- Home
- Entertainment
- TV Talk
- Jodi No 1: ಬೆಡ್ರೂಂ ವಿಷ್ಯ ಬೇಡ ಕಣೆ ಎಂದ್ರೂ ವೇದಿಕೆ ಮೇಲೆ ಹೇಳಬಾರದ್ದು ಹೇಳಿದ ನಟಿ ನಯನಾ
Jodi No 1: ಬೆಡ್ರೂಂ ವಿಷ್ಯ ಬೇಡ ಕಣೆ ಎಂದ್ರೂ ವೇದಿಕೆ ಮೇಲೆ ಹೇಳಬಾರದ್ದು ಹೇಳಿದ ನಟಿ ನಯನಾ
ಕೆಲವೊಂದು ರಿಯಾಲಿಟಿ ಷೋಗಳಲ್ಲಿ ತೀರಾ ವೈಯಕ್ತಿಕ ವಿಷಯಗಳನ್ನು ಹೈಲೈಟ್ ಮಾಡುವುದು, ಇಂಥ ವಿಷಯಗಳನ್ನು ಚರ್ಚಿಸುವಂತೆ ಮಾಡುತ್ತಿರುವ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಲೇ ಇದ್ದು, ಇದೀಗ ನಯನಾ ನಾಗರಾಜ್ ಮತ್ತು ಸುಹಾಸ್ ಶಿವಣ್ಣ ಸೆಲೆಬ್ರಿಟಿ ಜೋಡಿಗಳ ವಿಷ್ಯ ಚರ್ಚೆಗೆ ಗ್ರಾಸವಾಗಿದೆ.

ಕಾಂಟ್ರವರ್ಸಿ ಮತ್ತು ಟಿಆರ್ಪಿ
ಒಂದು ರಿಯಾಲಿಟಿ ಷೋ ಕಾಂಟ್ರವರ್ಸಿ ಆದರೇನೇ ಅದಕ್ಕೆ ಟಿಆರ್ಪಿ ಎನ್ನುವುದು ಎಂದಿಗೂ ಗೊತ್ತಿರುವ ವಿಷಯವೇ. ಕಾಂಟ್ರವರ್ಸಿ ಮಾಡಿರುವ ವಿಡಿಯೋಗಳೇ ಹೆಚ್ಚೆಚ್ಚು ಜನ ನೋಡಿ, ಲೈಕ್ ಮಾಡಿ ಆನಂದಿಸ್ತಾರಲ್ಲ. ಇದು ಕೂಡ ಅದೇ ರೀತಿ. ಅದಕ್ಕಾಗಿಯೇ ಇಲ್ಲಿಗೆ ಬರುವ ಸ್ಪರ್ಧಿಗಳಿಗೆ ಒಂದಿಷ್ಟು ಮೊದಲೇ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಹೀಗೆಯೇ ಮಾತನಾಡಬೇಕು ಎಂದು ಹೇಳಿರಲಾಗುತ್ತದೆ. ಒಟ್ಟಿನಲ್ಲಿ ಆ ಸ್ಕ್ರಿಪ್ಟೆಡ್ ಡೈಲಾಗ್ಗಳು ನೈಜವಾಗಿ ಕಾಣಿಸಬೇಕು ಎನ್ನುವುದು ಹಲವು ರಿಯಾಲಿಟಿ ಷೋಗಳ ಬಂಡವಾಳ.
ಎಲ್ಲವೂ ಸ್ಕ್ರಿಪ್ಟೆಡ್?
ಅದಕ್ಕೆ ತಕ್ಕಂತೆ ಸ್ಪರ್ಧಿಗಳು ಕೂಡ ನಡೆದುಕೊಳ್ಳುತ್ತಾರೆ. ಅದು ಸಂಗೀತ, ನೃತ್ಯ ಷೋಗಳಿಂದ ಹಿಡಿದು, ಪುಟಾಣಿಗಳು ಆಡುವ ಮಾತಿನಿಂದ ಹಿಡಿದು, ಕಾಂಟ್ರವರ್ಸಿ ಆಗುವ ಮಾತುಗಳವರೆಗೆ ಅಲ್ಲಿ ಇರುವುದು ಬಹುತೇಕ ಸ್ಕ್ರಿಪ್ಟೆಡ್ಗಳೇ ಎನ್ನುವುದು ರಿಯಾಲಿಟಿ ಷೋಗಳಿಗೆ ಹೋಗಿ ಬಂದವರು ಬಯಲು ಮಾಡಿರುವುದು ಇದೆ. ಆದರೆ ವೀಕ್ಷಕರು ಮಾತ್ರ ಅಲ್ಲಿಯೇ ಏನೋ ಆಗಿಬಿಟ್ಟಿದೆ ಎನ್ನುವ ರೀತಿಯಲ್ಲಿ ಕುತೂಹಲದಿಂದ ಕಣ್ಣು-ಬಾಯಿ ಬಿಟ್ಟು ನೋಡುವುದು ಇದೆ.
ಮಾತಿನ ಹಿಂದಿರೋ ಸತ್ಯ ಏನು?
