಮೀಟರ್ ಇದ್ರೆ ಲಡಾಯಿಸು
ಅದೇ ಇನ್ನೊಂದೆಡೆ, ಡೈಲಾಗ್ ಕಿಂಗ್ ಎಂದೇ ಫೇಮಸ್ ಆಗಿರೋ ಗಿಲ್ಲಿ ನಟ, "ಮೀಟರ್ ಇದ್ರೆ ಲಡಾಯಿಸು, ಮುಂದೆ ಬಂದ್ರೆ ಉಡಾಯಿಸು, ಜೊತೆಯಲ್ಲಿದ್ದು ಕಟಾಯಿಸಬೇಡ" ಎಂದು ಪಂಚ್ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ತುಂಬಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

