- Home
- Entertainment
- TV Talk
- BBK 13: ಗಂಧರ್ವ ಕನ್ಯೆ ಸೋನಿಕಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡು, ನಿನ್ನ ಮೇಲೆ ಇಂಟ್ರೆಸ್ಟ್ ಆಗಿದೆ ಎಂದ ಜಗದೀಶ್!
BBK 13: ಗಂಧರ್ವ ಕನ್ಯೆ ಸೋನಿಕಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡು, ನಿನ್ನ ಮೇಲೆ ಇಂಟ್ರೆಸ್ಟ್ ಆಗಿದೆ ಎಂದ ಜಗದೀಶ್!
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ವಿವಾಹಿತ ಜಗದೀಶ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ಸೋನಿಕಾ ಗೌಡ ಅವರೊಂದಿಗೆ ಫ್ಲರ್ಟ್ ಮಾಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಕ್ಷಸ ಮತ್ತು ಗಂಧರ್ವ ಟಾಸ್ಕ್‌ನಲ್ಲಿ ಜಗದೀಶ್ ಅವರ ಈ ವರ್ತನೆಗೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮೈಸೂರಿನ ಜಗದೀಶ್ (ಲವ್ ಮಾಕ್ಟೇಲ್ -2 ಸಿನಿಮಾದ ಜಗ್ಗ ಮಮ್ಮಿ) ಮದುವೆಯಾಗಿ ಮಗು ಇದ್ದರೂ ಲವರ್ ಬಾಯ್, ಫ್ಲರ್ಟ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಮಾಡೆಲ್ ಸೋನಿಕಾ ಗೌಡ ಅವರೊಂದಿಗೆ ಲವ್ ಮಾಡುವುದಾಗಿ ಫ್ಲರ್ಟಿಂಗ್ ಆರಂಭಿಸಿದ್ದಾರೆ.
ಇದೀಗ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ರಾಕ್ಷಸ ಮತ್ತು ಗಂಧರ್ವ ಟಾಸ್ಕ್ ನಡೆಯುತ್ತಿದೆ. ಇದರಲ್ಲಿ ರಾಕ್ಷಸನಾಗಿರುವ ಜಗದೀಶ್, ತುಂಬಾ ಮೃದು ಸ್ವಭಾವದವರಂತೆ ನಡೆದುಕೊಳ್ಳುವ ಗಂಧರ್ವರಾಗಿರುವ ಸೋನಿಕಾಗೆ ಲವ್ ಮಾಡುವಂತೆ ಬೆನ್ನು ಬಿದ್ದಿದ್ದಾನೆ. ಈ ಬಗ್ಗೆ ಪ್ರೋಮೋ ಬಿಡುಗಡೆಯಾಗಿದ್ದು, ಈ ರಾಕ್ಷಸನನ್ನು ಮನೆಯಿಂದ ಬೇಗ ಹೊರಗೆ ಹಾಕಿ ಬಿಗ್ ಬಾಸ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಜಗ್ಗ ಮಮ್ಮಿಯಾಗಿ ಬಿಗ್ ಬಾಸ್ ಮನೆಗೆ ಹೋದ ಮೈಸೂರು ಜಿಲ್ಲೆಯ ಮಹದೇವಪುರದ ಜಗದೀಶ್ ಅವರಿಗೆ ಈಗಾಗಲೇ ಮದುವೆಯಾಗಿದ್ದು ಒಬ್ಬ ಮಗಳೂ ಇದ್ದಾಳೆ. ಹೀಗಿದ್ದರೂ, ಸೋನಿಕಾ ಅವರಿಗೆ ಲವ್ ಮಾಡುವಂತೆ ಬೆನ್ನು ಬಿದ್ದಿರುವುದು ವೀಕ್ಷಕರಿಗೆ ಸ್ವಲ್ಪ ಇರಿಸು-ಮುರಿಸು ಉಂಟುಮಾಡಿದೆ. ಜನರಿಗೆ ಮನರಂಜನೆ ನೀಡುವುದು ಬಿಗ್ ಬಾಸ್ ಮನೆಯಲ್ಲಿ ಮುಖ್ಯವಾಗಿದೆ. ಹೀಗಾಗಿ, ಜಗದೀಶ್ ಬಿಗ್ಬಾಸ್ ಮನೆಯಲ್ಲಿ ಸರ್ವೈವ್ ಆಗುವುದಕ್ಕೆ ಇದೆಲ್ಲವನ್ನೂ ಮಾಡುತ್ತಿದ್ದಾರೆ ಎನ್ನಿಸುತ್ತದೆ. ಆದರೆ, ಬಿಗ್ ಬಾಸ್ ಮನೆಯಲ್ಲಿರುವ ಇತರೆ ಸ್ಪರ್ಧಿಗಳ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬುದನ್ನೂ ಇವರು ಅರ್ಥ ಮಾಡಿಕೊಳ್ಳಬೇಕು.
ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ರಾಕ್ಷಸ ವೇಷಧಾರಿ ಜಗದೀಶ್ ಹಾಗೂ ಗಂಧರ್ವ ವೇಷಧಾರಿ ಸಂಭಾಷಣೆ ವಿವರ ಇಲ್ಲಿದೆ.
