ಸೀರಿಯಲ್‌ನಲ್ಲಿ ವಿಲನ್, ನಿಜ ಜೀವನದಲ್ಲಿ ಪಕ್ಕಾ ಹೀರೋ; ಜೀ ಕನ್ನಡ ವಾಹಿನಿಯ ಸುರಸುಂದರಾಂಗ
ಜೀ ಕನ್ನಡದ 'ಅಣ್ಣಯ್ಯ' ಸೀರಿಯಲ್‌ನಲ್ಲಿ ಖಳನಟ ಪಾತ್ರದಲ್ಲಿ ನಟಿಸುತ್ತಿರುವ ಚಿರಂಜೀವಿ, ನಿಜ ಜೀವನದಲ್ಲಿ ಇಂಜಿನೀಯರ್ ಪದವೀಧರ. ತೆರೆಯ ಮೇಲೆ ಕುತಂತ್ರಿಯಾಗಿ ಕಾಣಿಸಿಕೊಂಡರೂ, ತಮ್ಮ ಹೀರೋ ಲುಕ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಜನಪ್ರಿಯ ಸೀರಿಯಲ್ ನಟ
ಸೀರಿಯಲ್‌ಗಳು ಹಿಟ್ ಆದ್ರೆ ಅಲ್ಲಿಯ ಪಾತ್ರಗಳನ್ನು ಜನರು ಎಂದಿಗೂ ಮರೆಯಲ್ಲ. ಮತ್ತೊಂದು ವಿಶೇಷ ಅಂದ್ರೆ ಕಲಾವಿದರನ್ನು ಸೀರಿಯಲ್ ಪಾತ್ರಗಳಿಂದಲೇ ಗುರುತಿಸಲು ಆರಂಭಿಸುತ್ತಾರೆ. ಕಲಾವಿದರು ಸೀರಿಯಲ್ ಪಾತ್ರಕ್ಕಿಂತ ನಿಜ ಜೀವನದಲ್ಲಿ ತುಂಬಾನೇ ವಿಭಿನ್ನವಾಗಿರುತ್ತಾರೆ. ಸೀರಿಯಲ್‌ನಲ್ಲಿ ನಾಯಕ-ನಾಯಕಿ ಅಷ್ಟೇ ವಿಲನ್‌ಗಳಿಗೂ ಅಷ್ಟೇ ಪ್ರಾಮುಖ್ಯತೆ ಇರುತ್ತದೆ. ಇಂದು ನಾವು ಜೀ ಕನ್ನಡ ವಾಹಿನಿಯ ಚೆಲುವನ ಬಗ್ಗೆ ಮಾತನಾಡುತ್ತಿದ್ದೇವೆ.
ಅಣ್ಣಯ್ಯ ಸೀರಿಯಲ್
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಆಗುತ್ತಿದ್ದಂತೆ ಅಣ್ಣಯ್ಯ ಸೀರಿಯಲ್ ತನ್ನೆಲ್ಲಾ ವೀಕ್ಷಕರನ್ನು ಟಿವಿ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತದೆ. ಸಾಮಾನ್ಯವಾಗಿ ಸೀರಿಯಲ್‌ಗಳಲ್ಲಿ ಲೇಡಿ ವಿಲನ್ ಇರುತ್ತಾರೆ. ಆದ್ರೆ ಅಣ್ಣಯ್ಯದಲ್ಲಿ ಮೇಲ್ ವಿಲನ್. ವೀರಭದ್ರನ ಒಂದೊಂದು ಕುತಂತ್ರಗಳು ಸೀರಿಯಲ್ ಗೆಲುವಿನ ಒಂದೊಂದು ಹೆಜ್ಜೆಯಾಗಿವೆ. ಈ ಕುತಂತ್ರಿ ವೀರಭದ್ರನಿಗೆ ಮಗ ಪರಶು ಸಾಥ್ ಕೊಡ್ತಿರುತ್ತಾನೆ.
ಪಕ್ಕಾ ಹೀರೋ ಲುಕ್
ಪರಶು ಪಾತ್ರದಲ್ಲಿ ನಟ ಚಿರಂಜೀವಿ ನಟಿಸುತ್ತಿದ್ದಾರೆ. ಸೀರಿಯಲ್‌ನಲ್ಲಿ ವಿಲನ್ ಲುಕ್ ಮೂಲಕವೇ ನೋಡುಗರನ್ನು ಎದೆಬಡಿತ ಹೆಚ್ಚಿಸುವ ಚಿರಂಜೀವಿ ಅವರ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಒಮ್ಮೆ ಕಣ್ಣಾಡಿಸಿದ್ರೆ, ಇವರು ಪಕ್ಕಾ ಹೀರೋ ಮೆಟಿರಿಯಲ್ ಅಂತ ಖಂಡಿತ ಅನ್ನಿಸುತ್ತದೆ. ಜಿಮ್ ಮಾಡಿ ದೇಹ ಹುರಿಗೊಳಿಸಿಕೊಂಡಿರುವ ನಟ ಚಿರಂಜೀವಿ, ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಚಿರಂಜೀವಿ ಇಂಜಿನೀಯರ್
ಇಂಜಿನೀಯರ್ ಪದವೀಧರರಾಗಿರುವ ಚಿರಂಜೀವಿ ಅವರನ್ನು ಸೆಳೆದಿದ್ದು ಬಣ್ಣದ ಲೋಕ. ಇಂದು ಕರುನಾಡಿನ ತುಂಬೆಲ್ಲಾ ಪರಶು ಅಂತಾನೇ ಚಿರಂಜೀವಿ ಗುರುತಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಚಿರಂಜೀವಿ, ವೃತ್ತಿಜೀವನದ ಕುರಿತ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಚಿರಂಜೀವಿ ಫೋಟೋಗಳಿಗೆ ಮಹಿಳಾ ನೆಟ್ಟಿಗರೇ ಹೆಚ್ಚು ಕಮೆಂಟ್ ಮಾಡಿರುತ್ತಾರೆ.
ಇದನ್ನೂ ಓದಿ: Bigg Boss ರಕ್ಷಿತಾ ಶೆಟ್ಟಿ ಮದ್ವೆ Bhargavi LLb ನಾಯಕನ ಜೊತೆ! ಮಲ್ಲಮ್ಮ ಕೊಟ್ಟ ಶಾಕ್ ಏನು ಕೇಳಿ
ಅಣ್ಣಯ್ಯ ಸೀರಿಯಲ್‌ನಲ್ಲಿ ಏನಾಗ್ತಿದೆ?
ಸದ್ಯ ಅಣ್ಣಯ್ಯ ಸೀರಿಯಲ್‌ನಲ್ಲಿ ಪರಶು ಮತ್ತು ರತ್ನಾ ಮದುವೆ ನಡೆದಿದೆ. ಮದುವೆಗೆ ಎಷ್ಟೇ ತೊಡಕುಗಳು ಬಂದರೂ ವೀರಭದ್ರ ಮಗನ ಮದುವೆ ಮಾಡಿದ್ದಾನೆ. ಪರಶುನಿಂದ ಮೋಸಕ್ಕೊಳಗಾದ ಮಹಿಳೆ ಕಲ್ಯಾಣಮಂಟಪದವರೆಗೂ ಬಂದರೂ ಮದುವೆ ತಡೆಯುವಲ್ಲಿ ವಿಫಲವಾಗಿದ್ದಾಳೆ. ಪಾರು ಮುಂದೆಯೇ ಎಲ್ಲಾ ನಡೆಯುತ್ತಿದ್ರೂ ಡಾಕ್ಟರಮ್ಮಗೆ ಯಾವುದೂ ಗೊತ್ತಾಗುತ್ತಿಲ್ಲ. ಇನ್ನು ದೇವಿಪುತ್ರ ಶಿವು ಜಾಣ ಪೆದ್ದನಂತೆ ದೊಡ್ಡ ತಂಗಿ ಮದುವೆ ಸಂಭ್ರಮದಲ್ಲಿ ಮೈಮರೆತಿದ್ದಾನೆ.
ಇದನ್ನೂ ಓದಿ: ಮಹಿಳಾ ದಿನದಂದೇ ಇಷ್ಟೊಂದು ದೌರ್ಜನ್ಯನಾ? Annayya Serial ವಿರುದ್ಧ ಸಿಡಿದೆದ್ದ ವೀಕ್ಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

