- Home
- Entertainment
- TV Talk
- Bigg Bossನಲ್ಲಿ ಕಳಚಿ ಬಿತ್ತು ಪ್ರೇಮದ ಕೊಂಡಿ: ಗಿಲ್ಲಿಗೆ ಗಂಡನಾಗೋ ಕ್ವಾಲಿಟಿನೇ ಇಲ್ಲ- ಕೆಂಡಾಮಂಡಲ
Bigg Bossನಲ್ಲಿ ಕಳಚಿ ಬಿತ್ತು ಪ್ರೇಮದ ಕೊಂಡಿ: ಗಿಲ್ಲಿಗೆ ಗಂಡನಾಗೋ ಕ್ವಾಲಿಟಿನೇ ಇಲ್ಲ- ಕೆಂಡಾಮಂಡಲ
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತ್ರಿಕೋನ ಪ್ರೇಮಕಥೆ ನಡೆಯುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ, ಗಿಲ್ಲಿ ನಟನ ಕುರಿತು ಅನಿರೀಕ್ಷಿತ ಹೇಳಿಕೆ ಎಲ್ಲವನ್ನೂ ಬದಲಿಸಿದೆ. ಅಷ್ಟಕ್ಕೂ ಆಗಿದ್ದೇನು?

ತ್ರಿಕೋನ ಪ್ರೇಮಕಥೆ
ಬಿಗ್ಬಾಸ್ನಲ್ಲಿ ತ್ರಿಕೋನ ಪ್ರೇಮಕಥೆ ಶುರುವಾಗಿದೆ ಎಂದೇ ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ. ಇತ್ತ ಗಿಲ್ಲಿ ನಟ ಕಾವ್ಯಾ ಶೈವ ಅವರಿಗೆ ಕಾವು ಕಾವು ಎಂದು ಹಿಂದೆ ಬಿದ್ದಿದ್ದರೆ, ಅತ್ತ ರಕ್ಷಿತಾ ಶೆಟ್ಟಿ ನನ್ನ ಗಂಡನಾಗುವ ಗಿಲ್ಲಿ ನಟನ ಹಾಗೆ ಇರಬೇಕು ಎಂದಿದ್ದರು.
ಎಲ್ಲವೂ ಉಲ್ಟಾ
ಆದರೆ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ, ಬಿಗ್ಬಾಸ್ ಮನೆಯಲ್ಲಿ ಎಲ್ಲವೂ ಉಲ್ಟಾ ಆಗ್ತಿದೆ. ಅಷ್ಟಕ್ಕೂ ಗಿಲ್ಲಿ ನಟ (Bigg Boss Gilli Nata) ಏನೂ ಸೀರಿಯಲ್ ಆಗಿ ಕಾವ್ಯಾ ಅವರನ್ನು ಲವ್ ಮಾಡ್ತಿಲ್ಲ. ತಮಾಷೆಯಾಗಿ ಆಕೆಯನ್ನು ರೇಗಿಸ್ತಾ ಇರುತ್ತಾರಷ್ಟೇ.
ರಕ್ಷಿತಾ ಒಲವು
ಆದರೆ ರಕ್ಷಿತಾ ಶೆಟ್ಟಿ ಮಾತ್ರ ಗಿಲ್ಲಿ ನಟನ ಜೋಕ್ಸ್ ಸ್ವಭಾವ ನೋಡಿ ಈಚೆಗೆ ಸ್ವಲ್ಪ ಒಲವು ತೋರಿದಂತೆ ಕಾಣಿಸುತ್ತಿತ್ತು. ಬಿಗ್ಬಾಸ್ ಮನೆಯ ಹೊರಗಡೆ, ಇಲ್ಲಿ ತ್ರಿಕೋನ ಪ್ರೇಮಕಥೆ ನಡೆಯುತ್ತಿದೆ. ಆದರೆ ಗಿಲ್ಲಿನಟ ಮತ್ತು ಕಾವ್ಯಾ ಶೈವ ಜೋಡಿ ಚೆನ್ನಾಗಿದೆ ಎಂದು ಮದುವೆ ಮಾಡಿಸುವ ಮಟ್ಟಿಗೂ ಹೋಗಿಬಿಟ್ಟಿದ್ದಾರೆ.
ಸಿನಿಮಾ ಸ್ಟೋರಿ
ಇದೀಗ ಇದೇ ಪ್ರೇಮಕಥೆಯನ್ನು ಇಟ್ಟುಕೊಂಡು ಗಿಲ್ಲಿ ನಟ ಸಿನಿಮಾ ಸ್ಟೋರಿ ರೀತಿ ಬಣ್ಣಿಸುತ್ತಿದ್ದರು. ಒಬ್ಬ ನಾಯಕ ಒಬ್ಬಳನ್ನು ಇಷ್ಟಪಡುತ್ತಾನೆ, ಆದರೆ ಮತ್ತೊಬ್ಬಳು ಆಮೇಲೆ ಎಂಟ್ರಿ ಕೊಟ್ಟು ನಾಯಕನನ್ನು ಇಷ್ಟಪಡುತ್ತಾಳೆ ಎಂದು ಹೇಳುತ್ತಿದ್ದಂತೆಯೇ ಕಾವ್ಯಾ ಜೋರಾಗಿ ರಕ್ಷಿತಾಗೆ ರೇಗಿಸಿ ನೋಡಿ ನಿಮ್ಮದೇ ಕಥೆ ಹೇಳ್ತಾ ಇದ್ದಾರೆ ಎಂದಿದ್ದರು.
ಕೆರಳಿದ ರಕ್ಷಿತಾ
ಇದರಿಂದ ಈಗ ರಕ್ಷಿತಾ ಕೆರಳಿದ್ದಾರೆ. ನಾನೇನು ಅವರ ಹಿಂದೆ ಬಿದ್ದಿಲ್ಲ. ಅಷ್ಟಕ್ಕೂ ನನ್ನ ಗಂಡನಾಗುವ ಕ್ವಾಲಿಟಿ ಅವರಿಗೆ ಇಲ್ಲ. ನನ್ನ ಗಂಡನಾಗುವ ಬೇರೆಯ ರೀತಿಯಲ್ಲಿಯೇ ಇರಬೇಕು ಎಂದಿದ್ದಾರೆ.
ರೇಗಿಸಿದ ಕಾವ್ಯಾ
ಹಾಗಿದ್ದರೆ ಆ ದಿನ ಯಾಕೆ ನನ್ನ ಗಂಡ ಗಿಲ್ಲಿನಟನ ರೀತಿಯೇ ಇರಬೇಕು ಎಂದಿದ್ದು ಎಂದು ಕಾವ್ಯಾ ಕೇಳಿದಾಗ, ಏನೋ ಒಂದು ಚೂರು ಕ್ವಾಲಿಟಿ ಇದೆ ಅಷ್ಟೇ. ಆದರೆ ನನ್ನ ಗಂಡನಾಗುವ ಪೂರ್ಣ ಕ್ವಾಲಿಟಿ ಅವರಲ್ಲಿ ಇಲ್ಲ. ನೀವು ಹೀಗೆ ರೇಗಿಸೋದಾದ್ರೆ ನಾನು ಅವರನ್ನು ಅಣ್ಣ ಎಂದು ಕರೆಯುತ್ತೇನೆ ಎಂದು ಕೋಪದಿಂದ ನುಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