ಜಗದೀಶ್: ಇಲ್ಲಿ ನೋಡು, ಕಣ್ಣಲ್ಲಿ ಕಣ್ಣಿಟ್ಟು ನೋಡು.
ಸೋನಿಕಾ: ಇಂಟ್ರೆಸ್ಟ್ ಇಲ್ಲ ನಿಮ್ಮ ಮೇಲೆ.
ಜಗದೀಶ್: ನನಗೆ ನಿಮ್ಮ ಮೇಲೆ ಇಂಟ್ರೆಸ್ಟ್ ಇದೆ
ಸೋನಿಕಾ: ನಿಮ್ಮ ಇಂಟ್ರೆಸ್ಟ್‌ನ ನಾನೆಂತ ಮಾಡಲಿ
ಜಗದೀಶ್: ಅಕ್ಸೆಪ್ಟ್ ಮಾಡಿಕೋ
ಸೋನಿಕಾ: ಹ್ಮೂಕ್..., ಹ್ಮೂ... ನನಗೆ ಬೇರೆ ಹುಡುಗರು., ಬಾಳಿ ಬದುಕಬೇಕು ಅಂತಿದ್ದೀನಿ.
ಜಗದೀಶ್: ಈ ತರಹದ ಹುಡುಗ ನಿಮಗೆ ಸಿಗುವುದಿಲ್ಲ. ನಿನಗೆ ಒಳ್ಳೊಳ್ಳೆ ನಾಷ್ಟ (ಉಪಹಾರ) ಮಾಡಿ ತಿನ್ನಿಸುತ್ತೇನೆ. ಚಿಕನ್, ಮಟನ್ ಮಾಡಿ ಕೊಡುತ್ತೇನೆ.
ಕಾವ್ಯಾ: ಫಸ್ಟ್ ಮಾಡು ಹೋಗು. ನೀನು ರಾಕ್ಷಸ, ಫ್ಲರ್ಟ್ ಮಾಡುತ್ತಿರುವ ರಾಕ್ಷಸ ಅಲ್ಲ.
ಸೋನಿಕಾ: ಅವರು ಫ್ಲರ್ಟ್ ಮಾಡುತ್ತಿದ್ದಾರೆ.
ಈ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಾತ್ರ ವಿಡಿಯೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ರಾಕ್ಷಸನ ನಡೆ ಸರಿಯಾಗಿಲ್ಲ, ಈ ವಾರ ಮನೆಯಿಂದ ಹೊರಹಾಕಿ ಎಂದಿದ್ದಾರೆ. ಬಿಗ್ ಬಾಸ್ ಕೂಡಲೇ ಇವರಿಗೆ ವಾರ್ನಿಂಗ್ ಕೊಡಬೇಕು ಎಂದಿದ್ದಾರೆ. ಜಗದೀಶ್ ಸುಮ್ನೆ ತಮಾಷೆಗೆ ಮಾಡಿದರೂ, ಜನರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ಇನ್ನು ಕೆಲವರು ಮನೆಯಲ್ಲಿರುವ ನಾಟಿ ಹಸುನಾ ಬಿಟ್ಟು, ಫಾರಂ ಹಸ ಮೇಲೆ ಯಾಕೆ ಕಣ್ಣು ಹಾಕ್ತೀಯ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.
ಯಾವೊಂದು ಜೋಡಿಯೂ ಪ್ರೀತಿ ಅಥವಾ ಸ್ನೇಹದಲ್ಲಿ ಬಿದ್ದಂತೆ ಕಾಣುತ್ತಿಲ್ಲ. ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಜೋಡಿ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡು ತಮ್ಮ ನಡುವೆ ಪ್ರೀತಿ ಅಥವಾ ಗಟ್ಟಿಯಾದ ಸ್ನೇಹ ಇದೆ ಎಂಬುದನ್ನು ತೋರಿಸುತ್ತಿದ್ದರು. ಆದರೆ, ಈ ಬಾರಿ ಯಾವುದೇ ಜೋಡಿ ಪ್ರೀತಿಯಲ್ಲಿ ಬಿದ್ದಂತೆ ಕಾಣುತ್ತಿಲ್ಲ. ನಟ ಯಶಸ್ ಅವರು ನಟಿ ಆಸಿಯಾ ಹಾಗೂ ಮಾಡೆಲ್ ಸೌಂದರ್ಯ ಶೆಟ್ಟಿ ಅವರೊಂದಿಗೆ ಫ್ಲರ್ಟ್ ಮಾಡುತ್ತಿದ್ದರೂ ಜೋಡಿ ಆಗುವಲ್ಲಿ ಯಶಸ್ವಿ ಆಗಿಲ್ಲ. ಇಲ್ಲಿ ಆಸಿಯಾ ಅವರಿಗೆ ಹೊರಗಡೆ ಬಾಯ್‌ಫ್ರೆಂಡ್ ಇದ್ದಾನೆ ಎಂಬ ಸುಳಿವು ಸಿಕ್ಕಿದ್ದು, ಆದ್ದರಿಂದಲೇ ಯಶಸ್ ಅವರೊಂದಿಗೆ ಆತ್ಮೀಯತೆಯಿಂದಿರದೇ ದೂರ ಹೋಗುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

