MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!

BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!

ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳು 'ದೊಡ್ಮನೆ ಹಬ್ಬ' ಎಂಬ ವಿಶೇಷ ಕಾರ್ಯಕ್ರಮಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ.  ಈ ಕಾರ್ಯಕ್ರಮದಲ್ಲಿ, ಸ್ಪರ್ಧಿಗಳ ಡಾನ್ಸ್, ಕಾಮಿಡಿ ಹಾಗೂ ಅಸಮಾಧಾನಿತರ ಮುಖಾಮುಖಿಯನ್ನು ನಿರೀಕ್ಷಿಸಬಹುದು.  ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ.

1 Min read
Author : Suchethana D
Published : Feb 07 2026, 01:49 PM IST
Share this Photo Gallery
  • FB
  • TW
  • Linkdin
  • Whatsapp
16
ಮತ್ತೊಮ್ಮೆ ಬಿಗ್​ಬಾಸ್!​
Image Credit : Instagram

ಮತ್ತೊಮ್ಮೆ ಬಿಗ್​ಬಾಸ್!​

ಬಿಗ್​ಬಾಸ್​ 12 (Bigg Boss 12) ಮುಕ್ತಾಯಗೊಂಡು ಹಲವು ದಿನಗಳು ಕಳೆದಿದ್ದು, ಸದ್ಯ ಅದರ ಮೇಲಿನ ಕ್ರೇಜ್​ ಕ್ರಮೇಣ ಜನರ ಮನಸ್ಸಿನಲ್ಲಿ ಕಡಿಮೆಯಾಗತೊಡಗಿದೆ. ಬಿಗ್​ಬಾಸ್​ ಸಂದರ್ಭದಲ್ಲಿ ವಾಹಿನಿಯ ಟಿಆರ್​ಪಿ ಒಂದೇ ಸಮನೆ ಏರಿದರೆ, ಅದು ಮುಗಿದ ಮೇಲೆ ಸಹಜವಾಗಿ ಕುಸಿತ ಕಾಣುವುದು ಇದ್ದೇ ಇದೆ. ಆದರೆ ಇನ್ನೊಮ್ಮೆ ಬಿಗ್​ಬಾಸ್​ 12ರ ಎಲ್ಲಾ ಸ್ಪರ್ಧಿಗಳನ್ನು ಒಟ್ಟಿಗೇ ವೇದಿಕೆ ಮೇಲೆ ಕರೆತಂದಿದೆ ಕಲರ್ಸ್​ ವಾಹಿನಿ.

26
ದೊಡ್ಮನೆ ಹಬ್ಬ
Image Credit : Instagram

ದೊಡ್ಮನೆ ಹಬ್ಬ

ಇದೇ ಫೆಬ್ರುವರಿ 14ರಂದು ದೊಡ್ಮನೆ ಹಬ್ಬದ ಹೆಸರಿನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸುಷ್ಮಾ ಕೆ.ರಾವ್​ ಅವರ ನಿರೂಪಣೆಯಲ್ಲಿ, ಬಿಗ್​ಬಾಸ್​​ 12ನೇ ಸೀಸನ್​ನ ಎಲ್ಲಾ ಸ್ಪರ್ಧಿಗಳನ್ನು ಪುನಃ ಒಟ್ಟಿಗೇ ನೋಡುವ ಅವಕಾಶವನ್ನು ವೀಕ್ಷಕರು ಪಡೆದುಕೊಳ್ಳಬಹುದಾಗಿದೆ.

Related Articles

Related image1
Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?
Related image2
Meghana Raj's Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​
36
ಜೋಡಿ ಹಕ್ಕಿಗಳ ಮಿಲನ
Image Credit : Instagram

ಜೋಡಿ ಹಕ್ಕಿಗಳ ಮಿಲನ

ಈ ಸೀಸನ್​ನಲ್ಲಿ ಜೋಡಿ ಹಕ್ಕಿಗಳೆಂದೇ ಫೇಮಸ್​ ಆದವರು ರಾಶಿಕಾ ಶೆಟ್ಟಿ- ಸೂರಜ್​ ಸಿಂಗ್​ (Rashika Shetty and Suraj Singh) ಮತ್ತು ಗಿಲ್ಲಿ ನಟ- ಕಾವ್ಯಾ ಶೈವ. ಇವರ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೇ ನೋಡಿ ವೀಕ್ಷಕರು ಕಣ್ತುಂಬಿಸಿಕೊಳ್ಳಬಹುದಾಗಿದೆ.

