- Home
- Entertainment
- TV Talk
- Bhagyalakshmi Serial: ಭಾಗ್ಯ vs ಶ್ರೇಷ್ಠ ವಾರ್ ಶುರು... ಅದೇ ಗೋಳು ನೋಡಿ, ಅಮೃತಧಾರೆ ನೋಡಿ ಕಲಿಯಿರಿ ಅಂತಿದ್ದಾರೆ ಜನ
Bhagyalakshmi Serial: ಭಾಗ್ಯ vs ಶ್ರೇಷ್ಠ ವಾರ್ ಶುರು... ಅದೇ ಗೋಳು ನೋಡಿ, ಅಮೃತಧಾರೆ ನೋಡಿ ಕಲಿಯಿರಿ ಅಂತಿದ್ದಾರೆ ಜನ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ vs ಶ್ರೇಷ್ಠ ವಾರ್ ಶುರು, ಒಂದೇ ರೀತಿ ಮುಂದುವರೆದುಕೊಂಡು ಹೋಗುತ್ತಿರುವುದನ್ನು ನೋಡಿ, ಗೋಳಾಡ್ತಿದ್ದಾರೆ ಜನ. ಭಾಗ್ಯ ಬಾಳಲ್ಲಿ ನೋವುಗಳು ಮುಗಿಯೋದು ಇಲ್ಲ, ಸೀರಿಯಲ್ ಕೊನೆಯಾಗೋದು ಇಲ್ಲ ಎಂದಿದ್ದಾರೆ.

ಭಾಗ್ಯ vs ಶ್ರೇಷ್ಠ ವಾರ್
ಭಾಗ್ಯಲಕ್ಷ್ಮೀ ಧಾರಾವಾಹಿ ಕಳೆದ ಮೂರು ವರ್ಷಗಳಿಂದ ಪ್ರಸಾರವಾಗುತ್ತಿದೆ. ಆರಂಭದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಧಾರಾವಾಹಿಯಲ್ಲಿ ನಂತರ ದಿನಗಳಲ್ಲಿ ಭಾಗ್ಯ ವೇದನೆ ಮಾತ್ರ ನೋಡೋದಕ್ಕೆ ಸಿಗುತ್ತಿದೆ. ಭಾಗ್ಯ ಬಾಳಲ್ಲಿ ಯಾವುದೇ ಶುಭ ಸೂಚನೆಯೇ ಇಲ್ಲ.
ಭಾಗ್ಯಲಕ್ಷ್ಮಿ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿಯ ನಾಯಕಿ ಭಾಗ್ಯ, ಆದರೆ ಈ ಭಾಗ್ಯ ಜೀವನದಲ್ಲಿ ಭಾಗ್ಯಗಳೇ ಇಲ್ಲ. ಆರಂಭದಿಂದ ಇಲ್ಲಿವರೆಗೆ ನಿರಂತರವಾಗಿ ಕಷ್ಟಗಳು, ಒಂದಲ್ಲ ಒಂದು ಸಮಸ್ಯೆಗಳು. ಇದೀಗ ಶ್ರೇಷ್ಠಾ ಕೂಡ ಯುದ್ಧ ಮಾಡೋಕೆ ಸಿದ್ಧವಾಗಿದ್ದಾಳೆ.
ಏನಾಗ್ತಿದೆ ಕಥೆ
ಭಾಗ್ಯನ ಬಾಳಲ್ಲಿ ಈಗಷ್ಟೇ ಒಂದು ಬೆಳಕಿನ ಕಿರಣ ಮೂಡಿತ್ತು. ಭಾಗ್ಯಗೆ ಆದೀಶ್ವರ್ ತಮ್ಮ ಕಂಪನಿಯಲ್ಲಿ ಕೆಲಸ ಸಿಗುವಂತೆ ಮಾಡಿದ್ದರು. ಇನ್ನೇನು ಭಾಗ್ಯ ಜೀವನ ಉನ್ನತ ಮಟ್ಟಕ್ಕೆ ಏರುತ್ತಿದೆ ಎನ್ನುವಾಗ್ಲೇ, ಮತ್ತೆ ಶ್ರೇಷ್ಠಾ, ಕನ್ನಿಕಾ ಭಾಗ್ಯ ಜೀವನಕ್ಕೆ ಬೆಂಕಿ ಇಡಲು ನಿರ್ಧರಿಸಿದ್ದಾರೆ.
