ಅಣ್ಣಯ್ಯ ಸೀರಿಯಲ್​ನಲ್ಲಿ ಮನೆಯಿಂದ ಹೊರಬಿದ್ದ ಶಾರದಮ್ಮನಿಗೆ ಮಗ ಶಿವುವೇ ಆಸರೆಯಾಗುತ್ತಾನೆ. ಇದರ ನಡುವೆ ಅಣ್ಣಯ್ಯನ ಬಂಧನದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

ಅಣ್ಣಯ್ಯ ಸೀರಿಯಲ್​ (Annayya Serial) ಇದೀಗ ಕುತೂಹಲದ ಹಂತ ತಲುಪಿದೆ. ಇದಾಗಲೇ ಸೀರಿಯಲ್​ ದಿನಕ್ಕೊಂದು ಟ್ವಿಸ್ಟ್ ಟರ್ನ್ ಗಳನ್ನು ನೀಡುತ್ತಾ ವೀಕ್ಷಕರಿಗೆ ಪ್ರತಿದಿನವೂ ಮನರಂಜನೆಯನ್ನು ಉಣಬಡಿಸುತ್ತಾ ಬರುತ್ತಿದೆ. ಇದೀಗ ವೀಕ್ಷಕರು ಹಲವು ತಿಂಗಳುಗಳಿಂದ ಕಾಯುತ್ತಿದ್ದ ಆ ಅಮೃತ ಗಳಿಗೆ ಬಂದೇ ಬಿಟ್ಟಿದೆ. ರಶ್ಮಿಗೆ ತೊಂದರೆ ನೀಡುವ ಮಗ ಸೀನಾಗೆ ಪಿಂಕಿ ಜೊತೆ ಮದುವೆ ಮಾಡಲು ತುದಿಗಾಲಲ್ಲಿ ನಿಂತಿರುವ ಲೀಲಾಗೆ, ಪ್ರತಿದಿನ ಶಾರದಮ್ಮ ಸೀರೆಯಲ್ಲಿ ಮುಖ ಮುಚ್ಚಿ ಸರಿಯಾಗಿ ಹೊಡೆಯುತ್ತಿದ್ದರು. ಲೀಲಾ ಇಷ್ಟು ದಿನ ಅದನ್ನ ಕೊಳ್ಳಿ ದೆವ್ವ ಎಂದುಕೊಂಡಿದ್ದಳು. ಇದೀಗ ಅದಕ್ಕೆಲ್ಲಾ ಕಾರಣ ಶಾರದಮ್ಮನೇ ಅನ್ನೋದು ಗೊತ್ತಾಗಿದೆ.

ಅಣ್ಣಯ್ಯ ಅರೆಸ್ಟ್​!

ಇದರ ನಡುವೆಯೇ ಅಣ್ಣಯ್ಯ ಶಿವುನ್ನ ಪೊಲೀಸರು ಅರೆಸ್ಟ್​ ಮಾಡಿಕೊಂಡು ಹೋಗ್ತಿರೋ ವಿಡಿಯೋ ಒಂದು ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಈ ವೈರಲ್​ ವಿಡಿಯೋದಲ್ಲಿ ಪೊಲೀಸರು ಅಣ್ಣಯ್ಯನನ್ನು ಕರೆದುಕೊಂಡು ಹೋಗುವುದನ್ನು ನೋಡಬಹುದು. ಪೊಲೀಸ್​​ ವ್ಯಾನ್​ನಲ್ಲಿ ಕುಳ್ಳರಿಸಿಕೊಂಡು ಹೋಗಲಾಗಿದ್ದು, ಅಣ್ಣಯ್ಯ ಸೀರಿಯಲ್​ ನಟ ಅರೆಸ್ಟ್​ ಎನ್ನುವ ಕ್ಯಾಪ್ಷನ್​ ಕೊಟ್ಟಿದ್ದು, ಇದು ಅಭಿಮಾನಿಗಳನ್ನು ಶಾಕ್​ ಗೊಳಿಸಿದೆ.

ಅಷ್ಟಕ್ಕೂ ಅಣ್ಣಯ್ಯ ಸೀರಿಯಲ್​ನಲ್ಲಿ ಅಣ್ಣಯ್ಯ ಅರ್ಥಾತ್​ ಶಿವು ಪಾತ್ರ ಮಾಡ್ತಿರೋ ನಟನ ಹೆಸರು ವಿಕಾಶ್​ ಉತ್ತಯ್ಯ. ಹಾಗೆಂದು ಈ ವಿಡಿಯೋದಲ್ಲಿ ಇರುವಂತೆ ನಟ ವಿಕಾಶ್​ ಅವರನ್ನು ಪೊಲೀಸರು ಕರೆದುಕೊಂಡು ಹೋಗಲಿಲ್ಲ. ಬದಲಿಗೆ ಇದು ಅಣ್ಣಯ್ಯ ಸೀರಿಯಲ್​ ಶೂಟಿಂಗ್​ನಲ್ಲಿ ತೆಗೆದಿದ್ದ ವಿಡಿಯೋ. ಅಣ್ಣಯ್ಯ ರೌಡಿಯಾಗಿದ್ದ ಹಿನ್ನೆಲೆಯಲ್ಲಿ, ಆ ಸಂದರ್ಭದಲ್ಲಿ ಪೊಲೀಸರು ಸೀರಿಯಲ್​ನಲ್ಲಿ ಶಿವು ಅನ್ನು ಅರೆಸ್ಟ್​ ಮಾಡಿಕೊಂಡು ಹೋಗಿರುವ ದೃಶ್ಯವಿದು. ಸೀರಿಯಲ್​ ನೋಡುಗರು ಕೆಲವರಿಗೆ ಇದು ಸೀರಿಯಲ್​ ಶೂಟಿಂಗ್​ ಎಂದು ತಿಳಿದರೆ, ಮತ್ತೆ ಕೆಲವರು ಶಾಕ್​ ಆಗಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಇಂಥ ಸೀರಿಯಲ್​ ಶೂಟಿಂಗ್​ ವಿಡಿಯೋ ಹಾಕಿ ಜನರನ್ನು ಶಾಕ್​ ಮಾಡಲಾಗುತ್ತಿದೆ.

