ಭಾಗ್ಯಲಕ್ಷೀ ಈಗ 'ಪೂಜಾ' ಲಕ್ಷ್ಮೀ; ತಾಂಡವ್-ಶ್ರೇಷ್ಠಾ ಹುಡುಕಾಟದಲ್ಲಿ ವೀಕ್ಷಕರು
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮತ್ತು ಕಿಶನ್ ಮದುವೆ ಸಂಚಿಕೆಗಳು ಪ್ರಸಾರವಾಗುತ್ತಿದ್ದು, ತಾಂಡವ್ ಪಾತ್ರ ಕಡಿಮೆಯಾಗಿರುವುದಕ್ಕೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕಥಾ ನಾಯಕಿ ಭಾಗ್ಯ ತನ್ನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸ್ತಾಳೆ ಅನ್ನೋದು ಧಾರಾವಾಹಿಯ ಕಥೆ. ಆದ್ರೆ ಇದೀಗ ಧಾರಾವಾಹಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರೋದು ಪ್ರೇಕ್ಷಕರ ಕಮೆಂಟ್‌ಗಳಿಂದ ಗೊತ್ತಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ಪೂಜಾ ಮತ್ತು ಕಿಶನ್ ಮದುವೆ ಮಾಡಿಸಲು ಭಾಗ್ಯಾ ಹರಸಾಹಸಪಡುತ್ತಿದ್ದಾಳೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಪೂಜಾಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುವ ಕಿಶನ್ ಮದುವೆಯಾಗಲು ಮುಂದಾಗಿದ್ದಾನೆ.
ಕಿಶನ್ ಮತ್ತು ಪೂಜಾ ಮದುವೆಯಾಗುತ್ತಿರುವ ವಿಷಯ ತಿಳಿದ ಭಾಗ್ಯ ಮತ್ತು ಕಾಮತ್ ಕುಟುಂಬಸ್ಥರು ದೇವಸ್ಥಾನಕ್ಕೆ ದೌಡಾಯಿಸಿದ್ದಾರೆ. ಪೂಜಾಳಿಗೆ ಕಿಶನ್ ತಾಳಿ ಕಟ್ತಾಲಾ ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ತಾಂಡವ್‌ಗಾಗಿ ಹುಡುಕಾಟ
ಭಾಗ್ಯ ಮತ್ತು ತಾಂಡವ್ ನಡುವಿನ ಜಗಳವೇ ಈ ಸೀರಿಯಲ್‌ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ಆದ್ರೆ ಪೂಜಾ ಮದುವೆ ಕಥೆಯಲ್ಲಿ ತಾಂಡವ್ ಪಾತ್ರವನ್ನು ಕಡಿಮೆ ತೋರಿಸಲಾಗುತ್ತಿದೆ. ತಾಂಡವ್ ಮತ್ತು ಶ್ರೇಷ್ಠಾ ಕಾಣಿಸಿಕೊಳ್ಳದಿರೋದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.
ಇದು ಭಾಗ್ಯ ಲಕ್ಷ್ಮೀ ಅಲ್ಲ, ಪೂಜಾ ಲಕ್ಷ್ಮೀ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಪೂಜಾ-ಕಿಶನ್ ಮದುವೆಯೊಂದು ಮುಗಿದ್ರೆ ಸಾಕು. ನಾವು ತಾಂಡವ್ ಮತ್ತು ಶ್ರೇಷ್ಠಾಳನ್ನು ನೋಡಲು ಇಷ್ಡಪಡುತ್ತೇವೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.