ಬಿಗ್ ಬಾಸ್ ಸೀಸನ್ 13 – ದೊಡ್ಮನೆಗೆ ಬರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್
ಬಿಗ್ ಬಾಸ್ ಸೀಸನ್ 13ಕ್ಕೆ ಯಾರೆಲ್ಲ ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಹಾಗೆಯೇ ಸಂಭ್ಯಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗ್ತಿದೆ. ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ?

ಬಿಗ್ ಬಾಸ್ ಸೀಸನ್ 13
ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಈಗಾಗಲೇ ತಯಾರಿ ಜೋರಾಗಿ ನಡೆದಿದೆ. ಬಿಗ್ ಬಾಸ್ ಈ ಬಾರಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಬಿಗ್ ಬಾಸ್ ಮನೆಗೆ ಸಾಮಾನ್ಯರನ್ನು ಆಹ್ವಾನಿಸಲಾಗಿದೆ. ವಿಡಿಯೋ ಮಾಡಿ ಕಳಿಸುವಂತೆ ಕಲರ್ಸ್ ಕನ್ನಡ ಪ್ರೊಮೋ ಪ್ರಸಾರ ಮಾಡಿತ್ತು. ಅದ್ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಡಿಷನ್ ಕೂಡ ಈಗಾಗಲೇ ನಡೆದಿದೆ. ಈಗ ಬಿಗ್ ಬಾಸ್ ಯಾವಾಗ ಶುರುವಾಗುತ್ತೆ, ಯಾರೆಲ್ಲ ಬರ್ತಾರೆ ಎನ್ನುವ ಪ್ರಶ್ನೆ ಜೋರಾಗಿದೆ.
ಮಜಾ ಭಾರತ ಶಿವು
ಬಿಗ್ ಬಾಸ್ ಸೀಸನ್ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ. ಸಾಮಾನ್ಯವಾಗಿ ಪ್ರತಿ ಸೀಸನ್ ನಲ್ಲೂ ಮಜಾ ಭಾರತದ ಒಬ್ಬ ಕಲಾವಿದ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಾರೆ. ಈ ಬಾರಿ ಮಜಾ ಭಾರತ ಖ್ಯಾತಿಯ ಶಿವು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 25 ರಂದು ಶಿವು- ಮಾನಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿವು ರಿಯಾಲಿಟಿ ಶೋನಲ್ಲಿ ಮಾತ್ರವಲ್ದೆ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.
ರಗಡ್ ರಶ್ಮಿ
ಇನ್ನು ಬಿಗ್ ಬಾಸ್ ಮನೆಗೆ ಹಳ್ಳಿ ಪವರ್ ಖ್ಯಾತಿಯ ರಗಡ್ ರಶ್ಮಿ ಬರುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಜೀ ಪವರ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಹಳ್ಳಿ ಪವರ್ ರಿಯಾಲಿಟಿ ಶೋದಲ್ಲಿ ಬೆಂಗಳೂರಿನ ರಗಡ್ ರಶ್ಮಿ ವಿನ್ನರ್ ಟ್ರೋಫಿ ಎತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಗಡ್ ರಶ್ಮಿ ಆಕ್ಟಿವ್ ಆಗಿದ್ದು, ಆಟಕ್ಕೂ ಸೈ, ಜಗಳಕ್ಕೂ ಸೈ ಎಂಬುದನ್ನು ಈಗಾಗಲೇ ತೋರಿಸಿದ್ದಾರೆ.
ಸುನೀಲ್ ರಾವ್
ದೊಡ್ಮನೆಗೆ ನಟ, ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನೀಲ್ ರಾವ್ ಬರ್ತಾರೆ ಎನ್ನಲಾಗ್ತಿದೆ. ಸುನೀಲ್ ಈ ವರ್ಷ ಹಯಗ್ರೀವ ಸಿನಿಮಾದಲ್ಲಿ ನಟಿಸಿದ್ದರು. ಭಿನ್ನ ಪಾತ್ರದಲ್ಲಿ ನಟಿಸಿದ್ದ ಸುನೀಲ್, ಅಭಿಮಾನಿಗಳನ್ನು ಮನಸ್ಸು ಗೆಲ್ಲೋದಲ್ಲಿ ಯಶಸ್ವಿಯಾಗಿದ್ದರು. ಬಾಲ ನಟನಾಗಿ ಚಿತ್ರ ರಂಗಕ್ಕೆ ಎಂಟ್ರಿ ನೀಡಿದ್ದ ಸುನೀಲ್ ರಾವ್, 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀರಿಯಲ್ ಮೂಲಕವೂ ಅವರು ವೀಕ್ಷಕರ ಮನೆಗೆ ಹತ್ತಿರವಾಗಿದ್ದವರು.
ಕೋಳಿ ರಮ್ಯಾ
ಬಿಗ್ ಬಾಸ್ ಸೀಸನ್ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ರಮ್ಯಾ ಬಾಲಕೃಷ್ಣ ಅಲಿಯಾಸ್ ಕೋಳಿ ರಮ್ಯಾ ಹೆಸರೂ ಇದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನಿಂದ ಪ್ರಸಿದ್ಧಿಗೆ ಬಂದ ರಮ್ಯಾ, ಕನ್ನಡ, ತಮಿಳು, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಸೀರಿಯಲ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕೋಳಿ ರಮ್ಯಾ, ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಸೀರಿಯಲ್ ಶೀಘ್ರವೇ ಮುಕ್ತಾಯವಾಗಲಿದೆ ಎನ್ನುವ ಮಾತು ಕೇಳಿ ಬರ್ತಿದ್ದು, ಒಂದ್ವೇಳೆ ಸೀರಿಯಲ್ ಮುಗಿದ್ರೆ ರಮ್ಯಾ, ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಶಿವಪುತ್ರ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಂಟೆಂಟ್ ಕ್ರಿಯೇಟರ್ಸ್ ಗೂ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಸಿಗ್ತಿದೆ. ಈ ಬಾರಿ ಯೂಟ್ಯೂಬರ್ ಶಿವಪುತ್ರ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

