Amruthadhaare Serial Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಒಂದೇ ವಠಾರದಲ್ಲಿದ್ದರೂ ಕೂಡ ದೂರವಾಗಿದ್ದಾರೆ. ಈಗ ಗೌತಮ್ ತಾಯಿಗೆ ಮಹಾಸತ್ಯ ತಿಳಿದು, ಹಸಿದ ಹುಲಿ ಜಯದೇವ್‌ಗೆ ಆಹಾರ ಸಿಕ್ಕಿದಂತಾಗಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ಮಗನ ಜೊತೆ ಮಾತನಾಡಬೇಡಿ, ಮುದ್ದಾಡಬೇಡಿ, ಅಂತರ ಇಟ್ಟುಕೊಳ್ಳಿ ಎಂದು ಭೂಮಿಕಾ, ಗೌತಮ್‌ಗೆ ಹೇಳಿದ್ದಾಳೆ. ಇದು ಭಾಗ್ಯಮ್ಮನ ಕಿವಿಗೆ ಬಿದ್ದಿದೆ. ಮುಂದೆ ಏನಾಯ್ತು?
ವಠಾರಕ್ಕೆ ಬಂದಿರೋ ಭೂಮಿ
ಗೌತಮ್‌ನಿಂದ, ಮನೆಯವರಿಂದ ದೂರ ಇದ್ದರೆ ಮಾತ್ರ ನಿನ್ನವರು ಉಳಿದುಕೊಳ್ತಾರೆ ಎಂದು ಅವನ ಮಲತಾಯಿ ಶಕುಂತಲಾ, ಭೂಮಿಗೆ ವಾರ್ನ್ ಮಾಡಿದ್ದಳು. ಇದಕ್ಕಾಗಿಯೇ ಅವಳು ಮನೆಯವರಿಂದ ದೂರ ಇದ್ದಾಳೆ. ಶಕುಂತಲಾ ಕುತಂತ್ರ ಗೌತಮ್‌ಗೂ ಗೊತ್ತಾಗಿದೆ, ಹೀಗಾಗಿ ಅವನು ಮನೆ ಬಿಟ್ಟು ವಠಾರದಲ್ಲಿದ್ದನು. ಈಗ ಭೂಮಿ ಕೂಡ ವಠಾರಕ್ಕೆ ಬಂದು ನೆಲೆಸಿದ್ದಾಳೆ.
ಮಗನಿಂದ ದೂರ ಆಗ್ತಿರೋ ಗೌತಮ್
ಮಗ ಆಕಾಶ್‌ಗೆ ಗೌತಮ್ ತನ್ನ ತಂದೆ ಎನ್ನೋ ಸತ್ಯ ಗೊತ್ತಾಗಿದೆ. ಹೀಗಾಗಿ ಅವನು ಗೌತಮ್‌ಗೆ ಕ್ಲೋಸ್ ಆಗಿದ್ದನು. ಅಪ್ಪ-ಮಗನ ಬಾಂಧವ್ಯ ನೋಡಿದ ಭೂಮಿ ಮಾತ್ರ, “ನಿನ್ನಿಂದಲೇ ತಂದೆಯಿಂದ ದೂರಾದೆ ಅಂತ ಮಗ ಹೇಳಿದರೆ, ನನ್ನ ದ್ವೇಷ ಮಾಡಿದರೆ ಏನು ಮಾಡಲಿ? ನೀವು ಅವನಿಂದ ದೂರ ಇರಿ” ಎಂದು ಹೇಳಿದ್ದಕ್ಕೆ, ಗೌತಮ್ ಈಗ ಮಗನಿಂದ ದೂರ ಆಗುತ್ತಿದ್ದಾನೆ.
ಗೌತಮ್ ತಾಯಿ ಕಿವಿಗೆ ಬಿದ್ದ ಸತ್ಯವೇನು?
ಗೌತಮ್ ಹಾಗೂ ಆಕಾಶ್ ದೂರ ಆಗುತ್ತಿರೋದು ನೋಡಿ ಗೆಳೆಯ ಆನಂದ್ ಬೇಸರ ಮಾಡಿಕೊಂಡಿದ್ದಾನೆ. ಇದನ್ನು ಅವನು ಪತ್ನಿ ಅಪರ್ಣಾ ಬಳಿ ಹಂಚಿಕೊಂಡಿದ್ದನು. “ಮುದ್ದಾದ ಮಗನ ಜೊತೆ ಮಾತನಾಡಬೇಡ, ಮುದ್ದಾಡಬೇಡ ಎಂದರೆ ಗೌತಮ್‌ಗೆ ಎಷ್ಟು ಕಷ್ಟ ಆಗಬಹುದು? ಗೌತಮ್ ಒಂದು ಅನಾಥಮಗುವನ್ನು ತಂದು ತನ್ನ ಮಗಳು ಎಂದು ಸಾಕುತ್ತಿದ್ದಾನೆ” ಎಂದು ಅಪರ್ಣಾ, ತನ್ನ ಪತಿ ಬಳಿ ಹೇಳಿಕೊಂಡು ಬೇಸರ ಹೊರಹಾಕಿದ್ದಾಳೆ. ಇದು ಗೌತಮ್ ತಾಯಿ ಕಿವಿಗೆ ಬಿದ್ದಿದೆ.
