- Home
- Entertainment
- TV Talk
- BBK 12: ಆ ಗೆಟಪ್ ಹಾಕ್ಕೊಂಡು ಗೆದ್ದಿರೋದು ಸರೀನಾ? ಗಿಲ್ಲಿಯ ಹೊಗಳುತ್ತಲೇ ತಿವಿದ Ashwini Gowda ಏನಂದ್ರು ಕೇಳಿ!
BBK 12: ಆ ಗೆಟಪ್ ಹಾಕ್ಕೊಂಡು ಗೆದ್ದಿರೋದು ಸರೀನಾ? ಗಿಲ್ಲಿಯ ಹೊಗಳುತ್ತಲೇ ತಿವಿದ Ashwini Gowda ಏನಂದ್ರು ಕೇಳಿ!
ಬಿಗ್ಬಾಸ್ನಲ್ಲಿ ದಾಖಲೆಯ ಮತಗಳಿಂದ ಗೆದ್ದ ಗಿಲ್ಲಿ ನಟನ ಮೇಲೆ ರನ್ನರ್ ಅಪ್ ಅಶ್ವಿನಿ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಗಿಲ್ಲಿ ನಟ ಬಡವನ ಸೋಗಿನಲ್ಲಿ ಗೆಲುವು ಸಾಧಿಸಿದ್ದಾರೆ, ಆದರೆ ಆತ ನಿಜಕ್ಕೂ ಬಡವನಾ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.

ಇತಿಹಾಸ ಸೃಷ್ಟಿ
ಬಿಗ್ಬಾಸ್ನಲ್ಲಿ 37 ಕೋಟಿಗೂ ಅಧಿಕ ಮತ ಪಡೆಯುವ ಮೂಲಕ ಬಿಗ್ಬಾಸ್ ಇತಿಹಾಸದಲ್ಲಿಯೇ ದಾಖಲೆ ಸೃಷ್ಟಿಸಿ ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಮೂರನೆಯ ಸ್ಥಾನಕ್ಕೆ ಅರ್ಥಾತ್ 2ನೇ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡು ನೋವಿನಲ್ಲಿ ಇದ್ದಾರೆ ಅಶ್ವಿನಿ ಗೌಡ.
ಹಾವು-ಮುಂಗುಸಿ
ಮೊದಲಿನಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಹಾವು ಮುಂಗುಸಿ ರೀತಿಯೇ ಬಿಗ್ಬಾಸ್ ಮನೆಯಲ್ಲಿ ಇದ್ದವರು. ಇವೆಲ್ಲಾ ಆಟದಲ್ಲಿ ಸಹಜ ಕೂಡ. ಫಿನಾಲೆ ಸಮೀಪದಲ್ಲಿಯೇ ತಾವು ಏಕವಚನ ಬಳಕೆ ಮಾಡಿದ್ದಕ್ಕೆ ಅಶ್ವಿನಿ ಅವರಿಗೆ ಗಿಲ್ಲಿ ನಟ ಕ್ಷಮೆ ಕೋರಿದ್ದರೆ, ನಿನ್ನಿಂದ ಕಲಿಯೋದು ತುಂಬಾ ಇದೆ ಎಂದು ಅಶ್ವಿನಿ ಅವರು ಗಿಲ್ಲಿ ನಟನಿಗೆ ಬಹುಪರಾಕ್ ಹಾಡಿದ್ದರು.
ಬಡವರಾ, ಟ್ಯಾಲೆಂಟ್ಗಳಾ?
ಆದರೆ, ಇದೀಗ ಸೀನ್ ಮತ್ತೆ ಬದಲಾಗಿದೆ. ರಿಯಾಲಿಟಿ ಷೋಗಳಲ್ಲಿ ಬಡವರ ಮಕ್ಕಳು ಬೆಳೆಯಬೇಕಾ ಅಥವಾ ಟ್ಯಾಲೆಂಟ್ ಇರೋರಾ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಬಡವರ ಮಕ್ಕಳಾಗಿ ಟ್ಯಾಲೆಂಟ್ ಇದ್ದವರು ಗೆಲ್ಲಬೇಕು ಎನ್ನುವವರು ಹಲವರು ಇದ್ದಾರೆ. ಆದರೆ ಬಡವರ ಮಕ್ಕಳ ಸೋಗಿನಲ್ಲಿಯೇ ಕೆಲವರು ಗೆಲುವು ಸಾಧಿಸುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.
ನಿಜಕ್ಕೂ ಗಿಲ್ಲಿ ಬಡವನಾ?
ಇದೀಗ, ಗಿಲ್ಲಿ ನಟ ಬಡವನ ಸೋಗಿನಲ್ಲಿ ಬಿಗ್ಬಾಸ್ ವಿನ್ ಆಗಿದ್ದಾರೆ ಎಂದು ನೇರಾನೇರವಾಗಿಯೇ ಅಶ್ವಿನಿ ಗೌಡ ಅವರು ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಅಶ್ವಿನಿ ಗೌಡ ಅವರು, ಡಾಲಿ ಧನಂಜಯ್ ಹೇಳಿದಂತೆ ಬಡವರ ಮಕ್ಕಳು ಗೆಲ್ಲಬೇಕು ನಿಜ, ನಾನೂ ಅದನ್ನೇ ಹೇಳುವವಳು. ಆದರೆ ಗಿಲ್ಲಿ ನಿಜಕ್ಕೂ ಬಡವನಾ ಎಂದು ಪ್ರಶ್ನಿಸಿದ್ದಾರೆ.
ಗಿಲ್ಲಿ ಬಗ್ಗೆ ಬೇಸರವಿಲ್ಲ
ಬಡವರು ಬೇರೆ, ಬಡವರ ವೇಷದಲ್ಲಿ ನಟಿಸೋದು ಬೇರೆ. ಗಿಲ್ಲಿಯ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಅವರು ಚೆನ್ನಾಗಿಯೇ ಆಡಿದ್ದಾರೆ, ವಿನ್ ಕೂಡ ಆಗಿದ್ದಾರೆ. ಆದರೆ ಬಡವ ಎನ್ನುವ ಟ್ಯಾಗ್ಲೈನ್ ಹೊತ್ತು ವಿನ್ ಆಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮಾವನ ಮಗ ಗೆದ್ದಿದ್ದಾನೆ
ನನಗೆ ಆತ ಅತ್ತೆ ಮಗಳು ಎನ್ನುತ್ತಿದ್ದ. ನನ್ನ ಮಾವನ ಮಗ ಗೆದ್ದಿದ್ದಾನೆ. ನನಗೆ ಖುಷಿನೇ ಇದೆ. ಆಟ ಮುಗಿದಿದೆ. ಅದನ್ನು ಮತ್ತೆ ಹೊರಗಡೆ ತರುವುದು ಬೇಡ ಎಂದು ಹೇಳುತ್ತಲೇ, ಮತ್ತೆ ಬಡವನ ಸೋಗಿನಲ್ಲಿ, ಗಿಲ್ಲಿ ಗೆಲುವು ಸಾಧಿಸಿರೋದು ಎಂದು ಮತ್ತೆ ಮತ್ತೆ ನೋವಿನಿಂದ ನುಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

