ಕಣ್ಣಿಗೆ ಕಾಡಿಗೆ, ತುಟಿಗೆ ಲಿಫ್ಸ್ಟಿಕ್ – ಮನೆ ಮಂದಿಗೆ ಆಟ ಗಿಲ್ಲಿಗೆ ಪ್ರಾಣ ಸಂಕಟ
Bigg Boss Kannada 12 : ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಕಾಲೆಳೆದು ಮಜಾ ತೆಗೆದುಕೊಳ್ತಿದ್ದ ಗಿಲ್ಲಿ ಪರಿಸ್ಥಿತಿ ಈಗ ಯಾರಿಗೂ ಬೇಡ. ಹೆಣ್ಮಕ್ಕಳ ಕೈನಲ್ಲಿ ಸಿಕ್ಕಿಬಿದ್ದ ಗಿಲ್ಲಿ ಅವತಾರವೇ ಬದಲಾಗಿದೆ.

ಗಿಲ್ಲಿ ಸ್ಥಿತಿ ಯಾರಿಗೂ ಬೇಡ
ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಗಿಲ್ಲಿ ಗೋಳು ಹೊಯ್ದುಕೊಳ್ತಾರೆ. ಈಗ ಉಳಿದ ಸ್ಪರ್ಧಿಗಳ ಸರದಿ. ಗಿಲ್ಲಿಯನ್ನು ಅಶ್ವಿನಿ, ಕಾವ್ಯಾ ಸೇರಿದಂತೆ ಮಹಿಳಾ ಟೀಂ ಗೋಳುಹೊಯ್ದುಕೊಂಡಿದೆ. ಗಿಲ್ಲಿಗೆ ಮೇಕಪ್ ಮಾಡಿ ಸತಾಯಿಸಿದ್ದಾರೆ.
ಗಿಲ್ಲಿಗೆ ಮೇಕಪ್
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹವಾ ಜೋರಾಗಿಯೇ ಇದೆ. ಬಿಗ್ ಬಾಸ್ ಹೊರಗೂ ಗಿಲ್ಲಿ, ಗಿಲ್ಲಿ ಎನ್ನುವ ಮಾತುಗಳು ಕೇಳಿ ಬರ್ತಿದೆ. ಎಲ್ಲ ಸೋಶಿಯಲ್ ಮೀಡಿಯಾ ಪ್ರೋಮೋಗಳಲ್ಲೂ ಗಿಲ್ಲಿ ವಿನ್ನರ್ ಎನ್ನುವ ಕಮೆಂಟ್ ಸಾಮಾನ್ಯವಾಗಿದೆ. ಮನೆಯಲ್ಲಿ ಅತಿ ಕಡಿಮೆ ಕೆಲ್ಸ ಮಾಡುವ, ಕಂಡ ಕಂಡವನ್ನು ಕಾಲೆಳೆದು ತಮಾಷೆ ಮಾಡುವ ಗಿಲ್ಲಿ ಈ ಬಾರಿ ಅಶ್ವಿನಿ ಗೌಡ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಗಿಲ್ಲಿ ಮುಖಕ್ಕೆ ಬಣ್ಣ, ತುಟಿಗೆ ಲಿಫ್ಸ್ಟಿಕ್
ಅಶ್ವಿನಿ ಗೌಡ ಮುಂದೆ ಗಿಲ್ಲಿ ಸುಮ್ಮನೆ ನಿಂತಿದ್ದಾರೆ. ಅವರ ಮುಖಕ್ಕೆ ಒಂದಿಷ್ಟು ಹಿಟ್ಟು ಬಳಿದು, ಜುಟ್ಟು ಕಟ್ಟಿ, ಲಿಪ್ಸ್ಟಿಕ್ ಹಚ್ಚಿ, ಹೂವಿನ ಎಸಳುಗಳನ್ನು ತಲೆಯ ಮೇಲೆ ಹಾಕಿ ಮಜಾ ನೋಡ್ತಿದ್ದಾರೆ ಸ್ಪರ್ಧಿಗಳು. ಅಶ್ವಿನಿ ಈ ಕೆಲ್ಸಕ್ಕೆ ಕಾವ್ಯಾ, ರಾಶಿಕಾ ಸೇರಿದಂತೆ ಸ್ಪಂದನಾ, ರಕ್ಷಿತಾ, ರಘು, ಸೂರಜ್ ಸಾಥ್ ನೀಡಿದ್ದಾರೆ. ಮೇಕಪ್ ಮಾಡ್ತಾ, ಮುಖಕ್ಕೆ ಹಿಟ್ಟು ಬಳಿತಾ, ಇನ್ನು ಮಾಡ್ತೀಯಾ, ನನ್ನ ಸುದ್ದಿಗೆ ಬರ್ತಿಯಾ ಅಂತ ಗಿಲ್ಲಿಗೆ ಕೇಳ್ತಿದ್ದಾರೆ.