ಮನೆ ಬಿಟ್ಟು ಹೋದ ತನ್ವಿ
ಇದೀಗ ಭಾಗ್ಯ ಮಗಳು ತನ್ವಿ ಮನೆಬಿಟ್ಟು ಹೋಗಿದ್ದಾರೆ, ಹೋಗುವಂತೆ ಮಾಡಿರೋದು ಇದೇ ಶ್ರೇಷ್ಠಾ. ಭಾಗ್ಯ ತನ್ನ ಮನೆಗೆ ಬಂದು ಬೇಡಿಕೊಳ್ಳಬೇಕೆನ್ನುವ ಹಠದಿಂದ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಆದರೆ ಭಾಗ್ಯ ಮಾತ್ರ ಮಗಳನ್ನು ಕರೆದುಕೊಂಡು ಬರಲು ತಾಂಡವ್ ಮನೆಗೆ ಹೋಗಲು ರೆಡಿ ಇಲ್ಲ.
ಭಾಗ್ಯ ಕಂಪನಿಗೆ ಸೇರಿದ ಶ್ರೇಷ್ಠಾ
ಇದೀಗಾ ಕನ್ನಿಕಾ ಸಹಾಯದಿಂದ ಭಾಗ್ಯ ಕೆಲಸ ಮಾಡುತ್ತಿರುವ ಕಂಪನಿಗೆ ಸೇರಿಕೊಂಡಿದ್ದಾಳೆ ಶ್ರೇಷ್ಠಾ, ಕನ್ನಿಕಾ ಮತ್ತು ಶ್ರೇಷ್ಠಾ ಇಬ್ಬರು ಜೊತೆಯಾಗಿ ಸೇರಿ ಭಾಗ್ಯಳನ್ನು ಕೆಲಸದಿಂದ ಓಡಿಸಲು ಪ್ಲ್ಯಾನ್ ಮಾಡಿದ್ದು, ಇನ್ನು ಮುಂದೆ ಭಾಗ್ಯಾಗೆ ಮತ್ತೊಮ್ಮೆ ಸವಾಲು ಎದುರಾಗಿದೆ.
ಗೋಳಾಡಿದ ವೀಕ್ಷಕರು
ದಿನದಿಂದ ದಿನಕ್ಕೆ ಮುಂದುವರೆಯುತ್ತಿರುವ ಭಾಗ್ಯಾಳ ಗೋಳಾಟ ನೋಡಿ ವೀಕ್ಷಕರು ತಲೆ ಚಚ್ಚಿಕೊಂಡಿದ್ದಾರೆ. ಅಯ್ಯೋ ಇನ್ನೆಷ್ಟು ದಿನ ಭಾಗ್ಯಗೆ ಕಾಟ ಕೊಡುತ್ತೀರಿ, ಆದಷ್ಟು ಬೇಗ ಕಥೆಯನ್ನು ಮುಗಿಸಿ, ಈ ಗೋಳು ನೋಡೊದಕ್ಕೂ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಅಮೃತಧಾರೆಯನ್ನು ನೋಡಿ ಕಲಿಯಿರಿ
ಜೀ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಕಥೆಯಲ್ಲಿ ಒಂದೂ ಚೂರು ಎಳೆಯದೇ ಬೇಗ ಬೇಗನೆ ಸಾಗುತ್ತಿದ್ದು, ಆ ಧಾರಾವಾಹಿಯನ್ನು ನೋಡಿ ನೀವು ಸ್ವಲ್ಪ ಕಲಿಯಿರಿ. ಕಥೆಯನ್ನು ಬದಲಾಯಿಸಿ, ಇಲ್ಲ ಸೀರಿಯಲ್ ಮುಕ್ತಾಯ ಮಾಡಿ ಎಂದಿದ್ದಾರೆ ಜನ.