- Home
- Entertainment
- TV Talk
- Bhagyalakshmi Serialನಿಂದ ಎರಡು ದಿನ ನಿದ್ದೆ ಮಾಡದೇ ಅತ್ತಿದ್ದೇನೆ: ನೋವಿನ ದಿನಗಳ ನೆನೆದ ತನ್ವಿ
Bhagyalakshmi Serialನಿಂದ ಎರಡು ದಿನ ನಿದ್ದೆ ಮಾಡದೇ ಅತ್ತಿದ್ದೇನೆ: ನೋವಿನ ದಿನಗಳ ನೆನೆದ ತನ್ವಿ
ಸುಮಾರು ನಾಲ್ಕು ವರ್ಷಗಳ ನಂತರ 'ಭಾಗ್ಯಲಕ್ಷ್ಮಿ' ಸೀರಿಯಲ್ ಅಂತ್ಯಗೊಂಡಿದೆ. ಸೀರಿಯಲ್ ಮುಗಿದ ನೋವಿನಲ್ಲಿ ಪಾತ್ರಧಾರಿಗಳು ಕಣ್ಣೀರಾಕಿದ್ದು, ತನ್ವಿ ಪಾತ್ರಧಾರಿ ಅಮೃತಾ ಗೌಡ ಶೂಟಿಂಗ್ ಇಲ್ಲದ ನೋವನ್ನು ಮತ್ತು ತಮ್ಮ ಶೈಕ್ಷಣಿಕ ಸಾಧನೆಯನ್ನು ಹಂಚಿಕೊಂಡಿದ್ದಾರೆ.

ಕೊನೆಗೂ ಮುಗಿದ ಭಾಗ್ಯಲಕ್ಷ್ಮಿ
ಸುಮಾರು ನಾಲ್ಕು ವರ್ಷಗಳಿಂದ Bhagyalakshmi Serial ವೀಕ್ಷಕರನ್ನು ರಂಜಿಸಿದೆ. ಕೊನೆಯ ಹಂತದಲ್ಲಿ ತರಾತುರಿಯಲ್ಲಿ ಸೀರಿಯಲ್ ಮುಗಿಸಿರುವುದು, ತಾಂಡವ್ ಬಗ್ಗೆ ಏನೂ ತೋರಿಸದೇ ಫಟಾಫಟ್ ಎಂದು ಮುಗಿಸಿರುವುದಕ್ಕೆ ವೀಕ್ಷಕರಲ್ಲಿ ಅಸಮಾಧಾನ ಇದ್ದರೂ ಸೀರಿಯಲ್ ಪ್ರಿಯರು ಈ ಸೀರಿಯಲ್ ಅನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಿದ್ದಾರೆ.
ಪಾತ್ರಧಾರಿಗಳ ಸ್ಟೋರಿಯೂ ಭಿನ್ನವಲ್ಲ
ಇದು ವೀಕ್ಷಕರ ಸ್ಟೋರಿಯಾದ್ರೆ, ಇನ್ನು ಪಾತ್ರಧಾರಿಗಳಿಗೂ ಒಂದು ಸೀರಿಯಲ್ ಮುಗಿಯುತ್ತಿದೆ, ಅದೂ ನಾಲ್ಕೈದು ವರ್ಷಗಳಿಂದ ಒಂದೇ ಕುಟುಂಬದ ರೀತಿಯಲ್ಲಿ ಇದ್ದು, ಬೇರೆ ಬೇರೆ ಆಗುವುದು ಎಂದು ತುಂಬಾ ನೋವಿನ ಸಂಗತಿಯೇ. ಶಾಲಾ- ಕಾಲೇಜುಗಳಲ್ಲಿ ಕೊನೆಯ ದಿನ ಹೇಗೆ ಸ್ನೇಹಿತರು ದೂರವಾಗುವ ನೋವಿನ ವಾತಾವರಣ ಇರುತ್ತದೆಯೋ ಅದೇ ರೀತಿ ಹಲವು ನಟ-ನಟಿಯರು ಸೀರಿಯಲ್ ತಂಡವನ್ನು ಮಿಸ್ ಮಾಡಿಕೊಳ್ಳುವುದು ಇದೆ.