46
ಎಲ್ಲರೂ ಒಟ್ಟಿಗೇ
Image Credit : Instagram

ಎಲ್ಲರೂ ಒಟ್ಟಿಗೇ

ಇದರ ಜೊತೆಗೆ, ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಅಸಮಾಧಾನ ಹೊರಹಾಕುತ್ತಿರುವ ಸ್ಪರ್ಧಿಗಳೂ ಇದ್ದಾರೆ. ಗಿಲ್ಲಿ ನಟ ವಿನ್​ ಆಗಿರುವುದಕ್ಕೆ ವಿವಿಧ ಮಾಧ್ಯಮಗಳಲ್ಲಿ ಭಾರಿ ಕೋಪವನ್ನೂ ತೋಡಿಕೊಂಡಿರುವ ಸ್ಪರ್ಧಿಗಳೂ ಇದ್ದಾರೆ. ಅವರು ಇದೀಗ ಮತ್ತೊಮ್ಮೆ ಗಿಲ್ಲಿ ನಟನ ಮುಖಾಮುಖಿಯಾದರೆ ಹೇಗಿರುತ್ತದೆ ಎನ್ನುವುದನ್ನೂ ಇದರಲ್ಲಿ ನೋಡಬಹುದಾಗಿದೆ.

56
ಬಿಗ್​ಬಾಸ್​ ಸವಿಯೂಟ
Image Credit : Instagram

ಬಿಗ್​ಬಾಸ್​ ಸವಿಯೂಟ

ಒಟ್ಟಿನಲ್ಲಿ ಕಲರ್ಸ್​ ವಾಹಿನಿ ವೀಕ್ಷಕರಿಗೆ ಮತ್ತೊಮ್ಮೆ ಬಿಗ್​ಬಾಸ್​ ಸವಿಯೂಟವನ್ನು ಬಡಿಸಲು ಮುಂದಾಗಿದೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಎಲ್ಲರೂ ಭರ್ಜರಿ ಹೆಜ್ಜೆ ಹಾಕುವುದನ್ನು ನೋಡಬಹುದು.

66
ಗಾಸಿಪ್​ ಅಂದ್ರೆ ತೆಂಗಿನ ಚಿಪ್ಪು
Image Credit : Instagram

ಗಾಸಿಪ್​ ಅಂದ್ರೆ ತೆಂಗಿನ ಚಿಪ್ಪು

ಜೊತೆಗೆ ಸುಷ್ಮಾ ಕೆ.ರಾವ್​ ಅವರ ನಿರೂಪಣೆ ಎಂದರೆ, ಸಹಜವಾಗಿ ಅದರಲ್ಲಿ ಕಾಮಿಡಿ ಇದ್ದೇ ಇರುತ್ತದೆ. ಮಲ್ಲಮ್ಮ ಅವರಿಗೆ ಸುಷ್ಮಾ ಅವರು ಗಾಸಿಪ್​ ಎಂದರೆ ಏನು ಎಂದು ಕೇಳಿದಾಗ, ಮಲ್ಲಮ್ಮ ತೆಂಗಿನ ಚಿಪ್ಪು ಎಂದಿದ್ದಾರೆ. ಹೀಗೆ ಹಲವು ರೀತಿಯ ಕಾಮಿಡಿಗಳನ್ನೂ ಇದರಲ್ಲಿ ನೋಡಬಹುದು. ಜೊತೆಗೆ ಬಿಗ್​ಬಾಸ್​ ಸ್ಪರ್ಧಿಗಳ ಕುಟುಂಬಸ್ಥರ ಜೊತೆಗಿನ ಮೋಜು ಮಸ್ತಿಯನ್ನೂ ನೋಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ಸುಷ್ಮಾ ಕೆ ರಾವ್
ಗಿಲ್ಲಿ ನಟ
ಅಶ್ವಿನಿ ಗೌಡ

Latest Videos
Recommended Stories
Recommended image1
Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?
Recommended image2
ಬದಲಾದ ಭಾಗ್ಯ: ಯಾರ ಬಾಳಲ್ಲಿ ಲಕ್ಷ್ಮಿಯಾಗಿ ಹೆಜ್ಜೆ ಇಡ್ತಾಳೆ? ಅಂತಿಮ ಕ್ಷಣದ ರೋಚಕ ಫೋಟೋಶೂಟ್​
Recommended image3
ಮೈಸೂರಿನ ಹುಡುಗನಿಗೆ ಡಿವೋರ್ಸ್;‌ 'ಮುಕೇಶ್‌ ಅಂಬಾನಿ ಜೊತೆ ಮದುವೆಯಾಗೋಕೆ ರೆಡಿಯಾದ 47ರ ರಾಖಿ ಸಾವಂತ್!
Related Stories
Recommended image1
Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?
Recommended image2
Meghana Raj's Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved