MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?

Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?

ಬಿಗ್​ಬಾಸ್​ 12ರ ವಿಜೇತ ಗಿಲ್ಲಿ ನಟ, ಸೆಲೆಬ್ರಿಟಿ ಆದ ಬಳಿಕ ಸರಣಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರಿಗೆ ಸೆಲ್ಫಿ ನೀಡುವಾಗ ಅಗೌರವ ತೋರಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಇದು ಸುದೀಪ್ ನೀಡಿದ್ದ ಎಚ್ಚರಿಕೆಯ ಮಾತನ್ನು ನೆನಪಿಸುತ್ತಿದೆ.

2 Min read
Author : Suchethana D
Published : Feb 07 2026, 01:00 PM IST
Share this Photo Gallery
  • FB
  • TW
  • Linkdin
  • Whatsapp
16
ಸೆಲೆಬ್ರಿಟಿ ಅಂದ್ರೆ ಸುಮ್ನೆನಾ?
Image Credit : Instagram

ಸೆಲೆಬ್ರಿಟಿ ಅಂದ್ರೆ ಸುಮ್ನೆನಾ?

ಸೆಲೆಬ್ರಿಟಿ ಆಗುವುದು ಎಷ್ಟು ಕಷ್ಟವೋ, ಅದಕ್ಕಿಂತಲೂ ಹೆಚ್ಚು ಕಷ್ಟ ಸಾಮಾನ್ಯ ವ್ಯಕ್ತಿಯೊಬ್ಬ ಸೆಲೆಬ್ರಿಟಿ ಪಟ್ಟಕ್ಕೆ ದಿಢೀರ್​ ಏರಿದಾಗ ಅದನ್ನು ಮೆಂಟೇನ್​ ಮಾಡುವುದು. ಇದೀಗ ಬಿಗ್​ಬಾಸ್​​ನಲ್ಲಿ (Bigg Boss 12) ಐತಿಹಾಸಿಕ ಗೆಲುವು ಸಾಧಿಸಿರುವ ಗಿಲ್ಲಿ ನಟ (Gilli Nata) ಸ್ಥಿತಿಯೂ ಅದೇ ರೀತಿ ಆಗಿದೆ.

26
ಬೆಂಬಿಡದ ಆರೋಪ
Image Credit : Instagram

ಬೆಂಬಿಡದ ಆರೋಪ

ಆಗೊಬ್ಬ ಅಭಿಮಾನಿ ತನಗೆ ಸಿಗಲು ಬರಲಿಲ್ಲ ಎಂದು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ರೆ, ಇನ್ನೊಬ್ಬರು ಸಿನಿಮಾ ಪ್ರಚಾರಕ್ಕೆ ಬರಲಿಲ್ಲವೆಂದು ದೂರನ್ನೇ ದಾಖಲು ಮಾಡಿದ್ರು. ಈಗ ನೋಡಿದ್ದರೆ ಪೊಲೀಸರೊಬ್ಬರು ಸೆಲ್ಫಿ ಕೇಳಿದಾಗ ಗಿಲ್ಲಿ ನಟ ತಾತ್ಸಾರ ಮಾಡಿದರು ಎನ್ನುವ ಆರೋಪ ಕೇಳಿಬಂದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಅದರ ವಿಡಿಯೋ ವೈರಲ್​ ಆಗ್ತಿದೆ.

Related Articles

Related image1
ಲವ್​ ಮಾಡೋದೆಲ್ಲಾ ಸ್ಕ್ರಿಪ್ಟೆಡ್​: ರಿಯಾಲಿಟಿ ಷೋಗಳ ಬಗ್ಗೆ ಅರಿವಿಲ್ಲದೇ Bigg Boss ಕಾವ್ಯಾ ಶೈವ ರಿವೀಲ್​ ಮಾಡಿದ್ದೇನು?
Related image2
ಇದು ರಕ್ಷಿತಾ ಶೆಟ್ಟಿ ಪವಾಡ: Bigg Boss ಕರಿಬಸಪ್ಪ ಸಕತ್​ ಫೇಮಸ್​- ವಿಶೇಷ ವಿಡಿಯೋ ಮೂಲಕ ಥ್ಯಾಂಕ್ಸ್​
36
ಪೊಲೀಸರ ಸೆಲ್ಫಿ
Image Credit : Instagram