ಮಗನ ಸಂಸಾರ ಸರಿ ಮಾಡಬೇಕು
ವಠಾರದಲ್ಲಿ ಗೌತಮ್, ಭೂಮಿಕಾ ಒಟ್ಟಿಗೆ ಇರೋದು, ಗೌತಮ್‌ಗೆ ಅವನ ಮಗ ಸಿಕ್ಕಿರೋದು, ಗೌತಮ್-ಆಕಾಶ್ ಆತ್ಮೀಯತೆಯಿಂದ ಇರೋದು, ಗೌತಮ್‌ಗೆ ಮಗುವನ್ನು ದತ್ತು ತಗೊಂಡಿರೋ ವಿಚಾರ ಎಲ್ಲವೂ ಈಗ ಭಾಗ್ಯಮ್ಮನಿಗೆ ಗೊತ್ತಾಗಿದೆ. ಹೀಗಾಗಿ ಅವಳು ಮೊಮ್ಮಗು ನೋಡಬೇಕು, ಭೂಮಿ ಜೊತೆ ಮಾತನಾಡಿ ಮಗನ ಸಂಸಾರ ಸರಿ ಮಾಡಬೇಕು ಎಂದು ಮನೆಯಿಂದ ಹೊರಟು ಹೋಗಿದ್ದಾಳೆ.
ಮನೆಯಿಂದ ಹೊರಗಡೆ ಬಂದಿರೋ ಭಾಗ್ಯಮ್ಮ ಈಗ ಎಲ್ಲಿಗೆ ಹೋಗ್ತಾರೆ? ಒಂದು ವೇಳೆ ಕುತಂತ್ರಿ, ಕೇಡಿ ಜಯದೇವ್ ಕೈಗೆ ಸಿಗ್ತಾರಾ ಎಂದು ಕಾದು ನೋಡಬೇಕಿದೆ. ಬ್ಯಾಂಕ್ ಅಕೌಂಟ್ ಪ್ರೀಜ್ ಆಗಿದೆ ಎಂದು ಜಯದೇವ್ ಸಿಟ್ಟಿನಲ್ಲಿದ್ದಾನೆ. ಈಗ ಭಾಗ್ಯಮ್ಮ ಸಿಕ್ಕಿದರೆ, ಅವಳನ್ನು ಇಟ್ಟುಕೊಂಡು ಗೌತಮ್‌ನನ್ನು ಆಟ ಆಡಿಸುತ್ತಾನೆ. ಭಾಗ್ಯಮ್ಮ, ಅದೃಷ್ಟವಶಾತ್ ಗೌತಮ್ ಅಥವಾ ಭೂಮಿಕಾ ಕಣ್ಣಗೆ ಬಿದ್ದರೆ ಓಕೆ, ಅದನ್ನು ಬಿಟ್ಟು ಕೇಡಿಗಳ ಕಣ್ಣಿಗೆ ಬಿದ್ದರೆ ಏನು ಮಾಡೋದು? ಒಟ್ಟಿನಲ್ಲಿ ಜಯದೇವ್ ಮುಂದೆ ಏನು ಮಾಡಬಹುದು ಎಂಬ ಚಿಂತೆ ಒಂದು ಕಡೆಯಾದರೆ, ಗೌತಮ್-ಭೂಮಿಕಾ ಒಟ್ಟಿಗೆ ಬಾಳುತ್ತಾರಾ? ಅವರಿಗೆ ಕಳೆದು ಹೋಗಿರೋ ಮಗಳು ಸಿಗುತ್ತಾಳಾ ಎಂಬ ಪ್ರಶ್ನೆ ಕಾದಿದೆ.
ಪಾತ್ರಧಾರಿಗಳು
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಜಯದೇವ್- ರಾಣವ್ ಗೌಡ
ಭಾಗ್ಯಮ್ಮ-ಚಿತ್ಕಲಾ ಬಿರಾದಾರ್
ಅಪರ್ಣ- ಸ್ವಾತಿ ರಾಯಲ್
ಆನಂದ್- ಸಿಲ್ಲಿ ಲಲ್ಲಿ ಆನಂದ್
ಆಕಾಶ್- ದುಷ್ಯಂತ್ ಚಕ್ರವರ್ತಿ


