ರಾಯಲ್ ಎನ್ಫೀಲ್ಡ್ ಚಾಲೆಂಜ್ ಸ್ವೀಕರಿಸಿ ಬೈಕ್ ಓಡಿಸಿದ ಭಾಗ್ಯ ಮಗಳು ತನ್ವಿ
ಭಾಗ್ಯಲಕ್ಷ್ಮಿ ಸೀರಿಯಲ್ ನ ಇಬ್ಬರು ಮುದ್ದಾದ ಮಕ್ಕಳು ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿ ಸೀರಿಯಲ್ ನಲ್ಲಿ ಅಲ್ಲ ರಿಯಲ್ ಲೈಫ್ ಚಾಲೆಂಜ್ ಪೂರ್ಣಗೊಳಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಶೂಟಿಂಗ್ ಬಿಡುವಿನಲ್ಲಿ ಬೈಕ್ ಕೀಗಾಗಿ ಹೋರಾಟ
ಭಾಗ್ಯಲಕ್ಷಿ ಸೀರಿಯಲ್ ನ ಭಾಗ್ಯಾ ಮಗಳು ತನ್ವಿ ಅಲಿಯಾಸ್ ಅಮೃತಾ ಗೌಡ ಪಿಯುಸಿ ಮುಗಿಸಿ ಈಗಾಗಲೇ ಯೌವನಾವಸ್ಥೆಗೆ ಕಾಲಿಟ್ಟಾಗಿದೆ. ಈಗ ಅವರಿಗೆ ಲೈಸೆನ್ಸ್ ಸುಲಭವಾಗಿ ಸಿಗುತ್ತೆ. ಅವರು ಬೈಕ್, ಕಾರ್ ಸೇರಿದಂತೆ ಯಾವುದೇ ವಾಹನ ಓಡಿಸಬಹುದು. ಭಾಗ್ಯಾ ಸೀರಿಯಲ್ ಶೂಟಿಂಗ್ ಗೆ ಬಿಡುವ ಪಡೆದಿದ್ದ ಅಮೃತಾ ಗೌಡ, ರಾಯಲ್ ಎನ್ಫೀಲ್ಡ್ ಸ್ಟ್ಯಾಂಡ್ ತೆಗೆದಿದ್ದಾರೆ.
ಸೆಂಟ್ರಲ್ ಸ್ಟ್ಯಾಂಡ್ ತೆಗೆದ ಅಮೃತಾ
ಮಲ್ಲೇಶ್ ತಮ್ಮ ಮಲ್ಲೇಶ್ ಮೇಕಪ್ ಇನ್ಸ್ಟಾಗ್ರಾಮ್ ನಲ್ಲಿ ಅಮೃತಾ ಹಾಗೂ ಗುಂಡಣ್ಣನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತನ್ವಿಗೆ ಬೈಕ್ ಕೀ ಬೇಕಾಗಿದೆ. ಆದ್ರೆ ಬೈಕ್ ಕೀ ನೀಡುವ ಮುನ್ನ ಮಲ್ಲೇಶ್, ಚಾಲೆಂಜ್ ನೀಡಿದ್ದಾರೆ. ರಾಯಲ್ ಎನ್ಫೀಲ್ಡ್ ಸೆಂಟ್ರಲ್ ಸ್ಟ್ಯಾಂಡ್ ತೆಗೆದ್ರೆ ಮಾತ್ರ ಕೀ ಕೊಡೋದು ಎಂದಿದ್ದಾರೆ. ಅದಕ್ಕೆ ಯಸ್ ಎಂದ ತನ್ವಿ, ರಾಯಲ್ ಎನ್ಫೀಲ್ಡ್ ಸೆಂಟ್ರಲ್ ಸ್ಟ್ಯಾಂಡ್ ತೆಗೆಯುತ್ತಾರೆ.
ಸ್ಟ್ಯಾಂಡ್ ಹಾಕುವ ಚಾಲೆಂಜ್
ಇಷ್ಟಕ್ಕೆ ಮಲ್ಲೇಶ್, ಬೈಕ್ ಕೀ ನೀಡೋದಿಲ್ಲ. ತನ್ವಿ ಹಾಗೂ ಗುಂಡಣ್ಣನಿಗೆ ಇನ್ನೊಂದು ಚಾಲೆಂಜ್ ನೀಡ್ತಾರೆ. ಇಬ್ಬರೂ ರಾಯಲ್ ಎನ್ಫೀಲ್ಡ್ ಬೈಕ್ ಸೆಂಟ್ರಲ್ ಸ್ಟ್ಯಾಂಡ್ ಹಾಕ್ಬೇಕು. ಆರಂಭದಲ್ಲಿ ಇಬ್ಬರೂ ಕಷ್ಟಪಡ್ತಾರೆ. ಆದ್ರೆ ಹೇಗೆ ಹಾಕೋದು ತಿಳಿಯೋದಿಲ್ಲ. ನಂತ್ರ ಯೂಟ್ಯೂಬ್ ವಿಡಿಯೋ ನೋಡ್ತಾರೆ. ನಂತ್ರ ವಾಪಸ್ ಬಂದು ಬೈಕ್ ಸೆಂಟ್ರಲ್ ಸ್ಟ್ಯಾಂಡ್ ಹಾಕುತ್ತಾರೆ. ವಿಡಿಯೋ ನೋಡಿ ಸ್ಟ್ಯಾಂಡ್ ಹಾಕೋದನ್ನು ಕಲಿತ್ವಿ ಅಂತ ಗುಂಡಣ್ಣ ಹೇಳ್ತಾರೆ.
