- Home
- Entertainment
- TV Talk
- ಮಹಿಳಾ ದಿನದಂದೇ ಇಷ್ಟೊಂದು ದೌರ್ಜನ್ಯನಾ? Annayya Serial ವಿರುದ್ಧ ಸಿಡಿದೆದ್ದ ವೀಕ್ಷಕರು!
ಮಹಿಳಾ ದಿನದಂದೇ ಇಷ್ಟೊಂದು ದೌರ್ಜನ್ಯನಾ? Annayya Serial ವಿರುದ್ಧ ಸಿಡಿದೆದ್ದ ವೀಕ್ಷಕರು!
ಜೀ ಕನ್ನಡದ 'ಅಣ್ಣಯ್ಯ' ಸೀರಿಯಲ್‌ನಲ್ಲಿ, ತನ್ನ ತಂಗಿಯರನ್ನೇ ಪ್ರಾಣವಾಗಿರಿಸಿಕೊಂಡಿರುವ ಅಣ್ಣ ಶಿವು. ಆದರೆ, ಮದುವೆಯಾದ ಎಲ್ಲಾ ತಂಗಿಯರಿಗೂ ಮೋಸವಾಗುತ್ತಿದ್ದು, ಇದೀಗ ರತ್ನಾ ಕೂಡ ಕ್ರಿಮಿನಲ್ ಪರಶು ಕೈಸೇರಿದ್ದಾಳೆ. ಹೆಣ್ಣುಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಣ್ಣಯ್ಯ ಸೀರಿಯಲ್
ಅಣ್ಣ ಎಂದರೆ ತಂದೆಯ ಸಮಾನ ಎನ್ನುವ ಮಾತಿನಂತೆ ನಡೆದುಕೊಳ್ಳುತ್ತಿರುವ ಸೀರಿಯಲ್ ಜೀ ಕನ್ನಡದ ಅಣ್ಣಯ್ಯ ಸೀರಿಯಲ್ (Annayya Serial). ತನ್ನ ನಾಲ್ವರೂ ತಂಗಿಯಂದಿರನ್ನು ಅಪ್ಪನಿಗಿಂತಲೂ ಮುದ್ದಾಗಿ ಬೆಳೆಸಿ ಅವರಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುವ ಪಣ ತೊಟ್ಟು, ಅವರ ಹಿತರಕ್ಷಣೆಗೆ ಕಂಕಣಬದ್ಧ ಆಗಿದ್ದಾನೆ ಶಿವು.
ಎಲ್ಲರಿಗೂ ಮೋಸ
ಆದರೆ, ಇಂದಿನ ಪ್ರೊಮೋ ನೋಡಿ ಸೀರಿಯಲ್ ವೀಕ್ಷಕರು ಸಿಡಿದೆದ್ದು ಹೋಗಿದ್ದಾರೆ. ಏಕೆಂದರೆ ಇಲ್ಲಿಯವರೆಗೂ ಅಣ್ಣಯ್ಯ ಮದುವೆ ಮಾಡಿರುವ ಯಾವ ತಂಗಿಯರೂ ಸಂತೋಷ ಕಾಣುತ್ತಿಲ್ಲ. ಎಲ್ಲರೂ ಮೋಸ ಹೋಗಿರುವವರೇ. ಮತ್ತೊಬ್ಬಳನ್ನು ಪ್ರೀತಿಸುವ ಗಂಡ ಗುಂಡಮ್ಮನ ಪತಿ, ರಾಣಿಗೆ ಪೆದ್ದು ಗಂಡ ಆದರೆ ಇದೀಗ ರತ್ನಾಳಿಗೂ ಅನ್ಯಾಯ!
ನಿಲ್ಲಲಿಲ್ಲ ಮದುವೆ
ಪರಶು ಜೊತೆ ರತ್ನಾ ಮದುವೆ ನಡೆಯುತ್ತಿರುವಾಗಲೇ, ವಿಲನ್ ಪರಶುವಿನ ಜೊತೆ ಇವಳ ಮದುವೆಯನ್ನು ನಿಲ್ಲಿಸಪ್ಪಾ, ಅವನ ಸತ್ಯ ಗೊತ್ತಾಗಲಿ ಎಂದೇ ಎಲ್ಲರೂ ಹೇಳುತ್ತಿದ್ದರು.
ಪ್ರತಿ ಹೆಣ್ಣಿಗೂ ಅನ್ಯಾಯ
ಆದರೆ ಆಗಿದ್ದೇ ಬೇರೆ. ಮದುವೆ ಆಗಿದೆ. ಇಲ್ಲಿಯೂ ಹೆಣ್ಣಿಗೆ ಅನ್ಯಾಯ ಆಗಿದೆ. ರತ್ನಾ ಕ್ರಿಮಿನಲ್ ಪರಶು ಮನೆ ಸೇರಿದ್ದಾಳೆ. ಅವನ ಜೊತೆ ಕೊನೆಯತನಕ ಇರುವುದಾಗಿ ಹೇಳಿದ್ದಾಳೆ.
ವೀಕ್ಷಕರ ಆಕ್ರೋಶ
ಇದನ್ನು ನೋಡಿ ಸೀರಿಯಲ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕೆ ಈ ಸೀರಿಯಲ್‌ನಲ್ಲಿ ಎಲ್ಲಾ ಹೆಣ್ಣಿಗೂ ಅನ್ಯಾಯ ಆಗಿರುವ ಹಾಗೆ ತೋರಿಸುತ್ತಿದ್ದೀರಿ, ನಿಮಗೆ ಹೆಣ್ಣಿನ ಮೇಲೆ ಯಾಕಿಷ್ಟು ಕೋಪ ಎಂದು ಪ್ರಶ್ನಿಸುತ್ತಿದ್ದಾರೆ.
ನೆಟ್ಟಿಗರ ಪ್ರಶ್ನೆ
ಮುಂದೆ ಇದೇ ಹೆಣ್ಣುಮಕ್ಕಳು ತಮ್ಮ ಗಂಡಂದಿರಿಗೆ ಬುದ್ಧಿ ಕಲಿಸಬಹುದು, ಅವರನ್ನು ಸರಿ ದಾರಿಗೆ ತರಬಹುದು. ಸ್ಟೋರಿ ಹೀಗೆ ಹೋಗಬಹುದು. ಆದರೆ ಅದಕ್ಕಾಗಿ ಅವರು ತಮ್ಮ ಇಡೀ ಬದುಕನ್ನೇ ನರಕ ಮಾಡಿಕೊಳ್ಳಬೇಕಾ ಎನ್ನುವುದು ನೆಟ್ಟಿಗರ ಪ್ರಶ್ನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

