Akanksha Chamola Gaurav Khanna Relationship: ಖ್ಯಾತ ಧಾರಾವಾಹಿ ಜೋಡಿ ಬದುಕಿನಲ್ಲಿ ಸುನಾಮಿ ಎದ್ದಿದೆ. ಈಗಾಗಲೇ ದೂರ ದೂರ ಆಗಿ ಬದುಕುತ್ತಿರುವ ನಾವು ಕಾನೂನಾತ್ಮಕವಾಗಿ ಡಿವೋರ್ಸ್ ತಗೊಳ್ತೀವಿ ಎಂದು ನಟಿ ಹೇಳಿದ್ದಾರೆ. ಈಗ ನಟಿಯ ಲೈ*ಗಿಕ ವಿಷಯ ಗೊತ್ತಿದ್ದೇ ಮದುವೆಯಾಗಿದ್ದೀನಿ ಎಂದ ನಟನನ್ನು ನೋಡಿ ಅನೇಕರು ಮೆಚ್ಚಿದ್ದಾರೆ.
Akanksha Chamola Gaurav Khanna: ಬಿಗ್ ಬಾಸ್ ಶೋ ವಿಜೇತ ಗೌರವ್ ಖನ್ನಾ ಅವರು ಈ ಹಿಂದೆ ನಂ 1 ‘ಅನುಪಮಾ’ ಧಾರಾವಾಹಿಯಲ್ಲಿ ಕೂಡ ಹೀರೋ ಆಗಿ ನಟಿಸಿದ್ದರು. ರಿಯಾಲಿಟಿ ಶೋಗಳನ್ನು ಗೆಲ್ಲುತ್ತಿದ್ದ ಅವರು, ವೈಯಕ್ತಿಕ ವಿಚಾರದಲ್ಲಿ ಮಾತ್ರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ. ಈಗ ಅವರ ಪತ್ನಿ ಜೊತೆ ಮಾತನಾಡಿದ ಮಾತುಗಳನ್ನು ಕೇಳಿ ಜನರು ಮೆಚ್ಚಿದ್ದಾರೆ.
ಗೌರವ್ ಖನ್ನಾ ಬದುಕಿನಲ್ಲಿ ಏನಾಗಿದೆ?
'ಲಾಕಪ್ 2' ರಿಯಾಲಿಟಿ ಶೋನಲ್ಲಿ ಗೌರವ್ ಖನ್ನಾ ಪತ್ನಿ ಆಕಾಂಕ್ಷಾ ಛಮೋಲ ಭಾಗವಹಿಸಿದ್ದರು. ಆ ವೇಳೆ ಅವರು “ನಾನು, ಗೌರವ್ ದೂರ ದೂರ ಆಗಿ ಬದುಕಲು ಆರಂಭಿಸಿ ಒಂದು ವರ್ಷವಾಗಿದೆ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ, ನಾವಿಬ್ಬರೂ ದೂರ ದೂರ ಆಗಿ ನಮ್ಮ ಭವಿಷ್ಯವನ್ನು ನೋಡ್ತಿದ್ದೀವಿ, ಡಿವೋರ್ಸ್ ತಗೊಳ್ಳಲಿದ್ದೇವೆ” ಎಂದು ಹೇಳಿದರು. ಬಿಗ್ ಬಾಸ್ ಶೋ ಶುರುವಾದಾಗಿನಿಂದ ಗೌರವ್ ಅವರಿಗೆ ಆಕಾಂಕ್ಷಾ ಸಪೋರ್ಟ್ ಮಾಡುತ್ತಲೇ ಬಂದಿದ್ದರು. ಒಟ್ಟಿನಲ್ಲಿ ಇಲ್ಲಿಯವರೆಗೆ ಇವರಿಬ್ಬರು ಜೊತೆಗಿದ್ದಿದ್ದೆಲ್ಲ ನಾಟಕ ಎಂದು ಎಲ್ಲರೂ ಭಾವಿಸಿ ಮನ ಬಂದಂತೆ ಮಾತನಾಡಿದರು.
ಇದೆಲ್ಲ ನಾಟಕ, ರಿಯಾಲಿಟಿ ಶೋನಲ್ಲಿ ಜನರ ಮನಸ್ಸು ಸೆಳೆಯಲು ಆಕಾಂಕ್ಷಾ ನಾಟಕ ಮಾಡುತ್ತಿದ್ದಾರೆ ಎಂದು ಕೆಲ ಸೆಲೆಬ್ರಿಟಿಗಳು ಕೂಡ ಹೇಳಿದ್ದುಂಟು. ಇದರ ಜೊತೆಗೆ ಆಕಾಂಕ್ಷಾ ಅವರು, “ಮದುವೆಗೂ ಮುನ್ನ ನನಗೆ ಹುಡುಗಿಯರಲ್ಲಿ ಆಸಕ್ತಿ ಇತ್ತು, ಹೆಚ್ಚೇನಿಲ್ಲವಾದರೂ ಕೂಡ ನಾನು ಒಂದು ಹಂತಕ್ಕೆ ಅವರನ್ನು ಇಷ್ಟಪಡ್ತಿದ್ದೆ, ಮದುವೆಯಾದ್ಮೇಲೆ ಅದನ್ನೆಲ್ಲ ಬಿಟ್ಟೆ” ಎಂದು ಆಕಾಂಕ್ಷಾ ಹೇಳಿದ್ದರು.
