- Home
- Entertainment
- ಮದ್ವೆಯಾಗಿ 9 ವರ್ಷವಾದ್ರೂ Bhagyalakshmi ತಾಂಡವ್ಗೆ ಮಕ್ಕಳೇಕೆ ಇಲ್ಲ? ಕೊನೆಗೂ ಕಾರಣ ಕೊಟ್ಟ ಸ್ಟಾರ್ ದಂಪತಿ
ಮದ್ವೆಯಾಗಿ 9 ವರ್ಷವಾದ್ರೂ Bhagyalakshmi ತಾಂಡವ್ಗೆ ಮಕ್ಕಳೇಕೆ ಇಲ್ಲ? ಕೊನೆಗೂ ಕಾರಣ ಕೊಟ್ಟ ಸ್ಟಾರ್ ದಂಪತಿ
ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಮತ್ತು ಅವರ ಪತ್ನಿ ಸಂಗೀತಾ ಭಟ್ ದಂಪತಿ ಮಕ್ಕಳನ್ನು ಹೊಂದದಿರಲು ನಿರ್ಧರಿಸಿದ ಕಾರಣವೇನು?. Bhagyalakshmi Tandav Sudarshan Rangaprasad about not having child

ಸಿಡುಕು ಮೋರೆ ಸಿದ್ದಪ್ಪ
ಸದಾ ಸಿಡುಕು ಮೋರೆ, ಹೆಂಡತಿ ಎಂದರೆ ಕಾಲ ಕಸಕ್ಕಿಂತ ಕಡಿಮೆ. 16 ವರ್ಷ ಸಂಸಾರದಿಂದ ಎರಡು ಮಕ್ಕಳಾದ ಮೇಲೆ ಪತ್ನಿ ಬಿಟ್ಟು ಲವರ್ನ ಮದ್ವೆಯಾದ ಪಾಪಿ, ಲವರ್ ಜೊತೆ ಮದ್ವೆಯಾದರೂ ಪತ್ನಿಯ ಬೆನ್ನು ಬಿಡದ ರಾಕ್ಷಸ... ಹೀಗೆಲ್ಲಾ ಬೈದುಕೊಂಡರೆ ಅದು ಬೇರ್ಯಾರೂ ಅಲ್ಲ, Colors Kannadaದ ಭಾಗ್ಯಲಕ್ಷ್ಮಿ ಸೀರಿಯಲ್ ನಾಯಕ ತಾಂಡವ್ನೇ ಆಗಿರುತ್ತಾನೆ!
ಭಾಗ್ಯಲಕ್ಷ್ಮಿ ನಾಯಕ- ಖಳ ನಾಯಕ
Bhagyalkashmi Serialನಲ್ಲಿ ಈತನೇ ನಾಯಕ, ಈತನೇ ಖಳನಾಯಕ! ಪತ್ನಿ, ಮುದ್ದಾದ ಮಕ್ಕಳು ಇದ್ದರೂ ಇನ್ನೊಬ್ಬಳ ಸಹವಾಸ ಮಾಡಿದ್ದಾನೆ. ತಾಂಡವ್ನನ್ನು ಕಂಡ್ರೆ ಸೀರಿಯಲ್ ಪ್ರಿಯರು ಉಗಿಯುತ್ತಿದ್ದಾರೆ. ಸಾಮಾನ್ಯವಾಗಿ ಖಳನಾಯಕ ಎಂದರೆ ಹೊರಗಡೆಯಲ್ಲಿಯೂ ಅವರನ್ನು ಬೈಯುವವರೇ ಹೆಚ್ಚು. ತಾವು ನೋಡುತ್ತಿರುವುದು ಧಾರಾವಾಹಿ, ಅದರಲ್ಲಿ ಇರುವುದು ಕಾಲ್ಪನಿಕ ಪಾತ್ರಗಳು ಎನ್ನುವುದನ್ನು ಮರೆತು, ಖಳನಾಯಕರನ್ನು ಚೆನ್ನಾಗಿ ಉಗಿಯುವುದೂ ಇದೆ. ಅದೇ ರೀತಿ ತಾಂಡವ್ ಪಾತ್ರಧಾರಿಯೂ ಅನುಭವಿಸುತ್ತಿದ್ದಾರೆ. ಅಂದಹಾಗೆ, ಖಳನಾಯಕನಾಗಿ ಮಿಂಚುತ್ತಿರುವ ತಾಂಡವ್ ಪಾತ್ರಧಾರಿಯ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್. (Sudarshan Rangaprasad)
ನಟಿ- ಮಾಡೆಲ್ ಆಗಿರೋ ಸಂಗೀತಾ
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತಾಂಡವ್ಗೆ ಇಬ್ಬರು ಪತ್ನಿಯರ ಜೊತೆಗೆ ಇಬ್ಬರು ಮಕ್ಕಳು. ಆದರೆ ರಿಯಲ್ ಲೈಫ್ ಸುದರ್ಶನ್ ರಂಗಪ್ರಸಾದ್ ಅವರಿಗೆ ಸೆಲೆಬ್ರಿಟಿ ಪತ್ನಿ ಇದ್ದಾರೆ. ಅವರೇ ಸಂಗೀತಾ ಭಟ್. ಇವರ ಮದುವೆಯಾಗಿ 9 ವರ್ಷಗಳಾಗಿವೆ. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಏನೂ ಗೊತ್ತಿಲ್ಲದ, ಹೆಚ್ಚು ಕಲಿಯದ ಭಾಗ್ಯ ತಾಂಡವ್ ಪತ್ನಿಯಾದರೆ, ಅಸಲಿ ಜೀವನದಲ್ಲಿ ನಟಿ ಸಂಗೀತಾ ಭಟ್, ತಾಂಡವ್ ಅರ್ಥಾತ್ ಸುದರ್ಶನ ರಂಗಪ್ರಸಾದ್ ಅವರ ಪತ್ನಿ. ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.
