- Home
- Entertainment
- TV Talk
- Bhagyalakshmi: ಸುನಂದಾ ಕೆನ್ನೆಗೆ ಬಾರಿಸಲು ಹೆಂಗಸರು ರೆಡಿ! ನಿಮ್ಮನೆಯಲ್ಲೂ ಹೀಗೆ ಮಾಡ್ತೀರಾ ಕೇಳಿದ ನೆಟ್ಟಿಗರು
Bhagyalakshmi: ಸುನಂದಾ ಕೆನ್ನೆಗೆ ಬಾರಿಸಲು ಹೆಂಗಸರು ರೆಡಿ! ನಿಮ್ಮನೆಯಲ್ಲೂ ಹೀಗೆ ಮಾಡ್ತೀರಾ ಕೇಳಿದ ನೆಟ್ಟಿಗರು
ಭಾಗ್ಯಲಕ್ಷ್ಮಿಯಲ್ಲಿ, ಭಾಗ್ಯಳ ಮರುಮದುವೆಗೆ ಅತ್ತೆ ಕುಸುಮಾ ಬೆಂಬಲಿಸಿದರೆ, ಸುನಂದಾ ವಿರೋಧಿಸುತ್ತಿದ್ದಾಳೆ. ಪ್ರೇಕ್ಷಕರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಸೀರಿಯಲ್ ನೋಡಿ ಪ್ರತಿಕ್ರಿಯಿಸುವ ಮಹಿಳೆಯರು ನಿಜ ಜೀವನದಲ್ಲಿಯೂ ಇಂತಹದ್ದೇ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಮೈಮೇಲೆ ಆಹ್ವಾನಿಸಿಕೊಳ್ಳೊ ಮಹಿಳೆಯರು!
ಸೀರಿಯಲ್ ನೋಡುವವರ ಪೈಕಿ ಅತಿದೊಡ್ಡ ವರ್ಗದವರು ಮಹಿಳೆಯರೇ ಆಗಿದ್ದಾರೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಭಾಷೆಗಳ ಸೀರಿಯಲ್ಗಳು ಕೂಡ ಮಹಿಳಾ ಪ್ರಧಾನವೇ. ಅವರೇ ನಾಯಕಿ, ಅವರೇ ವಿಲನ್. ಗಂಡಸರು ಎನ್ನೋದು ನೆಪಕ್ಕೆ ಮಾತ್ರ. ಏಕೆಂದರೆ ಅಲ್ಲಿ ಬರುವ ಮಹಿಳೆಯರ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ನೋಡುವ ದೊಡ್ಡ ವರ್ಗವೇ ಇದೆ.
ನಿಜ ಜೀವನದಲ್ಲೂ ಹೀಗೆನಾ?
ಆದರೆ, ಸೀರಿಯಲ್ ಅನ್ನು ಅಷ್ಟು ಪ್ರೀತಿಯಿಂದ ನೋಡುವ ಇದೇ ಧಾರಾವಾಹಿ ಪ್ರೇಮಿಗಳು, ತಮ್ಮ ಮನೆಯಲ್ಲಿಯೂ ಇಂಥದ್ದೇ ಸನ್ನಿವೇಶ ಬಂದಾಗ ಮಾತ್ರ ಉಲ್ಟಾ ಹೊಡೆಯುವುದು ಇದೆ. ಸೀರಿಯಲ್ಗಳಲ್ಲಿನ ವಿಲನ್ಗಳನ್ನು ನೋಡಿ ಕೊತಕೊತ ಕುದಿಯುವ ಕೆಲವು ಮಹಿಳೆಯರು, ನಿಜ ಜೀವನದಲ್ಲಿಯೂ ವಿಲನ್ಗಳಾಗಿಯೇ ಇರುವುದು ಅವರಿಗೆ ತಿಳಿಯುವುದೇ ಇಲ್ಲ.
ಸೀರಿಯಲ್ ಪ್ರಿಯ ಮಹಿಳೆಯರು!
ಅತ್ತೆ ಅಥವಾ ಸೊಸೆ ಇಲ್ಲವೇ ನಾದಿನಿನೋ, ಅತ್ತಿಗೆಯೋ ಸೀರಿಯಲ್ಗಳಲ್ಲಿ ಕೆಟ್ಟ ಪಾತ್ರಧಾರಿಗಳಾಗಿದ್ದರೆ, ಅವರು ನಾಶವಾಗಿ ಹೋಗಲಿ ಎಂದು ಶಾಪ ಹಾಕುವ ಈ ಸೀರಿಯಲ್ ಪ್ರೇಮಿಗಳು ತಮ್ಮ ಮನೆಯ ಅತ್ತೆನೋ, ಸೊಸೆನೋ, ನಾದಿನಿನೋ, ಅತ್ತಿಗೆಗೋ ಇದೇ ರೀತಿ ವಿಲನ್ ಆಗ್ತಿರುವುದು ಗೊತ್ತೇ ಆಗಲ್ಲ.