ಲಾಕಪ್ ಶೋಗೆ ಈಗ ಗೌರವ್ ಖನ್ನಾ ಕೂಡ ಬಂದಿದ್ದಾರೆ. ಆಗ ಅವರು ಪತ್ನಿಗೆ ಬೆಂಬಲ ಕೊಟ್ಟಿದ್ದಾರೆ. "ನೀನು ಡಿವೋರ್ಸ್, ಬೈ*ಸೆಕ್ಷ್ಯುವ*ವಲ್ ಬಗ್ಗೆ ಮಾತನಾಡಿದ್ದೀಯಾ. ನಿನ್ನ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ನಾವು ಬೇರೆಯಾಗಿಲ್ಲ, ಕಾನೂನುಬದ್ಧವಾಗಿ ನಾವಿಬ್ಬರೂ ಗಂಡ-ಹೆಂಡತಿ. ನಮ್ಮ ನಡುವೆ ಪರಸ್ಪರ ಗೌರವವಿದೆ, ಆದರೆ ಈ ಮಾತು ಹೇಳಬಾರದಿತ್ತು, ಹೇಳಿರೋದು ತೊಂದರೆಯಾಗಿದೆ, ಹೋಗಲಿ ಬಿಡು" ಎಂದು ಹೇಳಿದ್ದಾರೆ.
ಗೌರವ್ ಖನ್ನಾ ಹೇಳಿದ್ದೇನು?
"ನಾವು ಹಿಂದೆಯೇ ಬೇರೆಯಾಗಿದ್ದೇವೆ, ಪ್ರಚಾರಕ್ಕಾಗಿ ಈಗ ಶೋಗೆ ಬಂದಿದ್ದೇವೆ ಎಂದು ಹಲವರು ಭಾವಿಸಿದ್ದಾರೆ. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ನಾವಿಬ್ಬರೂ ಡಿವೋರ್ಸ್ ತಗೊಳ್ಳೋಣ ಎಂದು ಒಮ್ಮೆ ಮಾತನಾಡಿದ್ದೇವೆಯೇ ಹೊರತು ನಿರ್ಧಾರಕ್ಕೆ ಬಂದಿರಲಿಲ್ಲ. ಇನ್ನೂ ಅರ್ಜಿ ಕೂಡ ಸಲ್ಲಿಸಿಲ್ಲ. ಅದೇ ಸಮಯಕ್ಕೆ ನನಗೆ ಬೇರೆ ರಿಯಾಲಿಟಿ ಶೋ ಇತ್ತು, ನಾನು ಹೋದೆ. ಆದರೆ ನೀನು ವೈಯಕ್ತಿಕವಾಗಿ ಬೆಳೆಯಬೇಕು, ನೀನು ಬಯಸಿದಂತೆ ನಿನಗೆ ಐಡೆಂಟೆಟಿ ಸಿಗಬೇಕು. ಈ ವೇದಿಕೆ ಉತ್ತಮವಾಗಿದೆ, ಬಳಸಿಕೋ. ನಾನು ಎಲ್ಲೇ ಹೋದರೂ ನಿನ್ನನ್ನು ಕರೆದುಕೊಂಡು ಹೋಗ್ತೀನಿ, ಪ್ರಚಾರ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ. ನನ್ನ ಜೀವನದ ಪ್ರಮುಖ ಭಾಗವಾಗಿದ್ದ ನಿನಗೆ ಬೆಂಬಲ ನೀಡಲು ಬಂದಿದ್ದೇನೆ" ಎಂದು ಗೌರವ್ ಹೇಳಿದ್ದಾರೆ.
ಗೌರವ್ ಮಾತಿಗೆ ಮೆಚ್ಚುಗೆ
ಆಕಾಂಕ್ಷಾ ಲೈಂ*ಗಿಕ ವಿಷಯ ಗೊತ್ತಿದ್ದೇ ಮದುವೆಯಾಗಿದ್ದೇನೆ, ಒಂದು ವ್ಯಕ್ತಿಯನ್ನು ಪ್ರೀತಿ ಮಾಡಿದಾಗ ಬೇರೆ ಯಾವ ವಿಷಯವೂ ಮ್ಯಾಟರ್ ಆಗೋದಿಲ್ಲ ಎಂದು ಗೌರವ್ ಖನ್ನಾ ಹೇಳಿದ್ದರು. ಈ ಮಾತು ಈಗ ಎಲ್ಲೆಡೆ ವೈರಲ್ ಆಗ್ತಿದೆ. ಮಗು ವಿಷಯಕ್ಕೆ ಇವರಿಬ್ಬರೂ ಡಿವೋರ್ಸ್ ತಗೊಳ್ತಿದ್ದಾರೆ ಎನ್ನಲಾಗಿತ್ತು, ಆದರೆ ಗೌರವ್ ಅವರ ಈ ಮಾತು ಕೇಳಿ ಇದ್ದರೆ ಇಂಥ ಹುಡುಗ ಇರಬೇಕು ಎಂದು ಅನೇಕರು ಹೇಳುತ್ತಿದ್ದಾರೆ.