ಗಿಲ್ಲಿಗೆ ಪ್ರಾಣ ಸಂಕಟ
ಟೀ ಶರ್ಟ್ ಮೇಲೆ ದುಪಟ್ಟಾ ಹಾಕಿ, ಮುಖಕ್ಕೆಲ್ಲ ಕಪ್ಪು ಬಳಿದು ವಿಚಿತ್ರ ಅವತಾರದಲ್ಲಿದ್ದಾರೆ ಗಿಲ್ಲಿ. ಗಿಲ್ಲಿ ಸ್ಟೈಲ್ ನೋಡಿ ಸ್ಪರ್ಧಿಗಲೂ ನಗ್ತಿದ್ದಾರೆ. ಜಿಯೋ ಹಾಟ್ ಸ್ಟಾರ್ ಇನ್ಟ್ರಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆ ಮಂದಿಗೆ ಆಟ, ಗಿಲ್ಲಿಗೆ ಪ್ರಾಣ ಸಂಕಟ ಅಂತ ಶೀರ್ಷಿಕೆ ಹಾಕಲಾಗಿದೆ.
ವೀಕ್ಷಕರ ಕಮೆಂಟ್
ಗಿಲ್ಲಿ ಈ ಅವತಾರ ನೋಡಿದ ಫ್ಯಾನ್ಸ್, ಪಾಪ ಗಿಲ್ಲಿ ಎನ್ನುತ್ತಿದ್ದಾರೆ. ಮತ್ತೊಂದಿಷ್ಟು ಮಂದಿಗೆ ಅಶ್ವಿನಿ ಸ್ವಭಾವ ಇಷ್ಟವಾಗಿದೆ. ಮನೆಯಲ್ಲಿ ಅಶ್ವಿನಿ ಇರ್ಲಿಲ್ಲ ಅಂದ್ರೆ ಇಷ್ಟೊಂದು ಮನರಂಜನೆ ಸಿಗ್ತಿರಲಿಲ್ಲ. ಆಟಕ್ಕೂ ಸೈ, ಜಗಳಕ್ಕೂ ಸೈ, ತಮಾಷೆಗೂ ಸೈ ಅಶ್ವಿನಿ ಅಂತ ಅಶ್ವಿನ ಪರ ಮಾತನಾಡಿದ್ದಾರೆ.
ಒಂದಾದ್ರಾ ಗಿಲ್ಲಿ – ಅಶ್ವಿನಿ?
ಆರಂಭದಿಂದಲೂ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಜಗಳ ಸಾಮಾನ್ಯವಾಗಿತ್ತು. ಆದ್ರೆ ಇಬ್ಬರ ಮಧ್ಯೆ ವಿಶೇಷ ಬಾಂಡಿಂಗ್ ಇತ್ತು. ಒಮ್ಮೆ ಜಗಳ ಆಡಿದ್ರೆ ಇನ್ನೊಮ್ಮೆ ತಮಾಷೆ ಮಾಡ್ತಾ ಓಡಾಡ್ತಿದ್ರು. ನಿನ್ನೆ ಕೂಡ ಅಶ್ವಿನಿ, ಗಿಲ್ಲಿ ಜೊತೆ ನಾನು ಮಾತನಾಡ್ತಿಲ್ಲ ಆದ್ರೆ ಅವರೇ ಬಂದು ಮೇಡಂ ಮೇಡಂ ಅಂತ ಮಾತನಾಡಿಸ್ತಿದ್ದಾರೆ ಎಂದಿದ್ರು.
ಫೈನಲ್ ಆಟ ಶುರು
ಬಿಗ್ ಬಾಸ್ ಕನ್ನಡ ಸೀಸನ್ 12ರ ರಿಯಾಲಿಟಿ ಶೋ ಕೊನೆ ಹಂತಕ್ಕೆ ಬರ್ತಿದೆ. ಸದ್ಯ ಕಾವ್ಯಾ ಬಿಟ್ಟು ಮನೆಯ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ಕಳೆದ ಮೂರು ವಾರಗಳಿಂದ ಯಾವುದೆ ವ್ಯಕ್ತಿ ಮನೆಯಿಂದ ಹೊರಗೆ ಹೋಗಿಲ್ಲ. ರಕ್ಷಿತಾ ಹಾಗೂ ಧ್ರವಂತ್ ಸೀಕ್ರೆಟ್ ರೂಮಿನಲ್ಲಿದ್ದು ಬಂದ್ರೆ ಗೆಸ್ಟ್ ಆಗಿ ಬಂದಿದ್ದ ರಜತ್ ಹಾಗೂ ಚೈತ್ರಾ ಮನೆಯಿಂದ ಹೊರಗೆ ಹೋಗಿದ್ದಾರೆ. ಸದ್ಯ ಎಲ್ಲರ ಕಣ್ಣು ಬಿಗ್ ಬಾಸ್ ಟ್ರೋಫಿ ಮೇಲಿದ್ದು, ಹೇಗೆ ಜನರಿಗೆ ಮನರಂಜನೆ ನೀಡಿ, ವೋಟ್ ಗಿಟ್ಟಿಸಿಕೊಳ್ಳೋದು ಎನ್ನುವ ಪ್ಲಾನ್ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

