MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Annayya Serial: ಪಾರು ಮುಂದೆ ಬಯಲಾಯ್ತು ಮಾಸ್ತಿಕೊಪ್ಪಲ ರಾಜನ ರಹಸ್ಯ: ವೀರಭದ್ರನ ಆಟಕ್ಕೆ ಬ್ರೇಕ್ ಯಾವಾಗ?

Annayya Serial: ಪಾರು ಮುಂದೆ ಬಯಲಾಯ್ತು ಮಾಸ್ತಿಕೊಪ್ಪಲ ರಾಜನ ರಹಸ್ಯ: ವೀರಭದ್ರನ ಆಟಕ್ಕೆ ಬ್ರೇಕ್ ಯಾವಾಗ?

Annayya Serial : ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಮುಂದೆ ಮಾಸ್ತಿಕೊಪ್ಪಲಿನ ರಾಜ ಅಂದ್ರೆ ರಾಣಿ ಗಂಡನಿಎ ಕೊಡುತ್ತಿದ್ದ ಮದ್ದಿನ ರಹಸ್ಯ ಬಯಲಾಗಿದೆ. ಇನ್ನೊಂದೆಡೆ ವೀರಭದ್ರನ ಕೋಪದಿಂದಾಗಿ ರತ್ನ ಮತ್ತು ಪರಶು ಮದುವೆ ಮಾತುಕತೆ ಮುರಿದು ಬಿದ್ದಿದೆ. ಮುಂದೇನಾಗುತ್ತೆ? 

2 Min read
Author : Pavna Das
Published : Feb 04 2026, 03:01 PM IST
Share this Photo Gallery
  • FB
  • TW
  • Linkdin
  • Whatsapp
16
ಅಣ್ಣಯ್ಯ ಧಾರಾವಾಹಿ
Image Credit : Zee Kannada

ಅಣ್ಣಯ್ಯ ಧಾರಾವಾಹಿ

ರತ್ನನ ನಿಶ್ಚಿತಾರ್ಥಕ್ಕಾಗಿ ಊರಿಗೆ ಆಗಮಿಸಿರುವ ರಾಣಿಗೆ ಇದೀಗ ತನ್ನ ಗಂಡನ ಕುರಿತಾದ ಸತ್ಯ ಅರಿವಾಗುವ ಸಮಯ ಬಂದಿದೆ. ಇಲ್ಲಿವರೆಗೂ ತನ್ನ ಗಂಡನಿಗೆ ನಿಜಕ್ಕೂ ಆರೋಗ್ಯ ಸಮಸ್ಯೆ ಇದೆ, ಎಂದು ಕಾಳಜಿಯಿಂದ ಆತನಿಗೆ ನೀಡುತ್ತಿದ್ದ ಮಾತ್ರೆಯಲ್ಲಿಯೇ ವಿಷ ಇದೆ ಎನ್ನುವ ಸತ್ಯ ಅತ್ತಿಗೆ ಪಾರುನಿಂದ ರಾಣಿ ಮುಂದೆ ಬಯಲಾಗಿದೆ.

26
 ಪಾರು ಮುಂದೆ ಬಯಲಾಯ್ತು ರಹಸ್ಯ
Image Credit : Zee Kannada

ಪಾರು ಮುಂದೆ ಬಯಲಾಯ್ತು ರಹಸ್ಯ

ರಾಣಿ ಪ್ರತಿದಿನ ತನ್ನ ಗಂಡನಿಗೆ ಕೊಡುತ್ತಿದ್ದ ಮಾತ್ರೆಯನ್ನು ಪಾರು ಕಣ್ಣಾರೆ ಕಂಡಾಗ ಆಕೆಗೆ ಶಾಕ್ ಆಗಿದೆ. ಇದು ಸ್ಲೋ ಪಾಯ್ಸನ್ ಹಾಗೇ ಇರುವ ಔಷಧಿ ಅನ್ನೋದನ್ನು ಕೇಳಿ ರಾಣಿಗೆ ದಿಗ್ಬ್ರಮೆಗೊಂಡಿದ್ದಾಳೆ. ಮುಂದೆ ರಾಣಿ ಈ ಸೇಡನ್ನು ಯಾವ ರೀತಿ ತೀರಿಸಿಕೊಳ್ಳುತ್ತಾಳೆ ಅನ್ನೋದನ್ನು ಕಾದು ನೋಡಬೇಕಾಗಿದೆ.

Related Articles

Related image1
Annayya Serial: ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
Related image2
Karnataka News Live: Annayya Serial - ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
36
ಮತ್ತೊಂದೆಡೆ ರತ್ನ ಜೀವನ ಸಂಕಷ್ಟದಲ್ಲಿ
Image Credit : Zee Kannada

ಮತ್ತೊಂದೆಡೆ ರತ್ನ ಜೀವನ ಸಂಕಷ್ಟದಲ್ಲಿ

ರತ್ನ ಮತ್ತು ಪರಶು ನಿಶ್ಚಿತಾರ್ಥ ಮನೆಮಂದಿ ಮುಂದೆ ನಡೆದಿದೆ. ಆದರೆ ಶಿವು ತಾಯಿ ಶಾರದಮ್ಮನ ಆಗಮದಿಂದ ಕೋಪಗೊಂಡ ವೀರಭದ್ರ ಮನೆಬಿಟ್ಟು ಹೊರನಡೆದಿದ್ದಾರೆ. ಮಾವನನ್ನು ತಡೆಯಲು ಶಿವು ಪ್ರಯತ್ನ ಪಟ್ಟರೂ ಸಾಧ್ಯವೇ ಆಗಲಿಲ್ಲ. ಇದರಿಂದ ತಾಯಿ ಮೇಲೆ ಶಿವು ಸಿಕ್ಕಾಪಟ್ಟೆ ಕೋಪಗೊಂಡು ಮನೆಬಿಟ್ಟು ತೆರಳುವಂತೆ ತಿಳಿಸಿದ್ದಾನೆ.

