- Home
- Entertainment
- TV Talk
- ಕೆಜಿಗಟ್ಟಲೆ ಚಿನ್ನದ ಹಾರ ಹಾಕಿದಾಗ್ಲೇ ಕೆಟ್ಟೋದ ಲಿಫ್ಟ್! ಸಿಕ್ಕಾಕ್ಕೊಂಡು ಪೇಚಿಗೆ ಸಿಲುಕಿದ ಗಿಲ್ಲಿ ನಟ: ಶಾಕಿಂಗ್ ವಿಡಿಯೋ
ಕೆಜಿಗಟ್ಟಲೆ ಚಿನ್ನದ ಹಾರ ಹಾಕಿದಾಗ್ಲೇ ಕೆಟ್ಟೋದ ಲಿಫ್ಟ್! ಸಿಕ್ಕಾಕ್ಕೊಂಡು ಪೇಚಿಗೆ ಸಿಲುಕಿದ ಗಿಲ್ಲಿ ನಟ: ಶಾಕಿಂಗ್ ವಿಡಿಯೋ
ಬಿಗ್ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಉದ್ಯಮಿ ಶರವಣ ಅವರು ಚಿನ್ನದ ಮಳಿಗೆ ಉದ್ಘಾಟನೆ ವೇಳೆ ಕೆಜಿಗಟ್ಟಲೆ ತೂಕದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ನಂತರ, ಈ ಹಾರ ಧರಿಸಿದ್ದ ಗಿಲ್ಲಿ ನಟ, ಅತಿಯಾದ ಜನಸಂದಣಿಯಿಂದಾಗಿ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಬಿಗ್ಬಾಸ್ ಸ್ಪರ್ಧಿಗಳ ಹವಾ
ಈಗ ಎಲ್ಲೆಡೆ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟನದ್ದೇ ಹವಾ. ಇನ್ನು ಕೆಲವು ವರ್ಷಗಳವರೆಗೆ ಬ್ರ್ಯಾಂಡಿಂಗ್ನಿಂದಾಗಿ ಗಿಲ್ಲಿ ಸೇರಿದಂತೆ ಬಿಗ್ಬಾಸ್ನ ಕೆಲವು ಸ್ಪರ್ಧಿಗಳಿಗೆ ಹಣದ ಹೊಳೆಯೇ ಹರಿದು ಬರಲಿದೆ. ಮಳಿಗೆಗಳ ಓಪನಿಂಗ್, ಜಾಹೀರಾತು.. ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಗಂಟೆಯ ಲೆಕ್ಕದಲ್ಲಿ ದುಡ್ಡು ಎಣಿಸುವ ಶುಕ್ರದೆಸೆ ಬಿಗ್ಬಾಸ್ ಸ್ಪರ್ಧಿಗಳಿಗೆ ಸಹಜವಾಗಿ ಬರುತ್ತದೆ.
ಐತಿಹಾಸಿಕ ದಾಖಲೆ
ಅಷ್ಟಕ್ಕೂ, Bigg Bossನಲ್ಲಿ ಗಿಲ್ಲಿ ನಟ ಐತಿಹಾಸಿಕ ದಾಖಲೆಯನ್ನೇ ಬರೆದಿದ್ದಾರೆ. 45 ಕೋಟಿಗೂ ಅಧಿಕ ವೋಟ್ ಬಂದಿವೆ. ಚಿನ್ನಾಭರಣ ಉದ್ಯಮಿ ಶರವಣ ಅವರು, ಬಿಗ್ಬಾಸ್ನಲ್ಲಿ ಗಿಲ್ಲಿನಟನಿಗೆ 20 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ನಿನ್ನೆ ಅವರು ತಮ್ಮ ಚಿನ್ನದ ಮಳಿಗೆಯೊಂದರ ಉದ್ಘಾಟನೆಗೆ ಗಿಲ್ಲಿನಟ (Bigg Boss 12 winner Gilli Nata) ಅವರನ್ನು ಕರೆದಿದ್ದರು. ಇದರ ವಿಡಿಯೋಗಳ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.
ಚಿನ್ನದ ಸರ ಉಡುಗೊರೆ?
ಈ ಸಂದರ್ಭದಲ್ಲಿ ಕೆಜಿಗಟ್ಟಲೆ ತೂಕದ ಚಿನ್ನದ ಸರವನ್ನು ಗಿಲ್ಲಿನಟನ ಕೊರಳಿಗೆ ಶರವಣ ಹಾಕಿದ್ದರು. ಅದನ್ನು ಬಳಿಕ ವಾಪಸ್ ಕೊಡುತ್ತಾರೆ ಎನ್ನಲಾಗಿತ್ತು. ಆದರೆ ಶರವಣ ಅವರು, ಬಿಗ್ಬಾಸ್ನಿಂದ ನನಗೆ ಸಿಕ್ಕಾಪಟ್ಟೆ ಲಾಭ ಆಗಿರುವ ಕಾರಣ, ಹಾರವನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ.
ತಗ್ಲಾಕ್ಕೊಂಡ ಗಿಲ್ಲಿ
ಅದೇನೇ ಇದ್ದರೂ ಈ ಭಾರಿ ಹಾರ ಹಾಕಿಕೊಂಡು ಲಿಫ್ಟ್‌ನಲ್ಲಿ ಬರುವ ವೇಳೆ ಲಿಫ್ಟ್‌ನಲ್ಲಿ ಗಿಲ್ಲಿ ನಟ ತಗ್ಲಾಕ್ಕೊಂಡು ಪೇಚಿಗೆ ಸಿಲುಕಿರುವ ಘಟನೆಯೂ ನಡೆದಿದೆ.
ಬಿಡದ ಜನರು
ಗಿಲ್ಲಿ ನಟನ ಜೊತೆ ಶರವಣ ಸೇರಿದಂತೆ ಹಲವರು ಇದ್ದರು. ಬಹುಶಃ ಅಗತ್ಯಕ್ಕಿಂತ ಹೆಚ್ಚು ಜನರು ತುಂಬಿದ್ದರಿಂದಲೋ ಏನೋ, ಲಿಫ್ಟ್ ಮಧ್ಯೆದಲ್ಲಿಯೇ ಸಿಲುಕಿಕೊಂಡಿದೆ. ಆ ಸಮಯದಲ್ಲಿಯೂ ಗಿಲ್ಲಿನಟನ ಫೋಟೋ ಕ್ಲಿಕ್ಕಿಸಲು ಜನರು ಮುಗಿಬಿದ್ದದ್ದನ್ನು ನೋಡಬಹುದು.
ಚಿನ್ನದ ಭಾರಕ್ಕೆ..
ಕೊನೆಗೆ ಲಿಫ್ಟ್ ಸರಿಯಾಗಿ ಎಲ್ಲರೂ ಹೊರಕ್ಕೆ ಬಂದಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು, ಕೆಜಿಗಟ್ಟಲೆ ಸರದ ಭಾರಕ್ಕೆ ಲಿಫ್ಟ್ ಸ್ಟಕ್ ಆಯಿತು ಎಂದು ತಮಾಷೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