ಬೈಕ್ ಓಡಿಸಿದ ತನ್ವಿ
ಸ್ಟ್ಯಾಂಡ್ ತೆಗೆದು, ಸ್ಟ್ಯಾಂಡ್ ಹಾಕಿ ಎಲ್ಲ ಸಾಹಸ ಮಾಡಿದ ಮೇಲೆ ಕೊನೆಗೂ ತನ್ವಿಗೆ ಬೈಕ್ ಕೀ ಸಿಕ್ಕಿದೆ. ಎಲ್ಲ ಬೈಕ್ ಓಡಿಸ್ತೇನೆ. ನಾನು ಈಗ 18 ಅಂತ ತನ್ವಿ ಹೇಳಿದ್ದಾರೆ. ನಂತ್ರ ತನ್ವಿ ಬೈಕ್ ಓಡಿಸಿದ್ದಾರೆ. ಆದ್ರೆ ತನ್ವಿ ರಾಯಲ್ ಎನ್ಫೀಲ್ಡ್ ಬೈಕ್ ಓಡಿಸೋದಿಲ್ಲ. ಅದ್ರ ಬದಲು ಹೊಂಡಾ ಗಾಡಿಯನ್ನು ತನ್ವಿ ಓಡಿಸಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್, ತನ್ವಿಯನ್ನು ಮೆಚ್ಚಿಕೊಂಡಿದ್ದಾರೆ. ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ. ನೆಕ್ಟ್ಸ್ ಲೆವಲ್ ಬೈಕರ್ಸ್ ಅಂತ ಕಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಅಮೃತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್ ಕಲಾವಿದರ ಜೊತೆ ಆಗಾಗ ವಿಡಿಯೋಗಳನ್ನು ಅಮೃತಾ ಪೋಸ್ಟ್ ಮಾಡ್ತಿರುತ್ತಾರೆ. ಭಾಗ್ಯಾ, ತನ್ವಿ, ಗುಂಡಣ್ಣನ ವಿಡಿಯೋಗಳು ಅಭಿಮಾನಿಗಳ ಇಷ್ಟವಾಗುತ್ವೆ. ಕೆಲ ದಿನಗಳ ಹಿಂದೆ ತನ್ವಿ, ಗುಂಡಣ್ಣನನ್ನು ಎತ್ತುವ ಚಾಲೆಂಜ್ ಸ್ವೀಕರಿಸಿದ್ರು. ಆದ್ರೆ ಅದು ಸಾಧ್ಯವಾಗ್ಲಿಲ್ಲ. ಈ ಬಾರಿ ಬೈಕ್ ಚಾಲೆಂಜ್ ನಲ್ಲಿ ತನ್ವಿ ಗೆದ್ದಿದ್ದಾರೆ.
ಹೀರೋಯಿನ್ ಆಗುವ ಆಸೆ
ಬಾಲ ನಟಿಯಾಗಿ ಕಿರು ತೆರೆ ಪ್ರವೇಶ ಮಾಡಿರುವ ಅಮೃತಾ ಗೌಡಾಗೆ ಸ್ಯಾಂಡಲ್ವುಡ್ ನಲ್ಲಿ ಹೀರೋಯಿನ್ ಆಗುವ ಆಸೆ ಇದೆ. ಸದ್ಯ ಕಿರುತೆರೆಯಲ್ಲಿ ತಮ್ಮ ನಟನೆ ಮೂಲಕ ಅಮೃತಾ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತನ್ವಿ ಹಾಗೂ ಗುಂಡಣ್ಣನ ಕಾಂಬಿನೇಷನ್ ಜನರಿಗೆ ಇಷ್ಟವಾಗುತ್ತದೆ. ತನ್ವಿ ಆಗಾಗ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ್ರೂ ಜನರಿಗೆ ಅವರ ಅಭಿನಯ ಇಷ್ಟವಾಗಿದೆ.
ಗಮನ ಸೆಳೆದಿದ್ದ ಅಮೃತಾ ಗೌಡ
2025ರ ಏಪ್ರಿಲ್ ನಲ್ಲಿ ತನ್ವಿ ಹೆಚ್ಚು ಸುದ್ದಿಗೆ ಬಂದಿದ್ರು. ಅದಕ್ಕೆ ಕಾರಣ ಅವರ ಪಿಯುಸಿ ರಿಸಲ್ಟ್. 600 ಮಾರ್ಕ್ಸ್ ಗೆ 543 ಅಂಕ ಗಳಿಸಿದ್ದ ತನ್ವಿ ಸಾಧನೆಯನ್ನು ಎಲ್ಲರೂ ಹೊಗಳಿದ್ದರು. ಶೂಟಿಂಗ್ ಮಾಡ್ತಾನೇ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದ ತನ್ವಿ ಶೀಘ್ರವೇ ಸ್ಯಾಂಡಲ್ವುಡ್ ಗೆ ಎಂಟ್ರಿ ಆಗುವ ಸಾಧ್ಯತೆಯೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