ಪೊಲೀಸರ ಸೆಲ್ಫಿ

ಅಷ್ಟಕ್ಕೂ ಈ ವಿಡಿಯೋದಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಜೊತೆ ಮಾತನಾಡುತ್ತಿರುವಾಗ ಅಲ್ಲಿರುವ ಪೊಲೀಸರೊಬ್ಬರು ಸೆಲ್ಫಿ ಕೇಳಿದ್ದಾರೆ. ಗಿಲ್ಲಿ ನಟ, ಸೆಲ್ಫಿ ಕೊಡಲ್ಲ ಅಂತೇನೂ ಹೇಳಲಿಲ್ಲ. ಸಹಜವಾಗಿಯೇ ಫೋನ್​ ತೆಗೆದುಕೊಂಡು ಸೆಲ್ಫಿ ಕೊಟ್ಟಿದ್ದಾರೆ. ಆದರೆ ಅಪ್ಪನ ವಯಸ್ಸಿನ ಪೊಲೀಸರಿಗೆ ಗಿಲ್ಲಿ ನಟ ರಿಸ್​ಪೆಕ್ಟ್​ ಕೊಟ್ಟಿಲ್ಲ. ಇದೇನಾ ಕರ್ನಾಟಕ ಇಷ್ಟಪಟ್ಟ ಗಿಲ್ಲಿ? ಎಂದು ಶೀರ್ಷಿಕೆ ಕೊಟ್ಟು justwowkarnataka_motivation ಎನ್ನುವ ಇನ್​ಸ್ಟಾದಲ್ಲಿ ಶೇರ್​ ಮಾಡಲಾಗಿದೆ. ಈ ವಿಡಿಯೋದಲ್ಲಿ ಪೊಲೀಸರಿಗೆ ಗಿಲ್ಲಿ ನಟ ಗೌರವ ಕೊಟ್ಟಿಲ್ಲ ಎಂದು ಎಲ್ಲಿ ಕಾಣಿಸುತ್ತಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಕೆಲವು ಅಭಿಮಾನಿಗಳ ಕಣ್ಣಿಗೆ ಅದು ಹಾಗೆ ಕಂಡಿದೆ!

46
ಹೆಜ್ಜೆ ಹೆಜ್ಜೆಗೂ ತಪ್ಪು!
Image Credit : Instagram

ಹೆಜ್ಜೆ ಹೆಜ್ಜೆಗೂ ತಪ್ಪು!

ಸುಮಾರು 50 ಕೋಟಿ ಮತ ಚಲಾಯಿಸಿದ ಅಭಿಮಾನಿಗಳು ಗಿಲ್ಲಿ ನಟ ತಾವು ಹೇಳಿದಂತೆ ಕೇಳಬೇಕು, ತಾವು ಹೇಳಿದಂತೆ ನಡೆದುಕೊಳ್ಳಬೇಕು. ತಮ್ಮನ್ನೂ ಭೇಟಿಯಾಗಬೇಕು ಎನ್ನೋದನ್ನು ಆಶಿಸುವುದರಲ್ಲಿ ತಪ್ಪೇನಿಲ್ಲ. ಹಾಗೆಂದು ಇದೀಗ ಸೆಲೆಬ್ರಿಟಿ ಆಗಿರೋ ತಪ್ಪಿಗೆ ಹೆಜ್ಜೆ ಹೆಜ್ಜೆಗೂ ಹುಳುಕನ್ನೇ ಹುಡುಕುವ ಕೆಲಸ ಮಾಡಲಾಗುತ್ತಿದೆ ಎಂದು ಕೆಲವರು ಕಮೆಂಟ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

56
ಸುದೀಪ್​ ಹೇಳಿದ್ದೇನು?
Image Credit : Asianet News

ಸುದೀಪ್​ ಹೇಳಿದ್ದೇನು?

ಇದೇ ಕಾರಣಕ್ಕೆ ತಾನೆ ಸುದೀಪ್​ ಗಿಲ್ಲಿ ನಟನಿಗೆ ಒಂದು ಮಾತು ಹೇಳಿದ್ದು. ಅದೇನೆಂದರೆ, ಇಲ್ಲಿಯವರೆಗಿನದ್ದು ಒಂದು ಮಾತು, ಮುಂದಿನದ್ದು ಇನ್ನೊಂದು ಮಾತು ಎಂದಿದ್ದರು. ಜತೆಗೆ, ನೋಡಿಕೊಂಡು ಹೆಜ್ಜೆ ಇಡ್ರಿ, ಯಾವುದನ್ನೂ ತಲೆಗೆ ತೆಗೆದುಕೊಳ್ಳಬೇಡಿ ಗಿಲ್ಲಿ, ಎಲ್ಲವನ್ನೂ ಬ್ಯಾಲೆನ್ಸ್‌ ಮಾಡಿʼ ಎಂದು ಕೂಡ ಹೇಳಿದ್ದರು. ಈ ಮಾತುಗಳು ಮುಂದೆ ಆಗಬಹುದಾದ ಆರೋಪಗಳ ಅನಾಹುತಗಳನ್ನು ಸೂಚ್ಯವಾಗಿ ಹೇಳುವಂತಿತ್ತು.