ಸೀರಿಯಲ್​ ಸ್ಟೋರಿ ಏನು?

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ತನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದುಕೊಂಡು, ನನಗೆ ಗೊತ್ತಾಗದೇ ಹೊಡೆಯುತ್ತಿರುವ ಶಾರದಮ್ಮನ ಮೇಲೆ ಕೋಪದಿಂದ ಲೀಲಾ ರಾತ್ರೋ ರಾತ್ರಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾಳೆ. ನಡು ರಾತ್ರಿಯಲ್ಲಿ ಎಲ್ಲಿ ಹೋಗಬೇಕೆಂದು ಅರಿಯದ ಶಾರದಮ್ಮ ಮಾಕಾಳವ್ವನೇ ಕಾಪಾಡಬೇಕೆಂದು ಬೇಡಿಕೊಳ್ಳುತ್ತಾಳೆ. ಕಣ್ಣೀರಿಡುತ್ತಾ ಶಾರದಮ್ಮ ಮಾಕಾಳವ್ವನನ್ನೇ ಪ್ರಶ್ನೆ ಮಾಡಿ ನಗ್ತಿದ್ಯಾ ತಾಯಿ, ನನ್ನ ಗೂಡನ್ನು ನಾನು ಸೇರಿಕೊಳ್ಳಬೇಕು ಎಂದು ಬಂದಾಗ, ನನ್ನನ್ನೇ ಮನೆಯಿಂದ ಹೊರ ಹಾಕ್ತ್ಯಾ ಎನ್ನುತ್ತಾಳೆ. ಅಷ್ಟರಲ್ಲಿ ಮಾಕಾಳವ್ವನ ಸೈನ್ಯ ಶಾರದಮ್ಮನ ಪ್ರಶ್ನೆಗೆ ಉತ್ತರವಾಗಿ ಎದುರು ಬರುತ್ತಾರೆ.

ಕಗ್ಗತ್ತಲ ರಾತ್ರಿಯಲ್ಲಿ ಮಳೆ ಬರುತ್ತಿರುವಾಗ ಹೆಂಗಸೊಬ್ಬಳ ಬಳಿ ನಾಲ್ಕು ಜನ ಮುಸುಕುದಾರಿಗಳನ್ನು ನೋಡಿ ಶಿವು, ಅವರನ್ನು ಹೊಡೆದೋಡಿಸಿ, ಶಾರದಮ್ಮನನ್ನು ರಕ್ಷಿಸಲು ಮುಂದಾಗುತ್ತಾನೆ. ಆದರೆ ಯಾರೂ ಕೂಡ ಅವನ ಕೈಗೆ ಸಿಗೋದೆ ಇಲ್ಲ. ಕೊನೆಗೆ ಜೀವ ಕೊಟ್ಟಾದರೂ ನಿಮ್ಮನ್ನ ರಕ್ಷಿಸುತ್ತೇನೆ ಎನ್ನುತ್ತಾ, ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ತಾನು ಕೈಹಿಡಿದು ತನ್ನ ಮನೆಗೆ ಕರೆದುಕೊಂಡು ಬಂದಿರೋದು ತನ್ನ ಅಮ್ಮ ಅನ್ನೋದು ಗೊತ್ತಿರದ ಶಿವು, ಮನೆಯೊಳಗೆ ಕಾಲಿಟ್ಟ ನಂತರ ಬೆಳಕಲ್ಲಿ ಅಮ್ಮನನ್ನು ನೋಡಿ ಶಾಕ್ ಆಗುತ್ತಾನೆ, ಜೊತೆಗೆ ಮನೆ ಮಂದಿ ಕೂಡ ಈ ದೃಶ್ಯವನ್ನು ನೋಡಿ ಅಚ್ಚರಿಗೊಳ್ಳುತ್ತಾರೆ. ಇಲ್ಲಿವರೆಗೂ ಅಮ್ಮ ಅಂದರೇನೆ ದ್ವೇಷದ ಕಿಡಿ ಕಾರುತ್ತಿದ್ದ ಶಿವು, ಈವಾಗಲಾದರೂ ಅಮ್ಮನನ್ನು ಒಪ್ಪಿಕೊಳ್ಳುತ್ತಾನ? ವೀರಭದ್ರನ ನಿಜವಾದ ಮುಖವನ್ನು ಅರ್ಥಮಾಡಿಕೊಳ್ಳುತ್ತಾನ? ಅಥವಾ ಮತ್ತೆ ಅಮ್ಮನನ್ನು ಈ ಮನೆಯಿಂದ ಹೊರಹಾಕುತ್ತಾನ? ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.