ಬಹುತೇಕ ನಟ-ನಟಿಯರ ಕಣ್ಣೀರು
ಭಾಗ್ಯಲಕ್ಷ್ಮಿ ಸೀರಿಯಲ್‌ನ ಕೊನೆಯ ದಿನ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್ ಸೇರಿದಂತೆ ಬಹುತೇಕ ನಟ-ನಟಿಯರು ಕಣ್ಣೀರಾಗಿರುವ ವಿಡಿಯೋ ಇದಾಗಲೇ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ತನ್ವಿ ಪಾತ್ರಧಾರಿ ಅಮೃತ ವರ್ಷಿಣಿ (ಅಮೃತಾ ಗೌಡ) ಅವರು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಎರಡು ದಿನ ನಿದ್ದೆ ಮಾಡಲಿಲ್ಲ
ಎರಡು ರಾತ್ರಿ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಶೂಟಿಂಗ್ ಮುಗಿದು ಹೋಗಿದ್ದಕ್ಕೆ ನನಗೆ ತುಂಬಾ ಬೇಸರವಾಗಿತ್ತು. ರಾತ್ರಿಯೆಲ್ಲಾ ನಿದ್ದೆಗೆಟ್ಟೆ. ಈಗಲೂ ನನಗೆ ಇದರಿಂದ ಹೊರಕ್ಕೆ ಬರಲು ಆಗ್ತಿಲ್ಲ. ನಾಳೆಯಿಂದ ಶೂಟಿಂಗ್ ಇಲ್ವಲ್ಲಾ ಎನ್ನುವ ನೋವು ಆಗಲೂ ಕಾಡಿತ್ತು, ಈಗಲೂ ಕಾಡುತ್ತಿದೆ. ಅಷ್ಟು ಚೆನ್ನಾಗಿ ನಮ್ಮ ಶೂಟಿಂಗ್ ಸೆಟ್ ಇತ್ತು ಎಂದು ಹೇಳಿದ್ದಾಳೆ.
ದ್ವಿತೀಯ ಪಿಯುಸಿಯಲ್ಲಿ ಮನೆಮಾತು
ಅಂದಹಾಗೆ ಅಮೃತಾ, ಶೂಟಿಂಗ್ ಬಿಜಿ ಶೆಡ್ಯೂಲ್ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 543 ಅಂಕ ಪಡೆದು ಸುದ್ದಿ ಮಾಡಿದ್ದಳು. ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿರುವ ಅಮೃತಾ ಗೌಡ, ಇಂಗ್ಲಿಷ್‌ನಲ್ಲಿ 81, ಎಕನಾಮಿಕ್ಸ್‌ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನು ಅಮೃತಾ ಗೌಡ ಪಡೆದುಕೊಂಡಿದ್ದಳು.
ಸರಿ ಓದ್ತಾನೇ ಇರಲಿಲ್ಲ
ಕನಸಿನಲ್ಲಿಯೂ ನಾನು ಇಷ್ಟು ತೆಗೆಯುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಡಿಸ್ಟಿಂಕ್ಷನ್ ಬರುತ್ತದೆ ಎಂದು ಗೊತ್ತಿತ್ತು. ಅಮ್ಮ ನನಗೆ ಸಿಕ್ಕಾಪಟ್ಟೆ ಪರೀಕ್ಷೆ ವೇಳೆ ಎಲ್ಲಾ ಅಮ್ಮಂದಿರಂತೆ ಟಾರ್ಚರ್ ಕೊಡ್ತಿದ್ರು. ಓದು ಓದು ಅಂತಿದ್ರು. ಅವರಿಗೂ ನಾನು ಇಷ್ಟು ತೆಗೆಯುತ್ತೇನೆ ಎಂದು ಗೊತ್ತಿರಲಿಲ್ಲ. 90 ಪರ್ಸೆಂಟ್ ಆದ್ರೂ ಬರಬೇಕು ನೋಡು ಎಂದಿದ್ರು. ನಾನು 91 ತೆಗೆದೆ ಎಂದು ಹೇಳಿದಾಗ ಅಮ್ಮ ಕಕ್ಕಾಬಿಕ್ಕಿಯಾಗಿ ಹೋದರು ಎಂದಿದ್ದಳು ಅಮೃತಾ. ಅಮ್ಮ ಕೂಡ ಮಾತನಾಡಿ, ನಾನು ಅವಳಿಗೆ ಪರೀಕ್ಷೆ ವೇಳೆ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದೆ. ಸರಿ ಓದ್ತಾನೇ ಇರಲಿಲ್ಲ. ಅದಕ್ಕೆ ಓದು ಓದು ಅಂತ ಹಿಂಸೆ ಮಾಡ್ತಿದ್ದೆ. ತುಂಬಾ ಖುಷಿಯಾಗ್ತಿದೆ ಎಂದಿದ್ದಳು ತನ್ವಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

