- Home
- Entertainment
- TV Talk
- Bhagyalakshmi Serialಗೆ 3 ವರ್ಷ... ಇನ್ನೆರಡು ತಿಂಗಳಲ್ಲಿ ಮತ್ತೊಂದು ದಾಖಲೆಗೆ ರೆಡಿಯಾಗ್ತಿದೆ ಧಾರಾವಾಹಿ
Bhagyalakshmi Serialಗೆ 3 ವರ್ಷ... ಇನ್ನೆರಡು ತಿಂಗಳಲ್ಲಿ ಮತ್ತೊಂದು ದಾಖಲೆಗೆ ರೆಡಿಯಾಗ್ತಿದೆ ಧಾರಾವಾಹಿ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ ಧಾರಾವಾಹಿಗೆ 3 ವರ್ಷ ತುಂಬಿದೆ. ಸೀರಿಯಲ್ ಇದೀಗ ಹೊಸ ಹೊಸ ತಿರುವುಗಳೊಂದಿಗೆ, ಹೊಸ ಜನರ ಎಂಟ್ರಿಯೊಂದಿಗೆ ಮನರಂಜನೆ ನೀಡುತ್ತಿದೆ. ಸದ್ಯದಲ್ಲೇ ಭಾಗ್ಯ ಮದುವೆ ಕೂಡ ಆಗಬಹುದು. ಇನ್ನೆರಡು ತಿಂಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದೆ ಈ ತಂಡ.

ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ಭಾಗ್ಯಲಕ್ಷ್ಮಿ. ಭಾಗ್ಯ ಅನುಭವಿಸುತ್ತಿರುವ ಕಷ್ಟಗಳನ್ನು, ಜೀವನದ ನೋವುಗಳನ್ನೆ ಹಂತ ಹಂತವಾಗಿ ತಿಳಿಸುತ್ತಾ ಬಂದ ಧಾರಾವಾಹಿಗೆ ಇದೀಗ ಬರೋಬ್ಬರು ಮೂರು ವರ್ಷಗಳು ತುಂಬಿವೆ.
3 ವರ್ಷದ ಸಂಭ್ರಮ
ಒಂದಾದ ಮೇಲೆ ಒಂದರಂತೆ ತಿರುವುಗಳು, ಹೊಸ ಹೊಸ ಪಾತ್ರಗಳ ಎಂಟ್ರಿ. ಸೊಸೆಗೆ ಮೋಸ ಮಾಡಿ, ಬೇರೆ ಮದುವೆಯಾದ ಮಗನನ್ನು ಮನೆಯಿಂದಲೇ ಹೊರ ಹಾಕಿರುವ ಕುಸುಮತ್ತೆ ಮತ್ತು ಮಾವ ಸೊಸೆಯನ್ನು ಮಗಳ ರೀತಿಯಲ್ಲಿ ನೋಡುಕೊಳ್ಳುತ್ತಿದ್ದಾರೆ. ಇದೇ ಕಥೆಗೆ ಈಗ ಮೂರು ವರ್ಷಗಳ ಸಂಭ್ರಮ.
1000 ಸಂಚಿಕೆಗೆ ಭಾಗ್ಯಲಕ್ಷ್ಮಿ ರೆಡಿ
ಇದೀಗ ಭಾಗ್ಯಲಕ್ಷ್ಮೀ ಧಾರಾವಾಹಿ ಮತ್ತೊಂದು ದಾಖಲೆಗೆ ರೆಡಿಯಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರ್ಣಗೊಳಿಸುತ್ತಿದೆ. ಆ ಮೂಲಕ ಮತ್ತಷ್ಟು ತಿರುವುಗಳೊಂದಿಗೆ ಕತೆ ಮುಂದುವರೆಯಲಿದೆ.
ಆರಂಭವಾಗಿದ್ದು ಯಾವಾಗ?
ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯ ಮತ್ತು ಲಕ್ಷ್ಮೀ ಎನ್ನುವ ಅಕ್ಕ ತಂಗಿಯರ ಕಥೆಯಾಗಿ 2022ರ ಅಕ್ಟೋಬರ್ 10 ರಂದು ಆರಂಭವಾದ ಧಾರಾವಾಹಿ. ಸದ್ಯ ಈ ಧಾರಾವಾಹಿ 886 ಸಂಚಿಕೆಗಳನ್ನು ಪೂರ್ಣಗೊಳಿಸಿ. 1000 ಸಂಚಿಕೆಯತ್ತ ದಾಪುಗಾಲಿಡುತ್ತಿದೆ.
