- Home
- Entertainment
- TV Talk
- ಚಿನ್ನದ ಭಾರಕ್ಕೆ ಸುಸ್ತಾದ Bigg Boss ಗಿಲ್ಲಿನಟ! ಗೋಲ್ಡ್ ಚೈನ್ ಹಾಕಿ ಉದ್ಯಮಿ ಶರವಣ ಕಿವಿಯಲ್ಲಿ ಹೇಳಿದ್ದೇನು?
ಚಿನ್ನದ ಭಾರಕ್ಕೆ ಸುಸ್ತಾದ Bigg Boss ಗಿಲ್ಲಿನಟ! ಗೋಲ್ಡ್ ಚೈನ್ ಹಾಕಿ ಉದ್ಯಮಿ ಶರವಣ ಕಿವಿಯಲ್ಲಿ ಹೇಳಿದ್ದೇನು?
ಬಿಗ್ ಬಾಸ್ ವಿಜೇತ ಗಿಲ್ಲಿನಟನಿಗೆ ಈಗ ಶುಕ್ರದೆಸೆ ಆರಂಭವಾಗಿದೆ. ಕಾರ್ಯಕ್ರಮಗಳ ಉದ್ಘಾಟನೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಇತ್ತೀಚೆಗೆ ಚಿನ್ನದ ಮಳಿಗೆ ಉದ್ಘಾಟನೆ ವೇಳೆ ಉದ್ಯಮಿ ಶರಣವ ಹಾಕಿರೋ ಚಿನ್ನದ ಸರಕ್ಕೆ ಗಿಲ್ಲಿನಟ ಸುಸ್ತಾಗಿ ಹೋಗಿದ್ದಾರೆ!

ಗಿಲ್ಲಿಗೆ ಶುಕ್ರದೆಸೆ
Bigg Bossಗೆ ಕಾಲಿಡುತ್ತಲೇ ಶುಕ್ರದೆಸೆ ಆರಂಭವಾಗಿತ್ತು ವಿನ್ನರ್ ಗಿಲ್ಲಿನಟನಿಗೆ. ಸಹಸ್ರಾರು ಅಭಿಮಾನಿಗಳನ್ನು ಪಡೆದು ದೊಡ್ಮನೆಗೆ ಕಾಲಿಟ್ಟಿದ್ದ ಗಿಲ್ಲಿನಟ, ಇದೀಗ ಕೋಟ್ಯಂತರ ಅಭಿಮಾನಿಗಳನ್ನು ಪಡೆದು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇನ್ನು ಅವರ ಜೀವನದಲ್ಲಿ ಲಕ್ಷ್ಮೀ ಕೃಪಾಕಟಾಕ್ಷವೇ.
ಗಂಟೆಗೆ ಲಕ್ಷ ಲಕ್ಷ
ಹಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ, ಷೋರೂಮ್ಗಳ ಉದ್ಘಾಟಕರಾಗಿ ಗಿಲ್ಲಿನಟನಿಗೆ ಆಹ್ವಾನದ ಮೇಲೆ ಆಹ್ವಾನ ಬರುವ ಕಾರಣ, ಇನ್ನೊಂದಿಷ್ಟು ವರ್ಷ ಗಂಟೆಯಲ್ಲಿ ಲಕ್ಷ ಲಕ್ಷ ಎಣಿಸಲಿದ್ದಾರೆ ಗಿಲ್ಲಿನಟ.