ಹಲವು ಭಾಷಾ ನಟಿ
ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ತುಂಬಾ ಸುದ್ದಿ ಮಾಡಿದ್ದು, ಮೀ ಟೂ ಅಭಿಯಾನ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ. 2018 ರಲ್ಲಿ ನಡೆದ ಮಿ ಟೂ ಅಭಿಯಾನದ ವೇಳೆ ಸಂಗೀತಾ ಭಟ್, ತಾವೂ ಕೂಡಾ ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿರುವ ಬಗ್ಗೆ ತಿಳಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ.
ಮಕ್ಕಳಾಗದ್ದಕ್ಕೆ ಉತ್ತರ
ಇಂತಿಪ್ಪ ದಂಪತಿಗೆ ಮದುವೆಯಾಗಿ ಇಷ್ಟು ವರ್ಷವಾದರೂ ಮಕ್ಕಳೇಕೆ ಆಗಿಲ್ಲ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತದೆ. ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ಸಂಗೀತಾ (Sangeeta Bhat) ಅವರ ʻಕಮಲ್ ಶ್ರೀದೇವಿʼ ಸಿನಿಮಾದ ಟ್ರೈಲರ್ ಲಾಂಚ್ ಈಚೆಗೆ ನಡೆದ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪತಿ ಸುದರ್ಶನ್ ಕೂಡ ಇದ್ದರು.
ಜವಾಬ್ದಾರಿ ಇಷ್ಟವಿಲ್ಲ
ನಮಗೆ ಜವಾಬ್ದಾರಿ ಎಂದರೆ ಸ್ವಲ್ಪ ಕಷ್ಟವೇ. ಮಕ್ಕಳ ವಿಷಯದಲ್ಲಿ ಜವಾಬ್ದಾರಿ ಹೊರುವುದು ಕಷ್ಟ ಆಗಬಹುದು. ಇದನ್ನು ಕೇಳಿದ್ರೆ ತುಂಬಾ ಜನ ಬೈದುಕೊಳ್ಳುತ್ತಾರೆ ಎನ್ನುವುದು ಗೊತ್ತು. ಮಕ್ಕಳ ಜವಾಬ್ದಾರಿ ಬೇಡ್ವಾ ಎಂದೂ ಪ್ರಶ್ನಿಸುತ್ತಾರೆ. ಆದರೆ, ನಾವಿರುವ ಸನ್ನಿವೇಶದಲ್ಲಿ, ನಮ್ಮ ಜೀವನದಲ್ಲಿ ಆದ ಕೆಲವು ಘಟನೆಗಳಿಂದ ಇನ್ನೊಂದು ಜೀವಿಯನ್ನು ಈ ಭೂಮಿಯ ಮೇಲೆ ತರಲು ನಾವು ರೆಡಿ ಇಲ್ಲ. ಇದೇ ಕಾರಣಕ್ಕೆ ಮಕ್ಕಳು ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಜನ ಬೈದರೂ ತಲೆ ಕೆಡಿಸಿಕೊಳ್ಳುವುದಿಲ್ಲ
ನಮ್ಮ ನಿರ್ಧಾರಕ್ಕೆ ಜನ ಬೈದುಕೊಳ್ಳಬಹುದು. ಆದರೆ ಅದಕ್ಕೆ ಕೆಡಿಸಿಕೊಳ್ಳುವುದಿಲ್ಲ. ಹೇಗೆ ಐದು ಬೆರಳುಗಳೂ ಸರಿಸಮಾನವಾಗಿ ಇರುವುದಿಲ್ಲವೋ ಹಾಗೆ ವ್ಯಕ್ತಿವ್ಯಕ್ತಿಗಳಲ್ಲಿಯೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರುತ್ತವೆ. ಇದು ನಾವು ಕಂಡುಕೊಂಡಿರುವ ದಾರಿ, ಇದು ನಮ್ಮ ಚಾಯ್ಸ್ ಅಷ್ಟೇ. ಮಗು ಬೇಡ ಎನ್ನುವುದು ನಮ್ಮ ನಿರ್ಧಾರ ಎಂದು ದಂಪತಿ ಹೇಳಿದ್ದಾರೆ.
ನಾವು ತ್ಯಾಗ ಮಾಡುವುದು...
ಇನ್ನೊಂದು ಜೀವವನ್ನು ಭೂಮಿಯ ಮೇಲೆ ತಂದು ಅದಕ್ಕಾಗಿ ನಮ್ಮ ಜೀವನವನ್ನು ತ್ಯಾಗ ಮಾಡಬೇಕು. ಈಗ ಎಲ್ಲವೂ ಸಿಕ್ಕಾಪಟ್ಟೆ ದುಬಾರಿ. ಈ ಪರಿಸ್ಥಿತಿಯಲ್ಲಿ ಮಗುವನ್ನು ನೋಡಿಕೊಂಡು ತ್ಯಾಗ ಮಾಡಿ ಅದನ್ನು ಮುಂದೆ ತರುವುದು ಕಷ್ಟವಾಗುತ್ತದೆ. ಆದ್ದರಿಂದ ಮಗು ಬೇಡ ಎಂದಿದ್ದಾರೆ ಸಂಗೀತಾ.