ಅಮ್ಮನಾಗಿ ಅತ್ತೆ
ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ, ಭಾಗ್ಯಳ ಅತ್ತೆ ಕುಸುಮಾ ಭಾಗ್ಯಳಿಗೆ ಅಮ್ಮನ ಸ್ಥಾನದಲ್ಲಿದ್ದರೆ, ಸ್ವಂತ ಅಮ್ಮ ವಿಲನ್ ಆಗಿರುವಂತೆ ಕಾಣಿಸುತ್ತಿದೆ. ಭಾಗ್ಯ ಈ ಸೀರಿಯಲ್ನಲ್ಲಿ ಮದುವೆಯಾಗಿನಿಂದಲೂ ಗಂಡ ತಾಂಡವ್ನಿಂದ ನರಕವನ್ನೇ ಕಂಡವಳು. ಹೆಜ್ಜೆ ಹೆಜ್ಜೆಗೂ ಅವಮಾನ ಸಹಿಸಿಕೊಂಡವಳು. ಸಾಲದು ಎನ್ನುವುದಕ್ಕೆ ಮತ್ತೊಬ್ಬಳನ್ನು ಕಟ್ಟಿಕೊಂಡು ಹೋಗಿದ್ದಾನೆ ತಾಂಡವ್.
ಭಾಗ್ಯಳ ಲೈಫ್ನಲ್ಲಿ ಆದಿ ಎಂಟ್ರಿ
ಇದೀಗ ಆಕೆಯ ಬಾಳಲ್ಲಿ ಆದಿಯ ಎಂಟ್ರಿಯಾಗಿದೆ. ಆದಿ ಮತ್ತು ಭಾಗ್ಯಳನ್ನು ಒಂದುಮಾಡಲು ಅತ್ತೆ ಕುಸುಮಾ ಟ್ರೈ ಮಾಡುತ್ತಿದ್ದಾಳೆ. ಆದರೆ ಅಳಿಯ ಹೇಗೇ ಇರಲಿ, ಮಗಳ ಸಂಸಾರ ಅವನ ಜೊತೆಯೇ ನಡೆಯಬೇಕು, ಸಮಾಜ ಏನು ಹೇಳುತ್ತದೆ ಎಂದೆಲ್ಲಾ ಯೋಚನೆ ಮಾಡುವ ಕ್ಯಾರೆಕ್ಟರ್ ಆಗಿ ಭಾಗ್ಯಳ ಅಮ್ಮ ಸುನಂದಾ ಇದ್ದಾಳೆ.
ಸುನಂದಾ- ಕುಸುಮಾ ನಡುವೆ ತಿಕ್ಕಾಟ
ಇದೀಗ ಇದೇ ವಿಷಯಕ್ಕೆ ಸುನಂದಾ ಮತ್ತು ಕುಸುಮಾ ನಡುವೆ ತಿಕ್ಕಾಟ ಶುರುವಾಗಿದೆ. ಗಂಡ-ಹೆಂಡತಿ ಅಂದಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ, ಬೇರೊಬ್ಬಳ ಜೊತೆ ಓಡಿ ಹೋಗಿರೋ ತಾಂಡವ್ ಜೊತೆಯೇ ಮಗಳು ಸಂಸಾರ ಮಾಡಬೇಕು ಎನ್ನೋದು ಅಮ್ಮ ಸುನಂದಾ ಮಾತಾದರೆ, ತನ್ನ ಮಗನಿಂದ ದೌರ್ಜನ್ಯ ಸಹಿಸಿಕೊಂಡಿರುವ ಸೊಸೆ ಭಾಗ್ಯ ಇನ್ನುಮುಂದಾದರೂ ಚೆನ್ನಾಗಿರಲಿ, ಆದಿಯನ್ನು ಮದುವೆಯಾಗಲಿ ಎನ್ನೋಳು ಕುಸುಮಾ.
ನಿಜ ಜೀವನದ ಅಮ್ಮನಾಗಿ...
ಭಾಗ್ಯ ಅನುಭವಿಸಿದ ನೋವನ್ನು ಈ ಸೀರಿಯಲ್ನಲ್ಲಿ ಮುಂಚಿನಿಂದಲೂ ನೋಡಿಕೊಂಡು ಬಂದಿರೋ ಮಹಿಳಾ ಸೀರಿಯಲ್ ಪ್ರೇಮಿಗಳು ಇದೀಗ ಸುನಂದಾ ಆಡಿದ ಮಾತಿಗೆ ಕಿಡಿ ಕಾರುತ್ತಿದ್ದಾರೆ. ಮಗಳ ಭವಿಷ್ಯವನ್ನು ಹಾಳು ಮಾಡ್ತಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಆದರೆ ತಮ್ಮ ಮಗಳ ವಿಷಯಕ್ಕೆ ಬಂದರೂ ಹೀಗೆಯೇ ಮಾಡ್ತಾರಾ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಆಕೆಯನ್ನು ಗಂಡನಿಂದ ಮುಕ್ತಿ ಕೊಡಿಸುವ ಬಗ್ಗೆ ಯೋಚನೆ ಮಾಡ್ತಾರಾ ಅಥವಾ ಸತ್ತರೂ ಸರಿ, ಗಂಡನ ಜೊತೆನೇ ಬಾಳಬೇಕು ಎನ್ನುತ್ತಾರಾ ಎನ್ನುವುದು ಈ ಚರ್ಚೆಯ ವಿಷಯವಾಗಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

