ಆಂಕರ್ ಅನುಶ್ರೀ ಮದುವೆಗೆ ಕರೀಲಿಲ್ಲ, ಹಾಡು ಹೇಳೋಕೆ ಪ್ಲಾನ್ ಮಾಡಿದ್ದೆ: ನಟ ಚಿಕ್ಕಣ್ಣ
ಜೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಮತ್ತು ಹಾಸ್ಯನಟ ಚಿಕ್ಕಣ್ಣ ತಮ್ಮ ತಮಾಷೆಯ ಮಾತುಗಳಿಂದ ವೀಕ್ಷಕರನ್ನು ರಂಜಿಸಿದ್ದಾರೆ. ಅನುಶ್ರೀ ಮದುವೆಗೆ ತನ್ನನ್ನು ಆಹ್ವಾನಿಸಿಲ್ಲ ಎಂದು ಹೇಳಿಕೊಂಡ ಚಿಕ್ಕಣ್ಣ, ಆಕೆಗಾಗಿ ಹಾಡಲು ಯೋಜಿಸಿದ್ದ ಹಾಡನ್ನು ವೇದಿಕೆಯಲ್ಲೇ ಹಾಡಿದ್ದಾರೆ.

ನಿರೂಪಕಿ ಅನುಶ್ರೀ ಮತ್ತು ಹಾಸ್ಯನಟ ಚಿಕ್ಕಣ್ಣ
ಕ್ಯಾಮೆರಾ ಮುಂದೆ ನಿರೂಪಕಿ ಅನುಶ್ರೀ ಮತ್ತು ಹಾಸ್ಯನಟ ಚಿಕ್ಕಣ್ಣ ಅವರ ಕಾಂಬಿನೇಷನ್ ಸಿಕ್ಕಾಪಟ್ಟೆ ಚೆನ್ನಾಗಿರುತ್ತದೆ. ವೇದಿಕೆ ಮೇಲಿನ ಇವರಿಬ್ಬರ ನಟನೆಯನ್ನು ನೋಡಿದ್ದ ಕೆಲವರು, ಇಬ್ಬರು ಮದುವೆ ಆಗ್ತಾರೆ ಎಂಬ ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದರು. ಈ ವಿಷಯದ ಬಗ್ಗೆ ಚಿಕ್ಕಣ್ಣ ಮತ್ತು ಅನುಶ್ರೀ ಹಲವು ಬಾರಿ ಮಾತನಾಡಿದ್ದಾರೆ. ಇದೀಗ ಈ ಜೋಡಿ ಮತ್ತೊಮ್ಮೆ ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಸೇರಿದ್ದು, ಮತ್ತೊಮ್ಮೆ ತಮ್ಮ ತಮಾಷೆ ಮಾತುಗಳ ಮೂಲಕ ವೀಕ್ಷಕರನ್ನು ನಗಿಸಿದ್ದಾರೆ.
ಚಿಕ್ಕಣ್ಣ ಅವರ ಪ್ರೋಮೋ
ಹೌದು, ಸರಿಗಮಪ ಶೋಗೆ ಅತಿಥಿಯಾಗಿ ಬಂದಿರುವ ಚಿಕ್ಕಣ್ಣ ಅವರ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ ಅನುಶ್ರೀ ಅವರ ಮದುವೆಯಲ್ಲಿ ಚಿಕ್ಕಣ್ಣ ಹಾಡು ಹೇಳಲು ಪ್ಲಾನ್ ಮಾಡಿಕೊಂಡಿದ್ರಂತೆ. ಆ ಹಾಡು ಯಾವುದು ಮತ್ತು ಅನುಶ್ರೀ ಮದುವೆಗೆ ಯಾಕೆ ಹೋಗಿಲ್ಲ ಎಂಬ ಕಾರಣವನ್ನು ಚಿಕ್ಕಣ್ಣ ಬಹಿರಂಗಪಡಿಸಿದ್ದಾರೆ.
ಮದುವೆಗೆ ಹೋಗಲಿಲ್ಲ ಯಾಕೆ?
ಅನುಶ್ರೀ ಅವರು ಮದುವೆಗೆ ಆಹ್ವಾನ ನೀಡಿರಲಿಲ್ಲ ಎಂದು ಚಿಕ್ಕಣ್ಣ ಸರಿಗಮಪ ಶೋನಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಮದುವೆಗೆ ಹೋಗಲಿಲ್ಲ. ಮದುವೆಗೆ ಕರೆದಿದ್ರೆ, ರಾಮಚಾರಿ ಸಿನಿಮಾದ 'ನಮ್ಮೂರ ಯುವರಾಣಿ' ಹಾಡಲು ಹೇಳಲು ಪ್ಲಾನ್ ಮಾಡಿಕೊಂಡಿದ್ರೆ ಹೇಳಿ ಹಾಡಿದರು. ನಂತರ ಈಗಲೂ ಹಾಡು ಹೇಳಬಹುದು ಎಂದು ಇದೇ ಹಾಡಿನ ಮಾಂಗಲ್ಯದಿಂದ ನಂಟಾದ್ರೂ, ಮನ ಸೇರೋ ಸುಖವನ್ನು ಮದುವೆ ಅಂದ್ರು ಎಂದು ಹೇಳಿದರು. ಇವರಿಬ್ಬರ ತಮಾಷೆ ನೋಡಿ ಕಾರ್ಯಕ್ರಮದಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ.
ಚಿಕ್ಕಣ್ಣ ಹಾಡು
ಇನ್ನು ಚಿಕ್ಕಣ್ಣ ಹಾಡು ಹೇಳುತ್ತಿದ್ರೆ ಅನುಶ್ರೀ ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಸದ್ಯ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಚಿಕ್ಕಣ್ಣ ಅವರ ಧ್ವನಿ ಚೆನ್ನಾಗಿದೆ.ಸೂಪರ್ ಎಂದು ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಟಿ ಉದ್ಯೋಗಿಯಾಗಿರುವ ರೋಷನ್ ರಾಮ್‌ಮೂರ್ತಿ
ನಿರೂಪಕಿ ಅನುಶ್ರಿ ಅವರ ಮದುವೆ ಉದ್ಯಮಿ ಮತ್ತು ಐಟಿ ಉದ್ಯೋಗಿಯಾಗಿರುವ ರೋಷನ್ ರಾಮ್‌ಮೂರ್ತಿ ಅವರೊಂದಿಗೆ 28ನೇ ಆಗಸ್ಟ್ 2025ರಂದು ಅದ್ಧೂರಿಯಾಗಿ ರೆಸಾರ್ಟ್‌ನಲ್ಲಿ ನಡೆದಿತ್ತು. ಮದುವೆಗೆ ಆಪ್ತ ಬಂಧುಗಳು ಮತ್ತು ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು. ರೋಷನ್ ಅವರು ಕೊಡಗು ಮೂಲದವರಾದ್ರೆ, ಅನುಶ್ರೀ ಕರಾವಳಿ ಭಾಗದವರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

