- Home
- Entertainment
- TV Talk
- ಗುಲಾಮಗಿರಿ ಇಷ್ಟ ಆಗಲ್ಲ, ಅದಕ್ಕೆ ಯಾವುದೇ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ: Karna Serial ತಾತ ನಟ ಅಶೋಕ್
ಗುಲಾಮಗಿರಿ ಇಷ್ಟ ಆಗಲ್ಲ, ಅದಕ್ಕೆ ಯಾವುದೇ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ: Karna Serial ತಾತ ನಟ ಅಶೋಕ್
Karna Kannada Serial: ಕರ್ಣ ಧಾರಾವಾಹಿ ಆರಂಭದಲ್ಲಿ ನಟ ಅಶೋಕ್ ಅವರು ಅಭಿನಯಿಸಿದ್ದರು. ಇಲ್ಲಿ ಅವರಿಗೆ ಕೆಲವೇ ದಿನಗಳ ಕಾಲ ಪಾತ್ರ ಇತ್ತು. ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅಶೋಕ್ ಅವರೀಗ ಅಷ್ಟಾಗಿ ಸೀರಿಯಲ್‌ನಲ್ಲಿ ನಟಿಸೋದಿಲ್ಲ, ಇದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ.

ಸಂಸ್ಕೃತಿ ಸಂಪ್ರದಾಯವನ್ನು ತೋರಿಸೋಕೆ ಆಗ್ತಿಲ್ಲ
Karna Kannada Serial Actor Ashok Hegde: ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ‘Beyond Limits’ ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇದಕ್ಕೆ ಕಾರಣ ಏನು ಎಂದು ಅವರು ಹೇಳಿದ್ದಾರೆ.
“ಮೊದಲು ಸ್ಕ್ರಿಪ್ಟ್ ಹೀಗಿದೆ, ಪಾತ್ರ ಹೀಗಿದೆ ಎಂದು ನಿರ್ದೇಶಕರು ಹೇಳುತ್ತಿದ್ದರು. ನಿರ್ಮಾಪಕರು ನಿಮಗೆ ಇಷ್ಟು ದಿನ ಕೆಲಸ, ಇಷ್ಟು ಸಂಭಾವನೆ ಎಂದು ಹೇಳುತ್ತಿದ್ದರು. ಈಗ ವಾಹಿನಿಗಳೇ ಮಾಲೀಕರು. ಕಲಾವಿದರಿಗೆ ಕಾಸ್ಟ್ಯೂಮ್ ಹಾಕಿ ಫೋಟೋ ಕಳಿಸಿದಮೇಲೆ ಓಕೆಯೋ? ಇಲ್ಲವೋ ಎಂದು ಹೇಳುತ್ತಾರೆ. ಈಗ ಡಬ್ಬಿಂಗ್ ಕೂಡ ಆಗುತ್ತಿದೆ, ಈಗ ಧಾರಾವಾಹಿಗಳಲ್ಲಿ ನಮ್ಮ ತನ, ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯವನ್ನು ತೋರಿಸೋಕೆ ಆಗ್ತಿಲ್ಲ. ಈಗ ಕಾರ್ಮಿಕರು, ನಿರ್ಮಾಪಕರು ಬೇರೆ ಬೇರೆ ಆಗಿದ್ದಾರೆ” ಎಂದು ನಟ ಅಶೋಕ್ ಹೇಳಿದ್ದಾರೆ.
ಕ್ರಿಯೇಟಿವಿಟಿ ಎನ್ನೋದು ಇಲ್ಲ
“ಬೆಳಗ್ಗಿನಿಂದ ಸಂಜೆವರೆಗೆ ಕೂಲಿ ಮಾಡು, ಬಾತ್‌ರೂಮ್ ಕಟ್ಟು, ಕೂಲಿ ತಗೊಂಡು ಹೋಗು ಎಂದು ಹೇಳುತ್ತಾರೆ. ಡೈಲಾಗ್ ಹೀಗೆ ಕೊಡ್ತಾರೆ, ಇದನ್ನೇ ಹೇಳಿ ಅಂತಾರೆ. ಪಾತ್ರದ ವ್ಯತ್ಯಾಸ ಮಾಡಿ, ಇದೇ ಡೈಲಾಗ್ ಹೇಳಿ, ಇದೇ ಬಟ್ಟೆ ಹಾಕಿ ಎಂದು ಹೇಳ್ತಾರೆ. ಇಲ್ಲಿ ಕ್ರಿಯೇಟಿವಿಟಿ ಎನ್ನೋದು ಇಲ್ಲ” ಎಂದು ಅಶೋಕ್ ಹೇಳಿದ್ದಾರೆ.
ಗುಲಾಮಗಿರಿ ಇಷ್ಟ ಆಗೋದಿಲ್ಲ
“ನನಗೆ ಗುಲಾಮಗಿರಿ ತನ ಇಷ್ಟ ಆಗೋದಿಲ್ಲ. 50 ವರ್ಷಗಳ ಕಾಲ ನಾನು ನಟಿಸಿದ್ದೇನೆ, ಅದು ಗೋಲ್ಡನ್ ಟೈಮ್ ಎಂದು ಅಶೋಕ್ ಅವರು ಹೇಳಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆವೆರೆಗೆ ಕೆಲಸ ಮಾಡಬೇಕು, ಸಂಭಾವನೆ ತಗೋಬೇಕು. ಆರೋಗ್ಯ ಇದೆ, ಕೈಕಾಲಿನಲ್ಲಿ ಶಕ್ತಿ ಇದೆ, ಒಳ್ಳೆಯ ಕೆಲಸ ಮಾಡಿಕೊಂಡಿರೋಣ” ಎಂದು ಅಶೋಕ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