ಶುಭ ಕೋರಿದ ವೀಕ್ಷಕರು
ಈ ಕುರಿತು ಸಂಭ್ರಮಿಸುತ್ತಿರುವ ವೀಕ್ಷಾಕ್ರು ಸೀರಿಯಲ್ ತಂಡಕ್ಕೆ ಶುಭ ಕೋರಿ, ಭಾಗ್ಯಲಕ್ಷ್ಮಿ ಧಾರವಾಹಿ ಮೊದಲಿನಿಂದಲೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಾ ಬಂದಿದೆ. ನಾನು ಒಂದು ದಿನ ಕೂಡ ಮಿಸ್ ಮಾಡ್ದೆ ನೋಡುತ್ತೇನೆ. ಕಲರ್ಸ್ ಕನ್ನಡದಲ್ಲಿ 7.00ಸ್ಲಾಟ್ ನಲ್ಲಿ ಪುಟ್ಟಗೌರಿ ಮಂಗಳ ಗೌರಿ ಸೇರಿ 3090ಸಂಚಿಕೆಗಳಾಗಿತ್ತು. ಹಾಗೇನೇ ಭಾಗ್ಯಲಕ್ಷ್ಮಿ ಕೂಡ 2000 ಸಂಚಿಕೆಗಳಾಗಲಿ ಎಂದು ಹಾರೈಸಿದ್ದಾರೆ.
ಅತ್ತೆ ಸೊಸೆಯನ್ನು ಮೆಚ್ಚಿದ ವೀಕ್ಷಕರು
ಮತ್ತೊಬ್ಬರು ಕಾಮೆಂಟ್ ಮಾಡಿ ನಿಜವಾಗಿ ಹೇಳೋದಾದ್ರೆ, ನನ್ನ ನೆಚ್ಚಿನ ಸೀರಿಯಲ್ ಭಾಗ್ಯಲಕ್ಷ್ಮಿ ಆಗಿದ್ದು, ಅದರಲ್ಲಿ ಕುಸುಮ ಅಮ್ಮ ಅಂದ್ರೆ ಮಹಾರಾಣಿ ತರ ಹಾಗೆ. ಭಾಗ್ಯ ಅಕ್ಕ ಮತ್ತು ತಾಂಡವ್ ನಡುವಿನ ದಾಂಪತ್ಯ ಸರಿ ಇಲ್ಲ. ಒಂದು ಹೆಣ್ಣು ಯಾರ ಬಳಿಯೂ ಬೇಡದೇ, ತಾವೇ ಏನು ಬೇಕಾದ್ರೂ ಸಾಧನೆ ಮಾಡಬಹುದು ಎಂದು ಸಮಾಜದಲ್ಲಿ ತೋರಿಸಿಕೊಟ್ಟಿದ್ದಾರೆ ಈ ತಂಡ. SSLC exam ಬರೆಯುವುದು ಆಗಿರಲಿ, ಅತ್ತೆ ಸೊಸೆ ಭಾಂದವ್ಯ ಆಗಿರಲಿ, ಅಮ್ಮ ಮಗ ಪ್ರೀತಿ ಆಗಿರಲಿ ಎಲ್ಲವನ್ನೂ ತೋರಿಸಿದ್ದಾರೆ. ನನ್ನ ಪ್ರಕಾರ ಹೆಚ್ಚಿನ ಜನರಿಗೆ ಭಾಗ್ಯಲಕ್ಷ್ಮಿ ಅಂದ್ರೆ ಅಲರ್ಜಿ ಅನ್ಸುತ್ತೆ. ಆದರೆ ಭಾಗ್ಯಲಕ್ಷ್ಮಿ ಸೀರಿಯಲ್ ಇಂದ ನೂರಾರು ವಿಷಯಗಳನ್ನು ಸಮಾಜಕ್ಕೆ ಒಳ್ಳೆ ಸಂದೇಶವನ್ನು ನೀಡಿದ್ದಾರೆ. ಮತ್ತಷ್ಟು ಎಪಿಸೋಡ್ ಗಳೊಂದಿಗೆ ಮೂಡಿ ಬರಲಿ ಎಂದು ಹಾರೈಸಿದ್ದಾರೆ.
ಯಾರೆಲ್ಲಾ ನಟಿಸುತ್ತಿದ್ದಾರೆ?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಸುದರ್ಶನ್ ರಂಗಪ್ರಸಾದ್, ಕಾವ್ಯಾ ಗೌಡ, ಭವ್ಯಶ್ರೀ ರೈ, ಹರೀಶ್ ರಾಜ್, ಸುಕೃತಾ ನಾಗ್, ಮುಖ್ಯಮಂತ್ರಿ ಚಂದ್ರು ಸೇರಿ ಹಲವಾರು ನಟ-ನಟಿಯರು ನಟಿಸುತ್ತಿದ್ದಾರೆ.