- Home
- Entertainment
- TV Talk
- ಮುಕ್ತಾಯವಾಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್: ನಟಿ ಸುಷ್ಮಾ ರಾವ್ ಭಾವುಕ ಪೋಸ್ಟ್- ಧಾರಾವಾಹಿ ಅಂತ್ಯ ಏನು
ಮುಕ್ತಾಯವಾಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್: ನಟಿ ಸುಷ್ಮಾ ರಾವ್ ಭಾವುಕ ಪೋಸ್ಟ್- ಧಾರಾವಾಹಿ ಅಂತ್ಯ ಏನು
ಮೂರೂವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಅಂತ್ಯದ ಹಂತ ತಲುಪಿದೆ. ನಾಯಕಿ ಸುಷ್ಮಾ ಕೆ. ರಾವ್ ಅವರ ಪೋಸ್ಟ್ ಶೂಟಿಂಗ್ ಮುಕ್ತಾಯದ ಸುಳಿವು ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

ಮೂರೂವರೆ ವರ್ಷಗಳ ಪಯಣ
2022ರ ಅಕ್ಟೋಬರ್ 10ರಿಂದ ಕಲರ್ಸ್ ಕನ್ನಡದಲ್ಲಿ ಆರಂಭವಾಗಿದ್ದ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial)ಗೆ ಈಗ ಮೂರೂವರೆ ವರ್ಷ ಕಳೆದಿವೆ. ಆಗ ಮುಗಿಯತ್ತೆ, ಈಗ ಮುಗಿಯತ್ತೆ ಎಂದುಕೊಂಡಿದ್ದ ಸೀರಿಯಲ್ ಕೊನೆಗೂ ಮುಗಿಯುವ ಹಂತಕ್ಕೆ ಬಂದಿದೆ.

ಇನ್ನು ಎಳೆಯಲ್ಲ ಸೀರಿಯಲ್
ಸೀರಿಯಲ್‌ನಲ್ಲಿ ಹೀಗೆಯೇ ಆಗುತ್ತದೆ ಎಂದು ಈಗ ಸುಲಭದಲ್ಲಿ ಹೇಳಬಹುದಾಗಿದ್ದರೂ, ಸದ್ಯ ಧಾರಾವಾಹಿ ನಡೆಯುತ್ತಿರುವ ರೀತಿ ನೋಡಿದರೆ ಇನ್ನೂ ಸ್ವಲ್ಪ ಎಳೆಯುತ್ತಾರೆಯೋ ಎಂದು ಎನ್ನಿಸಿದ್ದು ಉಂಟು. ಆದರೆ ಇದೀಗ ಅದನ್ನು ಮುಗಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಆಗಲೂ ಹೇಳಲಾಗಿತ್ತು
ಈ ಹಿಂದೆ ತಾಂಡವ್ ಜೈಲಿಗೆ ಹೋದ ಮೇಲೆ, ಭಾಗ್ಯ ಮತ್ತು ಆದಿಯ ಮದುವೆಯಾದ ಮೇಲೆ ಸೀರಿಯಲ್ ಮುಗಿಯತ್ತೆ ಎಂದೇ ಹೇಳಲಾಗಿತ್ತು. ಆಗ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್ ಅವರು ಸೀರಿಯಲ್ ಮುಗಿಯಲ್ಲ ಎಂದು ಹೇಳಿದ್ದರು.
ಮಿಸ್ ಮಾಡಿಕೊಳ್ತಿದ್ದೇನೆ
ಆದರೆ, ಇದೀಗ ಖುದ್ದು ಸುಷ್ಮಾ ಅವರೇ ಈ ಬಗ್ಗೆ ಬರೆದುಕೊಂಡಿದ್ದಾರೆ. ಒಳ್ಳೆಯ ಮೂವ್ಮೆಂಟ್ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಸೀರಿಯಲ್ ಏನಾಯ್ತು
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಆದಿ ಮತ್ತು ಭಾಗ್ಯ ಖುಷಿಯಾಗಿದ್ದಾರೆ. ವಿಲನ್ ಕನ್ನಿಕಾಳ ಮುಖವಾಡ ಬಯಲಾಗಬೇಕಿದೆ. ಆದಿಯ ಚಿಕ್ಕಮ್ಮನ ವಿಚಿತ್ರ ವರ್ತನೆಯ ಕಾರಣವೂ ತಿಳಿಯಬೇಕಿದೆ. ಅದೇ ಇನ್ನೊಂದೆಡೆ, ತಾಂಡವ್ ಮತ್ತು ಶ್ರೇಷ್ಠಾ ಇಬ್ಬರಿಗೂ ಒಳ್ಳೆಯ ಬುದ್ಧಿ ಬರಬೇಕಿದೆ. ತನ್ಮಯಿ ಆದಿಯನ್ನು ಅಪ್ಪ ಎಂದು ಒಪ್ಪಿಕೊಳ್ಳಬೇಕಿದೆ.
ಇನ್ನಷ್ಟು ಕಾಲಾವಕಾಶ
ಇಷ್ಟೆಲ್ಲಾ ಮುಗಿಯಲು ಇನ್ನೂ ಸ್ವಲ್ಪ ಕಾಲಾವಲಾಶ ಬೇಕೇ ಬೇಕು. ಆದ್ದರಿಂದ ಸೀರಿಯಲ್ ಯಾವಾಗ ಮುಗಿಯತ್ತೆ ಎನ್ನುವುದು ಇನ್ನೂ ಕನ್ಫರ್ಮ್ ಆಗಿಲ್ಲವಾದರೂ ಶೂಟಿಂಗ್ ಅಂತೂ ಮುಗಿದಿರುವುದು ನಟಿ ಸುಷ್ಮಾ ಅವರ ಪೋಸ್ಟ್ನಿಂದ ತಿಳಿದು ಬರುತ್ತಿದೆ. ಇದು ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೇಮಿಗಳಿಗೆ ಬೇಸರ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