46
ಮುರಿದು ಬೀಳುತ್ತಾ ರತ್ನ ಮದುವೆ
Image Credit : Zee Kannada

ಮುರಿದು ಬೀಳುತ್ತಾ ರತ್ನ ಮದುವೆ

ರತ್ನ ಮದುವೆ ಬಗ್ಗೆ ಭಾರಿ ಕನಸು ಕಂಡಿದ್ದ ಶಿವಣ್ಣನಿಗೆ ಇದೀಗ ಮಾವ ಮದುವೆಗೆ ಒಪ್ಪಲು ಸಾಧ್ಯವೇ ಇಲ್ಲ ಅನ್ನೋದು ತಿಳಿದು, ನೆಲವೇ ಕುಸಿದಂತಾಗಿದೆ. ರತ್ನ ಜೀವನ ಹಾಳಾಯ್ತು ಎನ್ನುವ ಕೊರಗಿನಲ್ಲಿ ಮತ್ತೆ ತನ್ನ ತಾಯಿ ಮೇಲೆ ರೌದ್ರ ರೂಪ ತೋರೋದಕ್ಕೂ ಹಿಂಜರಿಯೋದಿಲ್ಲ ಶಿವು. ಯಾಕಂದ್ರೆ ಮಾವ ವೀರಭದ್ರ ಅದೇ ದ್ವೇಷವನ್ನು ಶಿವು ತಲೆಯಲ್ಲಿ ಬಾಲ್ಯದಲ್ಲಿಯೇ ತುಂಬಿಸಿಕೊಂಡು ಬಂದಿದ್ದಾನೆ.

56
ಮೂವರು ತಂಗಿಯರ ಬಾಳು ನಾಶ
Image Credit : Zee Kannada

ಮೂವರು ತಂಗಿಯರ ಬಾಳು ನಾಶ

ತಾನು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿದ್ದೇನೆ ಎಂದುಕೊಂಡಿರುವ ಶಿವು, ತನ್ನಿಂದಾಗಿ ತನ್ನ ತಂಗಿಯರ ಬಾಳಿಯಲ್ಲಿ ಬಿರುಗಾಳಿ ಎದ್ದಿದೆ ಅನ್ನೋದು ಮಾತ್ರ ಗೊತ್ತೆ ಇಲ್ಲ. ರಶ್ಮಿಯನ್ನು ಸೀನನಿಗೆ ಮದುವೆ ಮಾಡಿಸಿ ಅಲ್ಲೂ ತಪ್ಪು ಮಾಡಿದ, ಸೀನಾ ಮತ್ತು ರಶ್ಮಿ ಸಂಸಾರಾನೆ ನಡೆಸುತ್ತಿಲ್ಲ. ಇನ್ನೊಂದೆಡೆ ರಾಣಿಯನ್ನು ಮಾಸ್ತಿಕೊಪ್ಪಲದ ರಾಜನಿಗೆ ಮದುವೆ ಮಾಡಿ, ಅಲ್ಲೂ ಎಡವಿದ. ಇದೀಗ ಪರಶು ಜೊತೆ ರತ್ನ ಮದುವೆ ಮಾಡುವ ನಿರ್ಧಾರ ಮಾಡಿ ಮತ್ತೆ ತಪ್ಪು ಮಾಡುತ್ತಿದ್ದಾನೆ ಶಿವು. ಮುಂದೇನಾಗುತ್ತೆ ಕಾದು ನೋಡಬೇಕು.

66
ಯಾರೆಲ್ಲಾ ನಟಿಸುತ್ತಿದ್ದಾರೆ?
Image Credit : Zee Kannada

ಯಾರೆಲ್ಲಾ ನಟಿಸುತ್ತಿದ್ದಾರೆ?

ಅಣ್ಣಯ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ವಿಕಾಸ್ ಉತ್ತಯ್ಯ, ನಿಶಾ ರವಿಕಿರಣ್, ನಾಗೇಂದ್ರ ಶಾ, ನಾಗರತ್ನ, ರಾಘವಿ, ಪ್ರತೀಕ್ಷಾ ಸೇರಿ ಹಲವಾರು ಹಿರಿ ಕಿರಿಯ ಕಲಾವಿದರು ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಕನ್ನಡ ಧಾರಾವಾಹಿಗಳ ಟಿಆರ್‌ಪಿ

Latest Videos
Recommended Stories
Recommended image1
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
Recommended image2
Sushma K Rao: ಡಿವೋರ್ಸ್​ ಆಗಿದ್ದು, ಮರು ಮದ್ವೆಯಾಗಿದ್ದು ಟಾಂ ಟಾಂ ಮಾಡಬೇಕಿತ್ತಾ? ಏನಿದು ಕೆಟ್ಟ ಮನಸ್ಥಿತಿ?
Recommended image3
Naa Ninna Bidalaare: ಶರತ್​ ಮೇಲೆ ಲವ್​ ಆಗ್ತಿದ್ದಂತೆಯೇ ಲುಕ್ಕೇ ಬದಲಾಯಿಸಿ ಹಾಟ್​ ಅವತಾರದಲ್ಲಿ ದುರ್ಗಾ!
Related Stories
Recommended image1
Annayya Serial: ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
Recommended image2
Karnataka News Live: Annayya Serial - ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved