MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 'ಮಗಳು ಇಡೀ ಜಗತ್ತು ಗೆಲ್ಲಲು ಸಿದ್ದವಾಗಿದ್ದಾಳೆ..' ಖುಷಿಯಿಂದ ಸಂಭ್ರಮಿಸಿದ ಗಾಯಕಿ ಅರ್ಚನಾ ಉಡುಪ

'ಮಗಳು ಇಡೀ ಜಗತ್ತು ಗೆಲ್ಲಲು ಸಿದ್ದವಾಗಿದ್ದಾಳೆ..' ಖುಷಿಯಿಂದ ಸಂಭ್ರಮಿಸಿದ ಗಾಯಕಿ ಅರ್ಚನಾ ಉಡುಪ

ಖ್ಯಾತ ಗಾಯಕಿ ಅರ್ಚನಾ ಉಡುಪ ಅವರ ಪುತ್ರಿ ವಿಭಾ, ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಸಂತಸದ ಕ್ಷಣವನ್ನು ಅರ್ಚನಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗಳ ಬಾಲ್ಯವನ್ನು ನೆನೆದು ಭಾವುಕರಾಗಿದ್ದಾರೆ ಮತ್ತು ಆಕೆಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

2 Min read
Author : Santosh Naik
Published : Jun 02 2026, 01:00 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Instagram

ಕನ್ನಡದ ಹೆಸರಾಂತ ಗಾಯಕಿ ಅರ್ಚನಾ ಉಡುಪ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ಭಾಗೀರತಿ ಸಿನಿಮಾದ ಹಾಡಿಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದ 47 ವರ್ಷದ ಅರ್ಚನಾ ಉಡುಪ ಅವರ ಪುತ್ರಿ ವಿಭಾ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಅವರು ತಮ್ಮ ಮಾಸ್ಟರ್ಸ್‌ ಡಿಗ್ರಿ ಪೂರೈಸಿದ್ದನ್ನು ಅರ್ಚನಾ ಉಡುಪ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Instagram

'ನನ್ನ ಮುದ್ದಾದ ಪುಟ್ಟ ಮಗಳು... ಅವಳು ಹೆಮ್ಮೆಯಿಂದ ತನ್ನ ಸ್ನಾತಕೋತ್ತರ ಪದವಿ (Master's Degree) ಪ್ರಮಾಣಪತ್ರವನ್ನು ಸ್ವೀಕರಿಸುವುದನ್ನು ನಾವಿಬ್ಬರೂ ಕಣ್ಣುಂಬ ವೀಕ್ಷಿಸುತ್ತಿದ್ದಾಗ ನಮ್ಮ ಹೃದಯಗಳು ಅಪಾರ ಆನಂದದಿಂದ ತುಂಬಿಹೋಗಿದ್ದವು' ಎಂದು ಬರೆದುಕೊಂಡಿದ್ದಾರೆ. 2002ರಲ್ಲಿ ವಕೀಲ ಹಾಗೂ ಗಾಯನ ದಿಗ್ಗಜ ಶಿವಮೊಗ್ಗ ಸುಬ್ಬಣ್ಣ ಅವರ ಪುತ್ರ ಶ್ರೀರಂಗ ಅವರನ್ನು ವಿವಾಹವಾಗಿದ್ದ ಅರ್ಚನಾ ಉಡುಪರಿಗೆ ನೀಲ್‌ ಹೆಸರಿನ ಪುತ್ರನೂ ಇದ್ದಾನೆ.

Related Articles

Related image1
ಅರ್ಚನಾ ಉಡುಪ ಧ್ವನಿಯಲ್ಲಿ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರ 'ಶ್ರೀ ರಾಮ ಗುಡಿಯಲ್ಲಿ'!
Related image2
ಶ್ರಾವಣಿ ಸುಬ್ರಹ್ಮಣ್ಯ : ಸೌಧಾಮಿನಿಯಾಗಿ ಎಂಟ್ರಿ ಕೊಟ್ಟ ಅರ್ಚನಾ ಉಡುಪ… ಕಥೆಯಲ್ಲಿ ಟ್ವಿಸ್ಟ್
35
Image Credit : Instagram

ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ವಿಭಾಳ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ. 'ಅವಳನ್ನು ಆ ಸ್ಥಿತಿಯಲ್ಲಿ ನೋಡುತ್ತಿದ್ದಂತೆ ನನ್ನ ಆಲೋಚನೆಗಳು ಒಮ್ಮೆಲೇ ಹಳೆಯ ದಿನಗಳಿಗೆ ಜಾರಿಹೋದವು. ಅವಳಿನ್ನೂ ಈ ಜಗತ್ತಿನಲ್ಲಿ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಸುತ್ತಲಿನ ಪ್ರತಿಯೊಂದನ್ನೂ ಕುತೂಹಲದಿಂದ ಕಲಿಯಲು ಮತ್ತು ಗ್ರಹಿಸಲು ಆರಂಭಿಸಿದ್ದ ಆ ದಿನಗಳು ಕಣ್ಣಮುಂದೆ ಬಂದವು.. ಕಿಂಡರ್‌ಗಾರ್ಟನ್ ಶಾಲೆಯಿಂದ ನಾನು ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಕಾಯುತ್ತಿದ್ದಾಗ, ತನ್ನ ಆ ದೊಡ್ಡ ದೊಡ್ಡ ದುಂಡಗಿನ ಕಣ್ಣುಗಳಿಂದ ನನ್ನನ್ನೇ ಹುಡುಕುತ್ತಿದ್ದ ಆ ರೀತಿ.. ಮರಳಿ ಮನೆಗೆ ಬರುವ ದಾರಿಯಲ್ಲಿ ನನ್ನ ಮಡಿಲ ಮೇಲೆಯೇ ಮಲಗಿಬಿಡುತ್ತಿದ್ದ ಆ ಮುಗ್ಧತೆ... ಇವೆಲ್ಲವೂ ನೆನಪಾಗಿ ಮೈಮನ ರೋಮಾಂಚನಗೊಂಡಿತು. ಆದರೆ, ಇವತ್ತು ಅವಳು ಸಂಪೂರ್ಣವಾಗಿ ಬೆಳೆದು ನಿಂತಿದ್ದಾಳೆ, ಈ ಇಡೀ ಜಗತ್ತನ್ನೇ ಗೆಲ್ಲಲು ಸಜ್ಜಾಗಿದ್ದಾಳೆ!

45
Image Credit : Instagram

ವಿಭಾಳ ಮುಂದಿನ ಜೀವನಕ್ಕೂ ಆಕೆ ಶುಭ ಕೋರಿದ್ದು, 'ನನ್ನ ಮುದ್ದಿನ ಗುಡಿಯಾ (ಬೊಂಬೆ)... ನೀನು ಯಾವಾಗಲೂ ನಮ್ಮ ಹೆಮ್ಮೆ.. ನಿನ್ನ ಮುಂದಿನ ಎಲ್ಲಾ ಹೊಸ ಪ್ರಯತ್ನಗಳು ಹಾಗೂ ಉಜ್ವಲ ಭವಿಷ್ಯಕ್ಕೆ ನನ್ನ ಹೃದಯಾಳದ ಶುಭ ಹಾರೈಕೆಗಳು. ನಿನಗೆ ಯಾವಾಗ, ಯಾವುದೇ ಅಗತ್ಯವಿದ್ದರೂ ನಿನ್ನ ಪಕ್ಕದಲ್ಲೇ ನಿನ್ನ ನೆರಳಾಗಿ ನಾನು ಸದಾ ಇರುತ್ತೇನೆ' ಎಂದು ಬರೆದಿದ್ದಾರೆ.

55
Image Credit : Instagram

ಅದರೊಂದಿಗೆ ಮಗಳು ಸ್ನಾತಕೋತ್ತರ ಪದವಿ ಪೂರೈಸಿದ ಪ್ರಮಾಣಪತ್ರವನ್ನು ಹಿಡಿದುಕೊಂಡಿರುವ ಆಕೆಯ ಕೆಲವು ಚಿತ್ರಗಳನ್ನೂ ಕೂಡ ಅರ್ಚನಾ ಉಡುಪ ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮನರಂಜನಾ ಸುದ್ದಿ
ಶಿಕ್ಷಣ
ಸ್ಯಾಂಡಲ್‌ವುಡ್
ಸುದ್ದಿ

Latest Videos
Recommended Stories
Recommended image1
ಗುಲಾಮಗಿರಿ ಇಷ್ಟ ಆಗಲ್ಲ, ಅದಕ್ಕೆ ಯಾವುದೇ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ: Karna Serial ತಾತ‌ ನಟ ಅಶೋಕ್
Recommended image2
Exclusive Photos: ವಿದೇಶದಲ್ಲಿರುವ ಹುಡುಗನನ್ನು ಕೋಲಾರದಲ್ಲಿ ಮದುವೆಯಾದ 'ಸೀತಾರಾಮ' ಧಾರಾವಾಹಿ ನಟಿ!
Recommended image3
ಮಂಡಿಯೂರಿ ಅವಳಿಗೆ ಕ್ಷಮೆ ಕೇಳಿದ್ದು ನನ್ನ ಜೀವನದ ಅದ್ಭುತ ಘಟನೆ: Bhagyalakshmi ಆದಿ ಮಾತು
Related Stories
Recommended image1
ಅರ್ಚನಾ ಉಡುಪ ಧ್ವನಿಯಲ್ಲಿ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರ 'ಶ್ರೀ ರಾಮ ಗುಡಿಯಲ್ಲಿ'!
Recommended image2
ಶ್ರಾವಣಿ ಸುಬ್ರಹ್ಮಣ್ಯ : ಸೌಧಾಮಿನಿಯಾಗಿ ಎಂಟ್ರಿ ಕೊಟ್ಟ ಅರ್ಚನಾ ಉಡುಪ… ಕಥೆಯಲ್ಲಿ ಟ್ವಿಸ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved