- Home
- Entertainment
- TV Talk
- Amruthadhare Serial: ಆಸ್ತಿ ಪತ್ರಕ್ಕೆ ಬಿತ್ತು ಸಹಿ- ಶಕುಂತಲಾ ಬಲೆಯಲ್ಲಿ ಜೈದೇವ್? ಮಗನಿಗೇ ಮಣ್ಣು ಮುಕ್ಕಿಸ್ತಾಳಾ
Amruthadhare Serial: ಆಸ್ತಿ ಪತ್ರಕ್ಕೆ ಬಿತ್ತು ಸಹಿ- ಶಕುಂತಲಾ ಬಲೆಯಲ್ಲಿ ಜೈದೇವ್? ಮಗನಿಗೇ ಮಣ್ಣು ಮುಕ್ಕಿಸ್ತಾಳಾ
ಅಮೃತಧಾರೆ ಸೀರಿಯಲ್ನಲ್ಲಿ ಶಕುಂತಲಾಳ ಕುತಂತ್ರ ಮುಂದುವರೆದಿದೆ. ಗೌತಮ್ ಕುಟುಂಬವನ್ನು ನಾಶಮಾಡಲು ಮಗ ಜೈದೇವನ ಜೊತೆ ಕೈಜೋಡಿಸಿದಂತೆ ನಟಿಸುತ್ತಿರುವ ಆಕೆ, ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಕುಹಕ ನಗು ಬೀರಿದ್ದಾಳೆ. ಇದು ಜೈದೇವನಿಗೂ ಮೋಸ ಮಾಡುತ್ತಿರುವ ಸಂಕೇತ ನೀಡುತ್ತಿದೆ.

ಆಸ್ತಿಯ ವಿಷಯ
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವ ಮಾತಿದೆ. ಇನ್ನು ಹಣಕ್ಕಾಗಿ ಏನು ಬೇಕಾದ್ರೂ ಮಾಡಲು ಹೇಸದ ಅಮೃತಧಾರೆ ಸೀರಿಯಲ್ನ ಶಕುಂತಲಾನಂಥವರು ಬಾಯಿ ಬಿಡದೇ ಇರ್ತಾರಾ? ಹಣ, ಆಸ್ತಿಗಾಗಿ ತಮ್ಮವರನ್ನೂ ಮುಗಿಸಲು ಹೇಸದ ಅದೆಷ್ಟೋ ಜನರು ನಮ್ಮ ಕಣ್ಣುಮುಂದೆಯೇ ಇದ್ದಾರೆ. ಅವರೆಲ್ಲರ ಪ್ರತಿರೂಪವಾಗಿ ಕಾಣಿಸೋದು ಈ ಸೀರಿಯಲ್ನ ಶಕುಂತಲಾ.
ಹೊರಹಬ್ಬಿದ್ದ ಜೈದೇವ
ಆಸ್ತಿ ಕೈಸಿಕ್ಕ ಮೇಲೆ ತನ್ನ ಸ್ವಂತ ಅಮ್ಮನನ್ನೇ ಅಕ್ಷರಶಃ ನೂಕಿ ಬೀದಿ ಪಾಲು ಮಾಡಿದ್ದವ ಜೈದೇವ. ತುತ್ತು ಅನ್ನಕ್ಕೂ ಗತಿಯಿಲ್ಲದೇ ಭಿಕ್ಷೆ ಬೇಡಿದ್ದಳು ಶಕುಂತಲಾ. ಈ ವಿಷಯ ತಿಳಿಯುತ್ತಲೇ ಎಲ್ಲಾ ಕಡೆ ಹುಡುಕಿ ಶಕುಂತಲಾಳನ್ನು ಮನೆಗೆ ಕರೆದುಕೊಂಡು ಬಂದವ ಗೌತಮ.
ಹಾವಿಗೆ ಹಾಲೆರದೇನು ಫಲ
ಹಾವಿಗೆ ಹಾಲೆರೆದರೇನು ಫಲ ಎಂದು ಸರ್ವಜ್ಞ ಅಂದೇ ನುಡಿದಾಗಿತ್ತು. ಅದೇ ರೀತಿ ಶಕುಂತಲಾ ಸದ್ಯ ಎರಡು ತಲೆ ಹಾವು ಇದ್ದಂತೆ. ಇಲ್ಲಿ ಗೌತಮ್, ಭೂಮಿಕಾ ಸೇರಿದಂತೆ ಶಕುನಿಮಾಮಾನನ್ನು ಯಾಮಾರಿಸಿ, ಒಳ್ಳೆಯವಳಂತೆ ನಟಿಸುತ್ತಿದ್ದಾಳೆ. ಎಲ್ಲರ ಎದುರು ಜೈದೇವನನ್ನು ಹೊಡೆದು ಬಡಿದು ಜೈಲಿಗೆ ತಳ್ಳಿದ ಶಕುಂತಲಾ, ಕೊನೆಗೆ ಸದ್ದಿಲ್ಲದೇ ಹಿಂಬದಿಯಿಂದ ಹೋಗಿ ಜೈದೇವನನ್ನು ಬಿಡಿಸಿಕೊಂಡು ಬಂದಿದ್ದಾಳೆ. ಇಲ್ಲಿಯವರೆಗೆ ನಾನು ಮಾಡಿದ್ದೆಲ್ಲಾ ನಾಟಕ. ನಾನು ನಿನ್ನನ್ನಷ್ಟೇ ಪ್ರೀತಿಸೋದು. ಇಬ್ಬರೂ ಸೇರಿ ಗೌತಮ್ನ ಇಡೀ ಕುಟುಂಬ ಸರ್ವನಾಶ ಮಾಡೋಣ ಎಂದಿದ್ದಾಳೆ.
ಶಕುಂತಲಾ 3ನೇ ಮುಖ
ಅಲ್ಲಿಗೆ ಅಮ್ಮ ಮತ್ತು ಮಗ ಒಂದಾಗಿರುವಂತೆ ಇಲ್ಲಿಯವರೆಗೆ ತೋರಿಸಲಾಗಿದೆ. ಆದರೆ ಶಕುಂತಲಾ ಅಂದುಕೊಂಡಷ್ಟು ಸಲೀಸಾಗಿ ಕಾಣಿಸುತ್ತಿಲ್ಲ. ಜೈದೇವನ ಕೈಯಲ್ಲಿ ಆಸ್ತಿಗೆ ಸಹಿ ಹಾಕಿಸಿದ್ದಾಳೆ. ಅದು ಗೌತಮ್ಗೆ ಸೇರಬೇಕಿರುವ ಆಸ್ತಿ. ಹೀಗೆ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ.
ಕುಹಕ ನಗು!
ಜೈದೇವನ ಬಳಿ ಸಹಿಗೆ ಹೋದಾಗ, ನೀನು ಯೋಚನೆ ಮಾಡಬೇಡ. ಸಂಪೂರ್ಣ ದಿವಾನ್ ಸಾಮ್ರಾಜ್ಯವೇ ನಮ್ಮದಾಗುವಾಗ ಇದೇನು ಚಿಕ್ಕ ಆಸ್ತಿ, ಸಹಿ ಹಾಕು ಎಂದಿದ್ದಾಳೆ. ಕೊನೆಗೆ ಅವನಿಂದ ಸಹಿ ಪಡೆದು ಕುಹಕ ನಗು ಬೀರಿದ್ದಾಳೆ.
ಮೋಸ ಮರೆಯದ ಶಕುಂತಲಾ
ಇದನ್ನೆಲ್ಲಾ ನೋಡುತ್ತಿದ್ದರೆ, ಜೈದೇವ್ ತನಗೆ ಮಾಡಿರುವ ಮೋಸವನ್ನು ಶಕುಂತಲಾ ಮರೆತಂತೆ ಕಾಣುತ್ತಿಲ್ಲ. ಜೈದೇವನ ಜೊತೆಯೂ ಒಳ್ಳೆಯವಳಾಗಿ, ಇತ್ತ ಗೌತಮ್-ಭೂಮಿಕಾ ಎದುರೂ ನಾಟಕವಾಡುತ್ತಾ ಎಲ್ಲರನ್ನೂ ಮೋಸದ ಜಾಲದಲ್ಲಿ ಸಿಲುಕಿಸ್ತಿರೋ ವಾಸನೆ ಬಡೆಯುತ್ತಿದೆ. ಜೈದೇವನನ್ನೂ ಈಕೆ ಬಿಡುವಂತೆ ಸದ್ಯ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಸೀರಿಯಲ್ ರೋಚಕ ಘಟ್ಟದಲ್ಲಿ ಸಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

