MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Brahmagantu ದೀಪಾ ತಮ್ಮನ ಉಪನಯನ: ಕ್ಯೂಟ್​ ಫೋಟೋ ಶೇರ್​ ಮಾಡಿದ ನಟಿ ದಿಯಾ ಪಾಲಕ್ಕಲ್​

Brahmagantu ದೀಪಾ ತಮ್ಮನ ಉಪನಯನ: ಕ್ಯೂಟ್​ ಫೋಟೋ ಶೇರ್​ ಮಾಡಿದ ನಟಿ ದಿಯಾ ಪಾಲಕ್ಕಲ್​

ಬ್ರಹ್ಮಗಂಟು ಧಾರಾವಾಹಿಯ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್, ತಮ್ಮ ಕುಟುಂಬದ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ತಾಯಿ ಮತ್ತು ಚಿಕ್ಕಮ್ಮ ಕೂಡ ಕಲಾವಿದೆಯರಾಗಿದ್ದು, ದಿಯಾ ಅವರ ಕಲಾ ಹಿನ್ನೆಲೆ ಮತ್ತು ಅವರ ನಟನಾ ಪಯಣದ ಕುರಿತು ಈ ಲೇಖನ ಮಾಹಿತಿ ನೀಡುತ್ತದೆ.

2 Min read
Author : Suchethana D
Published : Jul 09 2026, 05:04 PM IST
Share this Photo Gallery
  • FB
  • TW
  • Linkdin
  • Whatsapp
16
ಬ್ರಹ್ಮಗಂಟು ನಾಯಕಿ
Image Credit : Diya Palakkal Instagram

ಬ್ರಹ್ಮಗಂಟು ನಾಯಕಿ

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹೌದು. ಇವಳೇ ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಆದ್ದರಿಂದ ಮನುಷ್ಯನಿಗೆ ಬೇಕಿರೋದು ಬಾಹ್ಯ ಸೌಂದರ್ಯವಲ್ಲ, ಆಂತರಿಕ ಸೌಂದರ್ಯ ಎಂದು ಸಾರುವ ಈ ಸೀರಿಯಲ್​ ಜೀ ಕನ್ನಡದ ಬ್ರಹ್ಮಗಂಟು (Brahmagantu Serial)

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದೀಪಾ-ದಿಯಾ ಡಬಲ್​ ರೋಲ್​
Image Credit : Diya Palakkal Instagram

ದೀಪಾ-ದಿಯಾ ಡಬಲ್​ ರೋಲ್​

ಹೀಗೆ ಒಂದೊಳ್ಳೆ ಸಂದೇಶ ಇಟ್ಟುಕೊಂಡು ಸಾಗುತ್ತಿರುವ ಈ ಸೀರಿಯಲ್​ನಲ್ಲಿ ಇದೀಗ ದೀಪಾ ಸುಂದರಿಯಾಗಿ ದಿಶಾ ರೂಪ ಪಡೆದು ಬಂದಿದ್ದಾಳೆ. ಇಷ್ಟು ದಿನ ಖುದ್ದು ಗಂಡನಿಗೂ ಇವಳು ತನ್ನ ಹೆಂಡತಿ ದೀಪಾ ಎಂದು ತಿಳಿದೇ ಇರಲಿಲ್ಲ. ಕೊನೆಗೆ ಅಂತೂ ಬಣ್ಣ ಬಯಲಾಗಿದ್ದು, ಪತ್ನಿಯೇ ಸತ್ಯ ಒಪ್ಪಿಕೊಳ್ಳಲಿ ಎಂದು ಅವಳನ್ನು ಸತಾಯಿಸುತ್ತಿದ್ದಾನೆ.

Related Articles

Related image1
Amruthadhaare Serial Twist: ಗೌತಮ್ ಬ್ಲಡ್​ ರಿಪೋರ್ಟ್​ನಲ್ಲಿ ಆಘಾತಕಾರಿ ರಹಸ್ಯ? ಡಾಕ್ಟರ್​ ಹೇಳಿದ್ದೇನು
Related image2
'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ
36
ದಿಯಾ ಪಾಲಕ್ಕಲ್​
Image Credit : Diya Palakkal Instagram

ದಿಯಾ ಪಾಲಕ್ಕಲ್​

ಹೀಗೆ ದೀಪಾ ಮತ್ತು ದಿಶಾ ಆಗಿ ಬ್ರಹ್ಮಗಂಟು ಸೀರಿಯಲ್​ನಲ್ಲಿ ಮಿಂಚುತ್ತಿರುವವರು ನಟಿ ದಿಯಾ ಪಾಲಕ್ಕಲ್​ (Diya Palakkal). ಸೀರಿಯಲ್​, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್​ ಮಾಡುವುದು ಇದೆ. ಆದರೆ ಈ ಸೀರಿಯಲ್​ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್​ ಮಾಡಲಾಗುತ್ತಿದೆ.