ಉದ್ಘಾಟನೆಗೆ ಗಿಲ್ಲಿ
ಚಿನ್ನಾಭರಣ ಉದ್ಯಮಿ ಶರವಣ ಅವರು, ಬಿಗ್ಬಾಸ್ನಲ್ಲಿ ಗಿಲ್ಲಿನಟನಿಗೆ 20 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಇದೀಗ ಅವರು ತಮ್ಮ ಚಿನ್ನದ ಮಳಿಗೆಯೊಂದರ ಉದ್ಘಾಟನೆಗೆ ಗಿಲ್ಲಿನಟ (Bigg Boss 12 winner Gilli Nata) ಅವರನ್ನು ಕರೆದಿದ್ದಾರೆ. ಇಂಥ ಉದ್ಘಾಟನೆಗೆ ಕರೆದಾಗಲೂ ಸೆಲೆಬ್ರಿಟಿಗಳಿಗೆ ಭಾರಿ ಶುಲ್ಕವನ್ನೂ ನೀಡುವ ಕಾರಣ, ಸದ್ಯ ಗಿಲ್ಲಿಗೆ ಲಕ್ಷ್ಮೀ ಒಲಿಯುತ್ತಿದ್ದಾಳೆ.
ಚಿನ್ನದ ಸರ
ಈ ಸಂದರ್ಭದಲ್ಲಿ ಅವರು ಗಿಲ್ಲಿನಟನಿಗೆ ಭರ್ಜರಿ ಚಿನ್ನದ ಸರವನ್ನು ತೊಡಿಸಿದ್ದಾರೆ. ಗಿಲ್ಲಿ ನಟ ಇದನ್ನು ನೋಡಿ ಸುಸ್ತಾದಂತೆ ಕಾಣಿಸುತ್ತಿದೆ. ಇದೇ ಸಮಯದಲ್ಲಿ ಗಿಲ್ಲಿನಟನ ಕಿವಿಯಲ್ಲಿ ಶರವಣ ಅವರು ಏನೋ ಕಿವಿಮಾತು ಹೇಳಿದ್ದಾರೆ. ಆ ಚಿನ್ನದ ಸರವನ್ನು ಉದ್ಘಾಟನೆಯ ಸಮಯದಲ್ಲಿ ತೊಡಿಸಿದ್ದು, ಸಾಮಾನ್ಯವಾಗಿ ಅದನ್ನು ಉದ್ಘಾಟನೆ ಬಳಿಕ ಅವರು ಹಿಂದಿರುಗಿಸಬೇಕಾಗುತ್ತದೆ. ಇದನ್ನೇ ಕಿವಿಯಲ್ಲಿ ಹೇಳಿರಬಹುದು!
ಅಸಮಾಧಾನದ ಹೊಗೆ
ಒಟ್ಟಿನಲ್ಲಿ ಗಿಲ್ಲಿಯ ಹವಾ ಮುಂದುವರೆದಿದೆ. ಅವರು ವಿನ್ ಆಗಿರುವುದಕ್ಕೆ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಬಡವನ ಟ್ಯಾಗ್ಲೈನ್ ಹೊತ್ತು ಗೆಲುವು ಸಾಧಿಸಿದ್ದಾರೆ ಎಂದವರು ಇದ್ದಾರೆ. ಬಿಗ್ಬಾಸ್ ಎನ್ನೋದು ಕಾಮಿಡಿ ಷೋ ಅಲ್ಲ, ವ್ಯಕ್ತಿತ್ವದ ಆಟ ಎಂದು 2ನೇ ರನ್ನರ್ ಅಪ್ ಅಶ್ವಿನಿ ಗೌಡ ಈಗಲೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು ಕೆಲವರು, ಬೇರೆ ಬೇರೆ ರೀತಿಯಲ್ಲಿ ನೋವು ತೋಡಿಕೊಳ್ಳುತ್ತಿದ್ದಾರೆ.
ಸಾಮರ್ಥ್ಯ ತೋರಿರುವ ಗಿಲ್ಲಿ
ಅದೇನೇ ಇದ್ದರೂ, 37 ಕೋಟಿಗೂ ಅಧಿಕ ಮತವನ್ನು ಪಡೆದು ಬಿಗ್ಬಾಸ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಗಿಲ್ಲಿ ನಟ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಿದ್ದಾರೆ. ಲಕ್ಷ್ಮಿ ಒಲಿದ ಮೇಲೆಯೂ ಬದಲಾಗದೇ ಇದೇ ರೀತಿ ಇರಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ, ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