66
ಸಾಮಾನ್ಯ ಮನುಷ್ಯನಲ್ಲ
Image Credit : Asianet News

ಸಾಮಾನ್ಯ ಮನುಷ್ಯನಲ್ಲ

ಏಕೆಂದರೆ ಇನ್ನು ಮುಂದೆ ಗಿಲ್ಲಿ ನಟ ಸಾಮಾನ್ಯ ಮನುಷ್ಯನಲ್ಲ. ಅವರ ಅಭಿಮಾನಿಗಳು ಹೇಳಿದಂತೆ ಕೇಳಬೇಕು, ಎಲ್ಲರನ್ನೂ ಬ್ಯಾಲೆನ್ಸ್​ ಮಾಡಬೇಕು. ಹೋದಲ್ಲಿ, ಬಂದಲ್ಲಿ ಒಂದಷ್ಟು ತಿಂಗಳಾದರೂ ಕ್ಯಾಮೆರಾ ಕಣ್ಣುಗಳ ನೆಟ್ಟಿರುತ್ತವೆ. ಸಿನಿಮಾ ಸೆಲೆಬ್ರಿಟಿಗಳ ರೀತಿ ಯಾವಾಗಲೂ ಅಲ್ಲದಿದ್ದರೂ ಬಿಗ್​ಬಾಸ್​ 12ರ ಹವಾ ಮುಗಿಯುವವರೆಗಾದರೂ ಎಚ್ಚರದಿಂದ ಹೆಜ್ಜೆ ಇಡಬೇಕು ಎನ್ನುವುದನ್ನೇ ಸುದೀಪ್​ ಸೂಕ್ಷ್ಮವಾಗಿ ವಿವರಿಸಿದ್ದಂತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಕಿಚ್ಚ ಸುದೀಪ್
ಗಿಲ್ಲಿ ನಟ
ಮನರಂಜನಾ ಸುದ್ದಿ
ಟಿವಿ ಶೋ
ರಿಯಾಲಿಟಿ ಶೋ

Latest Videos
Recommended Stories
Recommended image1
ಬದಲಾದ ಭಾಗ್ಯ: ಯಾರ ಬಾಳಲ್ಲಿ ಲಕ್ಷ್ಮಿಯಾಗಿ ಹೆಜ್ಜೆ ಇಡ್ತಾಳೆ? ಅಂತಿಮ ಕ್ಷಣದ ರೋಚಕ ಫೋಟೋಶೂಟ್​
Recommended image2
ಮೈಸೂರಿನ ಹುಡುಗನಿಗೆ ಡಿವೋರ್ಸ್;‌ 'ಮುಕೇಶ್‌ ಅಂಬಾನಿ ಜೊತೆ ಮದುವೆಯಾಗೋಕೆ ರೆಡಿಯಾದ 47ರ ರಾಖಿ ಸಾವಂತ್!
Recommended image3
Karna Serial ಯಾರೂ ಊಹಿಸದ ತಿರುವು! ಮ್ಯಾರೇಜ್​ ಸರ್ಟಿಫಿಕೇಟ್​ಗೆ ಕರ್ಣ- ನಿಧಿ ಸಹಿ: ರಮೇಶ್​ ಕಕ್ಕಾಬಿಕ್ಕಿ
Related Stories
Recommended image1
ಲವ್​ ಮಾಡೋದೆಲ್ಲಾ ಸ್ಕ್ರಿಪ್ಟೆಡ್​: ರಿಯಾಲಿಟಿ ಷೋಗಳ ಬಗ್ಗೆ ಅರಿವಿಲ್ಲದೇ Bigg Boss ಕಾವ್ಯಾ ಶೈವ ರಿವೀಲ್​ ಮಾಡಿದ್ದೇನು?
Recommended image2
ಇದು ರಕ್ಷಿತಾ ಶೆಟ್ಟಿ ಪವಾಡ: Bigg Boss ಕರಿಬಸಪ್ಪ ಸಕತ್​ ಫೇಮಸ್​- ವಿಶೇಷ ವಿಡಿಯೋ ಮೂಲಕ ಥ್ಯಾಂಕ್ಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved