- Home
- Entertainment
- TV Talk
- ಕಾವ್ಯಾ ಉಳಿಸೋಕೆ ಚೈತ್ರಾಗಿಂತ ಕಳಪೆ ಉಸ್ತುವಾರಿ ಮಾಡಿದ ಗಿಲ್ಲಿ ನಟ! ಕಾವ್ಯಾಗೆ ಬಕೆಟ್ ಹಿಡಿಬೇಡವೆಂದ ವೀಕ್ಷಕರು!
ಕಾವ್ಯಾ ಉಳಿಸೋಕೆ ಚೈತ್ರಾಗಿಂತ ಕಳಪೆ ಉಸ್ತುವಾರಿ ಮಾಡಿದ ಗಿಲ್ಲಿ ನಟ! ಕಾವ್ಯಾಗೆ ಬಕೆಟ್ ಹಿಡಿಬೇಡವೆಂದ ವೀಕ್ಷಕರು!
ಬಿಗ್ ಬಾಸ್ ಫಿನಾಲೆ ಟಾಸ್ಕ್‌ಗಳು ಆರಂಭವಾಗಿದ್ದು, ಕಾವ್ಯಾಳನ್ನು ಉಳಿಸಲು ಗಿಲ್ಲಿ ನಟ ಪ್ರಯತ್ನಿಸುತ್ತಿದ್ದಾನೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ಪಂದನಾ ಹೆಚ್ಚು ನೀರು ಸಂಗ್ರಹಿಸಿದ್ದರೂ, ಗಿಲ್ಲಿ ಅನ್ಯಾಯವಾಗಿ ಕಾವ್ಯಾಳನ್ನು ವಿಜಯಿ ಎಂದು ಘೋಷಿಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಟಾಸ್ಕ್‌ಗಳು ಆರಂಭವಾಗಿವೆ. ಎರಡು ವಾರಗಳು ಬಾಕಿ ಇರುವಾಗ ಕಾವ್ಯಾಳನ್ನು ಉಳಿಸಿಕೊಳ್ಳೋದಕ್ಕೆ ಗಿಲ್ಲಿ ನಟ ಭಾರೀ ಕಸರತ್ತು ಮಾಡುತ್ತಿದ್ದಾನೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸೇರಿಕೊಂಡು ಕಾವ್ಯಾಳನನ್ನು ನಾಮಿನೇಟ್ ಮಾಡಿ ಮನೆಯಿಂದ ಹೊರಗೆ ಹಾಕಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದರೂ ಗಿಲ್ಲಿ ಮಾತ್ರ ಕಾವ್ಯಾಳನ್ನು ಸೇವ್ ಮಾಡುತ್ತಲೇ ಫಿನಾಲೆಗೆ ಕರೆದುಕೊಂಡು ಹೋಗುವ ಭಾರೀ ಪ್ರಯತ್ನವನ್ನು ಮುಂದುವರೆಸಿದ್ದಾನೆ.
ಈ ಪ್ರಯತ್ನವನ್ನು ನೋಡಿದ ವೀಕ್ಷಕರು ಕಾವ್ಯಾಳಿಗೆ ಇಷ್ಟೊಂದು ಬಕೆಟ್ ಹಿಡಿಯುವುದು ಬೇಡವಾಗಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಒಂದನ್ನು ಆಟವಾಡಿಸಲಾಗುತ್ತಿದೆ. ಅದರಲ್ಲಿ ಶವರ್ ಮೂಲಕ ನೀರನ್ನು ಬಿಟ್ಟು, ಸ್ಪರ್ಧಿಗಳುಗೆ ತಲೆ ಮೇಲ ಒಂದು ಸ್ಪಂಜ್ ಅನ್ನು ನೀಡಿ ಆ ಮೃದುವಾದ ಸ್ಪಂಜ್‌ನಲ್ಲಿ ನೀರು ಶೇಖರಣೆ ಮಾಡಿ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ನೀರು ತುಂಬಿಸಬೇಕು.