46
ತಮ್ಮನ ಉಪನಯನ
Image Credit : Diya Palakkal Instagram

ತಮ್ಮನ ಉಪನಯನ

ಇಂತಿಪ್ಪ ನಟಿ ದಿಯಾ ಈಗ ತಮ್ಮ ಸಹೋದರ ಅಂದರೆ ಚಿಕ್ಕಮ್ಮನ ಮಗನ ಉಪನಯನ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇವೆಲ್ಲವೂ ವೈರಲ್​ ಆಗುತ್ತಿದ್ದು, ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.

56
ಬಣ್ಣದ ನಂಟಿರುವ ಫ್ಯಾಮಿಲಿ
Image Credit : Diya Palakkal Instagram

ಬಣ್ಣದ ನಂಟಿರುವ ಫ್ಯಾಮಿಲಿ

ಅಂದಹಾಗೆ ದಿಯಾ ಅವರ ಇಡೀ ಫ್ಯಾಮಿಲಿಗೆ ಬಣ್ಣದಲೋಕದ ನಂಟಿದೆ. ದಿಯಾ ಅವರ ತಾಯಿ ರಮ್ಯಾ ಭರತನಾಟ್ಯ ಕಲಾವಿದೆಯಾಗಿದ್ದು, ಅವರು ಇದಾಗಲೇ ಕೆಲವು ಸೀರಿಯಲ್​​ಗಳಲ್ಲಿ ನಟಿಸಿದ್ದಾರೆ. ಚಿಕ್ಕಮ್ಮ ರಾಧಾ ಕೂಡ ಭರಟನಾಟ್ಯ ಕಲಾವಿದೆ ಮತ್ತು ಸೀರಿಯಲ್​​ ನಟಿ. ನಟಿ ರಮ್ಯಾ ಅಜಯ್‌ ಮತ್ತು ರಾಧಾ ಜಯರಾಮ್‌ ಅವರು ಭರತನಾಟ್ಯ ಕಲಾವಿದೆಯರು. ‘ಭಾಮ ಕಲಾ ಕುಟೀರ’ ಎಂಬ ಶಾಸ್ತ್ರೀಯ ನೃತ್ಯ ಕಲಾ ತರಬೇತಿ ಶಾಲೆಯನ್ನ ನಡೆಸುತ್ತಿದ್ದಾರೆ. ರಾಧಾ ಅವರ ಮಗನಿಗೆ ಈಗ ಉಪನಯನದ ಸಂಭ್ರಮವಿದ್ದು ಅದರ ಬಗ್ಗೆ ನಟಿ ಶೇರ್​ ಮಾಡಿಕೊಂಡಿದ್ದಾರೆ.

66
ತಮಿಳಿನಲ್ಲಿಯೂ ಮಿಂಚಿಂಗ್​
Image Credit : Diya Palakkal Instagram

ತಮಿಳಿನಲ್ಲಿಯೂ ಮಿಂಚಿಂಗ್​

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬ್ರಹ್ಮಗಂಟು ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ

Latest Videos
Recommended Stories
Recommended image1
'40 ವರ್ಷ ಆಗುವವರೆಗೂ ಮಗನಿಗೆ ಮದುವೆ ಮಾಡಲ್ಲ': ಬಿಗ್ ಬಾಸ್ ಡಾಗ್ ಸತೀಶ್ ಹೇಳಿಕೆ ವೈರಲ್
Recommended image2
'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ
Recommended image3
Amruthadhaare Serial Twist: ಗೌತಮ್ ಬ್ಲಡ್​ ರಿಪೋರ್ಟ್​ನಲ್ಲಿ ಆಘಾತಕಾರಿ ರಹಸ್ಯ? ಡಾಕ್ಟರ್​ ಹೇಳಿದ್ದೇನು
Related Stories
Recommended image1
Amruthadhaare Serial Twist: ಗೌತಮ್ ಬ್ಲಡ್​ ರಿಪೋರ್ಟ್​ನಲ್ಲಿ ಆಘಾತಕಾರಿ ರಹಸ್ಯ? ಡಾಕ್ಟರ್​ ಹೇಳಿದ್ದೇನು
Recommended image2
'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved