- Home
- Entertainment
- TV Talk
- Annayya Serial: ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
Annayya Serial: ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
Annayya Kannada Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಣ್ಣಯ್ಯ' ಈಗ ನಿಜಕ್ಕೂ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಜಿಮ್ ಸೀನ, ರಶ್ಮಿಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿತ್ತು. ಈಗ ಜಿಮ್ ಸೀನ ಬದಲಾಗಿದ್ದಾನಾ ಎಂಬ ಪ್ರಶ್ನೆ ಮೂಡಿದೆ.

ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ
ಮೊದಲಿನಿಂದಲೂ ರಶ್ಮಿ ದಪ್ಪಗಿದ್ದಾಳೆ, ಅವಳು ಮೂಟೆ, ನಾನು ಅವಳನ್ನು ಹೆಂಡ್ತಿ ಎಂದು ಒಪ್ಪೋದಿಲ್ಲ ಎಂದು ಅಸಮಾಧಾನ ಹೊಂದಿದ್ದ ಜಿಮ್ ಸೀನ, ಇದೀಗ ಅವಳ ಪರವಾಗಿ ತಾಯಿ ಮುಂದೆ ನಿಂತಿರುವುದು ನಿಜಕ್ಕೂ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ರಶ್ಮಿಗೂ ಪಿಂಕಿ ಸತ್ಯ ಗೊತ್ತಿದೆ
ಪಿಂಕಿಯನ್ನು ಪ್ರೀತಿ ಮಾಡಿದ್ದ ಜಿಮ್ ಸೀನನಿಗೆ ಆರಂಭದಲ್ಲಿ ರಶ್ಮಿ ದಪ್ಪಗಿದ್ದಾಳೆ ಎಂದು ಸಿಟ್ಟು ಬಂದಿತ್ತು, ಯಾರು ಎಷ್ಟೇ ಹೇಳಿದರೂ ಕೇಳದೆ ಅವನನ್ನು ರಶ್ಮಿ ಜೊತೆ ಮದುವೆ ಮಾಡಿಸಿದ್ದರು. ಮದುವೆ ಆದಬಳಿಕ ಕೂಡ ಜಿಮ್ ಸೀನನ ಮನಸ್ಸಿನಲ್ಲಿ ಸದಾ ಪಿಂಕಿಯಿದ್ದಳು. ಇದು ರಶ್ಮಿಗೂ ಗೊತ್ತಿದೆ.
ಮಾನವೀಯತೆಯನ್ನು ಪ್ರದರ್ಶಿಸಿದ್ದಾನೆ
ತನ್ನ ತಾಯಿಯು ರಶ್ಮಿಗೆ ಊಟವನ್ನೇ ಹಾಕಿಲ್ಲ. ಈ ವಿಚಾರ ಜಿಮ್ ಸೀನನಿಗೆ ತಿಳಿಯುತ್ತಿದ್ದಂತೆ ಅವನು ತಾಯಿ ವಿರುದ್ಧ ರೊಚ್ಚಿಗೆದ್ದಿದ್ದಾನೆ. ಕರ್ಣನ ಮನೆಯಲ್ಲಿ ರಶ್ಮಿಗೆ ಅವಮಾನವಾಗುತ್ತಿದೆ ಎಂಬ ಸಿಟ್ಟು ಅವನನ್ನು ತಾಯಿಯ ಎದುರೇ ಮಾತನಾಡಲು ಪ್ರೇರೇಪಿಸಿದೆ. ರಶ್ಮಿಯ ಪರವಾಗಿ ನಿಂತು ತಾಯಿಯನ್ನು ಪ್ರಶ್ನಿಸುವ ಮೂಲಕ ಜಿಮ್ ಸೀನ ತನ್ನೊಳಗಿನ ಮಾನವೀಯತೆಯನ್ನು ಪ್ರದರ್ಶಿಸಿದ್ದಾನೆ.
ಜಿಮ್ ಸೀನನಿಗೆ ಲವ್ ಆಗಿದ್ಯಾ?
ತನ್ನನ್ನು ಸದಾ ಹೀಯಾಳಿಸುತ್ತಿದ್ದ ಗಂಡ, ಇಂದು ತನ್ನ ಪರವಾಗಿ ಸ್ವಂತ ತಾಯಿ ಜೊತೆ ಜಗಳ ಆಡಿದ್ದು, ಪರವಹಿಸಿ ಮಾತನಾಡಿದ್ದು ಕಂಡು ರಶ್ಮಿ ಅಚ್ಚರಿಗೊಂಡಿದ್ದಾಳೆ. ಈಗ ಜಿಮ್ ಸೀನನಿಗೆ ತನ್ನ ಮೇಲೆ ಲವ್ ಆಗಿರಬಹುದು ಎಂದು ಅವಳು ಅಂದುಕೊಂಡಿದ್ದಾಳೆ.
ಮುಂದೆ ಏನಾಗಲಿದೆ?
ಜಿಮ್ ಸೀನನು ಮುಂದೊಂದು ದಿನ ಪಿಂಕಿಯನ್ನು ಮರೆತು ತನ್ನನ್ನು, ಹೆಂಡ್ತಿಯಾಗಿ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳಬಹುದು ಎಂದು ರಶ್ಮಿ ಆಸೆ ಇಟ್ಟುಕೊಂಡಿದ್ದಾಳೆ. ದ್ವೇಷ, ತಿರಸ್ಕಾರದ ನಡುವೆ ಈ ಮದುವೆ ಸಂಬಂಧ ಹುಟ್ಟಿಕೊಂಡಿದ್ದು, ಮುಂದೆ ಈ ಜೋಡಿ ಪ್ರೀತಿಯಿಂದ ಬಾಳಲಿದೆಯಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