ಇಂಥ ಷೋಗಳಿಗೆ ಬರುವ ಸ್ಪರ್ಧಿಗಳ ಬಗ್ಗೆ ಇಂಚಿಂಚು ಮಾಹಿತಿ ಇರುವ, ಅವರ ಹಿನ್ನೆಲೆ ಎಲ್ಲವನ್ನೂ ತಿಳಿದಿರುವ ತೀರ್ಪುಗಾರರು, ವೇದಿಕೆಯ ಮೇಲೆಯೇ ಮೊದಲ ಬಾರಿ ಕೇಳಿ ತಿಳಿದವರಂತೆ ಕಣ್ಣೀರು ಹಾಕುವುದು, ಮೊದಲು ಈ ವಿಷ್ಯ ಗೊತ್ತೇ ಇಲ್ಲ ಎನ್ನುವಂತೆ ನಟಿಸುವುದು, ಏನೋ ಅದ್ಭುತ ಎನ್ನುವಂತೆ ರಿಯಾಕ್ಟ್ ಮಾಡುವುದು, ಅದೇ ಸಮಯದಲ್ಲಿ ಅದೇ ಜಡ್ಜ್ ಮೇಲೆ ಕ್ಯಾಮೆರಾ ಫೋಕಸ್ ಆಗುವುದು... ಇವೆಲ್ಲವೂ ರಿಯಾಲಿಟಿ ಷೋಗಳಲ್ಲಿ ಮಾಮೂಲು. ಜನರು ಇಂಥದ್ದನ್ನು ಎಂಜಾಯ್ ಮಾಡುವ ಕಾರಣ, ಅವೆಲ್ಲವೂ ಅನಿವಾರ್ಯವೂ ಆಗಿದೆ.
ಬೆಡ್ರೂಂ ವಿಷ್ಯ ಬಂತು!
ಇಂತಿಪ್ಪ ರಿಯಾಲಿಟಿ ಷೋಗಳಲ್ಲಿ ಈಗ ಬೆಡ್ರೂಮ್ ವಿಷ್ಯನೂ ವೇದಿಕೆ ಮೇಲೆ ತಂದಿರುವುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಇವೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದೇ ನಯನಾ ನಾಗರಾಜ್ ಮತ್ತು ಸುಹಾಸ್ ಶಿವಣ್ಣ ಅವರ ನಡುವಿನ ಸಂಭಾಷಣೆ ಪ್ರೊಮೋ ಇದಾಗಿದೆ.
ಸೆಲೆಬ್ರಿಟಿಗಳಿಗೆ ಇವೆಲ್ಲಾ ಬೇಕಾ?
'ಗಿಣಿರಾಮ' ಧಾರಾವಾಹಿ ಖ್ಯಾತಿಯ ನಟಿ ನಯನಾ ಮತ್ತು ಗಾಯಕ ಸುಹಾಸ್ ಅವರು ತಮ್ಮ ಅದ್ಭುತ ಹಾಡುಗಾರಿಕೆ ಮತ್ತು ಜೋಡಿಯ ಹೊಂದಾಣಿಕೆಯಿಂದ ವೀಕ್ಷಕರ ಮನಗೆದ್ದಿದ್ದಾರೆ. ಇವರನ್ನು ಜೋಡಿ ನಂಬರ್ 1ಗೆ ಆಹ್ವಾನಿಸಲಾಗಿದೆ.ಅಲ್ಲಿ ಮಾತಿಗೆ ಮಾತು ಬೆಳೆದು, ನನಗೆ ಪಾಪು ಬೇಕು ಎಂದು ಹೇಳಿದ್ರೂ ಕೇಳಲ್ಲ ಎಂದು ನಯನಾ ಹೇಳಿದ್ರೆ, ಸುಹಾಸ್ ಅವರು ಇವೆಲ್ಲಾ ಪ್ರೈವೇಟ್ ವಿಷ್ಯ ಇಲ್ಯಾಕೆ, ಮನೆಯಲ್ಲಿ ಮಾತನಾಡೋಣ ಎಂದಿದ್ದಾರೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು?
ಅಷ್ಟಕ್ಕೂ ಇಂಥ ಸೆಲೆಬ್ರಿಟಿಗಳಿಗೆ ಇಂಥ ವಿಷಯಗಳೆಲ್ಲಾ ವೇದಿಕೆಯ ಮೇಲೆ ಮಾತನಾಡಬಾರದು ಎಂದು ತಿಳಿಯದಷ್ಟು ಮೂರ್ಖರಲ್ಲ. ಆದರೆ ರಿಯಾಲಿಟಿ ಷೋಗಳಿಗೆ ಬಂದಾಗ ಒಂದಷ್ಟು ನಿಯಮಗಳನ್ನು ಅವರು ಫಾಲೋ ಮಾಡಬೇಕಿದೆ. ಮೊನ್ನೆ ನಟಿ ಗೀತಾ ಭಾರತಿ ವಿಷ್ಯದಲ್ಲಿಯೂ ಇದೇ ರೀತಿ ಆಗಿತ್ತು. ಆದ್ದರಿಂದ ಇವುಗಳನ್ನು ತುಂಬಾ ಸೀರಿಯಸ್ ಆಗಿ ಯಾರೂ ತೆಗೆದುಕೊಳ್ಳಬೇಡಿ, ಎಲ್ಲವೂ ನಾಟಕ ಎಂದು ಹಲವರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