ಈ ಟಾಸ್ಕ್‌ನಲ್ಲಿ ಮೊದಲು ಮಹಿಳಾ ಸ್ಪರ್ಧಿಗಳನ್ನು ಕಣಕ್ಕಿಳಿಸಲಾಗುತ್ತದೆ. ಅದರಲ್ಲಿ ಅಶ್ವಿನಿ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಗಿಲ್ಲಿ ನಟ ವಿಶೇಷ ಅಧಿಕಾರ ಬಳಸಿ ಹೊರಗಿಟ್ಟಿದ್ದಾನೆ. ಹೀಗಾಗಿ, ಸ್ಪಂದನಾ, ರಾಶಿಕಾ ಮತ್ತು ಕಾವ್ಯಾ ಅವರ ನಡುವೆ ಈ ಟಾಸ್ಕ್ ಅನ್ನು ನಡೆಸಲಾಗಿದೆ. ಈ ಟಾಸ್ಕ್‌ಗೆ ಉಸ್ತುವಾರಿ ಮಾಡಲು ಕ್ಯಾಪ್ಟನ್ ಗಿಲ್ಲಿ ಮತ್ತು ಅಶ್ವಿನಿ ಅವರನ್ನು ನಿಯೋಜನೆ ಮಾಡಲಾಗಿರುತ್ತದೆ.
ಈ ಟಾಸ್ಕ್‌ನಲ್ಲಿ ಮೂವರೂ ಸ್ಪರ್ಧಿಗಳು ನೀರು ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಅದಲ್ಲಿ ರಾಶಿಕಾ ಅವರು ತುಂಬಾ ಆಕ್ಟೀವ್ ಆಗಿ ಆಟವಾಡುತ್ತಾ ಅರ್ಧ ಬಕೆಟ್ ನೀರನ್ನು ಸಂಗ್ರಹ ಮಾಡಿದ್ದಾರೆ. ಉಳಿದಂತೆ ಕಾವ್ಯಾ ಮತ್ತು ಸ್ಪಂದನಾ ಇಬ್ಬರೂ ಕಾಲು ಭಾಗಕ್ಕಿಂತ ಹೆಚ್ಚು ನೀರನ್ನು ಸಂಗ್ರಹ ಮಾಡಿರುತ್ತಾರೆ.
ಇನ್ನು ಕಾವ್ಯಾ ಮತ್ತು ಸ್ಪಂದನಾ ಇಬ್ಬರ ಪೈಕಿ ಸ್ಪಂದನಾ ಕಾವ್ಯಾಳಿಗಿಂತ ಸ್ವಲ್ಪ ಹೆಚ್ಚಾಗಿ ನೀರನ್ನು ಸಂಗ್ರಹಿಸಿರುತ್ತಾರೆ. ಇನ್ನು ಯಾರೇ ಉಸ್ತುವಾರಿಗಳಾದರೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚಿನ ನೀರಿದೆ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ, ಗಿಲ್ಲಿ ನಟ ಮತ್ರ ಇದನ್ನು ಒಪ್ಪಿಕೊಳ್ಳುವುದೇ ಇಲ್ಲ.
ಹೇಗಾದರೂ ಮಾಡಿ ಕಾವ್ಯಾಳನ್ನು ಮುಂದಿನ ಟಾಸ್ಕ್‌ಗೆ ಕಳಿಸಬೇಕು ಎಂಬ ಪ್ರಯತ್ನದಿಂದ ರಾಶಿಕಾ ಹೆಚ್ಚಿನ ನೀರು ಸಂಗ್ರಹಿಸಿದ್ದು, ಸ್ಪಂದನಾ ಮತ್ತು ಕಾವ್ಯಾಳ ನಡುವೆ ಪೈಪೋಟಿಯಿದೆ. ಹೀಗಾಗಿ, ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆಂದು ಎರಡೂ ಬಕೆಟ್‌ಗಳನ್ನು ಅಕ್ಕಪಕ್ಕದಲ್ಲಿಟ್ಟು ತಾಳೆ ನೋಡುತ್ತಾನೆ.
