- Home
- Entertainment
- TV Talk
- Amruthadhaare: ಮಿಂಚು ಸತ್ಯ ಗೊತ್ತಾದ ಬೆನ್ನಲ್ಲೇ ಭೂಮಿಕಾ- ಗೌತಮ್ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
Amruthadhaare: ಮಿಂಚು ಸತ್ಯ ಗೊತ್ತಾದ ಬೆನ್ನಲ್ಲೇ ಭೂಮಿಕಾ- ಗೌತಮ್ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
ಅಮೃತಧಾರೆ ಧಾರಾವಾಹಿಯಲ್ಲಿ, ಮಿಂಚುವನ್ನು ಮಹಿಮಾಗೆ ದತ್ತು ನೀಡಲು ಮುಂದಾಗಿದ್ದ ಭೂಮಿಕಾ-ಗೌತಮ್‌ಗೆ ಈಗ ಸತ್ಯ ತಿಳಿದಿದೆ. ಹಲವು ತಿರುವುಗಳ ನಂತರ ಮಿಂಚು ತಮ್ಮದೇ ಮಗಳು ಎಂದು ಗೊತ್ತಾದಾಗ, ಈಗ ದತ್ತು ಕೊಡಿ ನೋಡೋಣ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.

ಮಿಂಚು ದತ್ತು
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಮನಸ್ಸು ಇಲ್ಲದಿದ್ದರೂ ಮಿಂಚುವನ್ನು ಮಹಿಮಾಗೆ ದತ್ತು ಕೊಡಲು ಭೂಮಿಕಾ ಮತ್ತು ಗೌತಮ್ ಮುಂದಾಗಿದ್ದರು. ಮಹಿಮಾಳ ಸ್ಥಿತಿಯಿಂದ ಅವರು ಈ ಕ್ರಮಕ್ಕೆ ಮುಂದಾಗಿದ್ದರೂ ಇದು ವೀಕ್ಷಕರ ಭಾರಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಮಿಂಚು ಸಿಕ್ಕಳು
ಕೊನೆಗೆ ಸ್ಟೋರಿ ಎಲ್ಲೆಲ್ಲೋ ಹೋಯಿತು. ಮಿಂಚುವನ್ನು ಜೈದೇವ್ ಕಿಡ್‌ನ್ಯಾಪ್ ಮಾಡಿದ. ನಕಲಿ ಅಪ್ಪ- ಅಮ್ಮನಿಂದಾಗಿ ಗೌತಮ್ ಅರೆಸ್ಟ್ ಆದ. ಭೂಮಿಕಾ ಫೈಟಿಂಗ್ ಮಾಡಿ ಮಿಂಚುವನ್ನು ವಾಪಸ್ ಕರೆದುಕೊಂಡು ಬಂದಳು.
ವಿವಿಧ ನಟರ ಎಂಟ್ರಿ
ಇದೀಗ ಮತ್ತೊಂದು ರೋಚಕ ಘಟ್ಟದಲ್ಲಿ ಮಿಂಚುನೇ ಮಗು ಎಂದು ಹೇಳಲು ಭೂಮಿಕಾಳ ಡಿಲೆವರಿ ಮಾಡಿಸಿದ್ದ ಕರ್ಣ, ಪಾರು ಆ ಸಮಯದಲ್ಲಿ ಅಲ್ಲಿಯೇ ಇದ್ದ ಅಣ್ಣಯ್ಯ ಎಲ್ಲರೂ ಬಂದಿದ್ದಾರೆ.
ಶಕುನಿ ಮಾಮಾ ಬಂದ
ಅದೇ ಇನ್ನೊಂದೆಡೆ, ಮಿಂಚುನೇ ಇವರ ಮಗಳು ಎಂದು ಅರಿತಿರೋ ಶಕುನಿಮಾಮಾ ಜೈದೇವನ ಬಂಧನದಲ್ಲಿದ್ದ. ಈಗ ಜೈದೇವನ ತಲೆಗೆ ಹೊಡೆದು ಅವನೂ ಬಂದಿದ್ದಾನೆ.
ಕೊನೆಗೂ ಗೊತ್ತಾಯ್ತು ಸತ್ಯ
ಕೊನೆಗೂ ಎಲ್ಲರೂ ಸೇರಿ ಮಿಂಚುನೇ ಗೌತಮ್ ಮತ್ತು ಭೂಮಿಕಾ ಮಗಳು ಎಂದು ಹೇಳಿದ್ದಾರೆ. ಇಷ್ಟು ಗೊತ್ತಾಗುತ್ತಿದ್ದಂತೆಯೇ ನೆಟ್ಟಿಗರು ಗರಂ ಆಗಿದ್ದಾರೆ.
ದತ್ತು ಕೊಡಿ ನೋಡೋಣ
ಅದ್ಯಾಕೆ ಎಂದರೆ, ಮಿಂಚು ಅಷ್ಟು ಬೇಡಿಕೊಂಡರೂ ಮುಗ್ಧ ಕಂದನ ಮನಸ್ಸಿಗಿಂತ ಹಠ ಮಾಡ್ತಿರೋ ಮಹಿಮಾನೇ ಹೆಚ್ಚಾಗಿದ್ದಳಲ್ಲ, ಈಗ ಸ್ವಂತ ಮಗಳು ಅಂತ ಗೊತ್ತಾಯ್ತಲ್ಲ, ಹಾಗಿದ್ರೆ ಅವಳನ್ನು ದತ್ತು ಕೊಡಿ ನೋಡೋಣ, ನಿಮ್ಮ ಪ್ರೀತಿಯನ್ನು ಪರೀಕ್ಷೆ ಮಾಡೋಣ ಎನ್ನುತ್ತಿದ್ದಾರೆ. ಸ್ವಂತ ಮಗಳು ಎಂದು ಗೊತ್ತಾದ ತಕ್ಷಣ ದತ್ತು ಕೊಡಲು ಮನಸ್ಸು ಬರಲ್ಲ ನೋಡಿ. ಆಗೊಂದು ಈಗೊಂದು ಅಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