ಕಳೆದ ಸೀಸನ್‌ನ ಸ್ಪರ್ಧಿ ಹಾಗೂ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿಯಂತೆ ಬಂದಿದ್ದ ಚೈತ್ರಾ ಕುಂದಾಪುರ ಅವರು ಕೂಡ ಇದೇ ರೀತಿಯಾಗಿ ಕಳಪೆ ಉಸ್ತುವಾರಿ ಮಾಡಿದ್ದರು. ಪ್ರತಿಬಾರಿ ಉಸ್ತುವಾರಿ ಬಂದಾಕ್ಷಣ ಇಡೀ ಟಾಸ್ಕ್ ಅನ್ನೇ ಹಾಳು ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಈಗ ಕಾವ್ಯಾಳಿಗಾಗಿ ಗಿಲ್ಲಿಯೂ ಅದೇ ರೀತಿ ಟಾಸ್ಕ್ ಉಸ್ತುವಾರಿ ಮಾಡ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಕೆಟ್ ಒಳಗಿನ ನೀರನ್ನು ನೊಡಲು ಕೆಳಗೆ ಮಲಗಿಕೊಂಡು ತೀಕ್ಷ್ಣವಾಗಿ ನೋಡುತ್ತಾನೆ. ಆಗ ಎಲ್ಲ ಸ್ಪರ್ಧಿಗಳೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚಿನ ನೀರಿದೆ ಎಂದು ಹೇಳುತ್ತಾರೆ. ಮುಂದುವರೆದು ರಾಶಿಕಾ ಅವರು ಮಾಳು ಅವರ ಚಿಕ್ಕ ಮಕ್ಕಳು ಬಂದಿದ್ರಲ್ಲಾ ಅವರನ್ನು ಕೇಳಿದ್ದರೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚು ನೀರಿ ಇರುವುದಾಗ ಹೇಳುತ್ತಿದ್ದರು ಎಂದು ಹೇಳುತ್ತಾರೆ.
ಆದರೆ, ಮನೆಯ ಎಲ್ಲ ಸದಸ್ಯರ ಮಾತನ್ನೂ ಹಾಗೂ ಸಹ ಉಸ್ತುವಾರಿ ಅಶ್ವಿನಿ ಅವರು ಸ್ಪಂದನಾ ಬಕೆಟ್‌ನಲ್ಲಿ ನೀರು ಹೆಚ್ಚಿದೆ ಎಂದು ಹೇಳಿದರೂ ಅದಕ್ಕೊಪ್ಪದ ಗಿಲ್ಲಿ ನಟ, ಕಾವ್ಯಾಳ ಬಕೆಟ್‌ನಲ್ಲಿ ಹೆಚ್ಚು ನೀರಿದೆ ಎಂದು ವಾದ ಮಾಡುತ್ತಾನೆ. ಬಿಗ್ ಬಾಸ್‌ಗೂ ಕೂಡ ರಾಶಿಕಾ ಮತ್ತು ಕಾವ್ಯಾಳ ಬಕೆಟ್‌ನಲ್ಲಿ ಹೆಚ್ಚಿನ ನೀರು ಇದ್ದು, ಸ್ಪಂದನಾ ಟಾಸ್ಕ್ ಸೋತಿದ್ದಾಳೆ ಎಂಬುದನ್ನು ಹೇಳುತ್ತಾನೆ.
ಈ ಪ್ರೋಮೋವನ್ನು ಇದೀಗ ರಿಲೀಸ್ ಮಾಡಲಾಗಿದ್ದು, ಜನರೆಲ್ಲರೂ ಗಿಲ್ಲಿ ಆಟವನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಇವನು ಕಾವ್ಯಾಳಿಗೆ ತುಂಬಾ ದೊಡ್ಡ ಬಕೆಟ್ ಹಿಡಿಯುತ್ತಿದ್ದಾನೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಒಬ್ಬ ನೆಟ್ಟಿಗ, ನಮಗೆ ಕಾಣ್ತಾ ಇದೆ, ಕಾವ್ಯ ದು ಕಮ್ಮಿ ಇದೆ ಅಂಥ, ಆದರೆ ಗಿಲ್ಲಿ ಜೊಲ್ಲು ಸುರಿಸಿ ಅದನ್ನ ಜಾಸ್ತಿ ಮಾಡೋಕೆ ನೋಡ್ತಾ ಇದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

