- Home
- Entertainment
- TV Talk
- Chaya Singh Birthday: 25 ವರ್ಷಗಳಿಂದ ನಟನೆ… 'ಅಮೃತಧಾರೆ' ನಟಿ ಛಾಯಾ ಸಿಂಗ್ ವಯಸ್ಸೆಷ್ಟು ಗೊತ್ತಾ?
Chaya Singh Birthday: 25 ವರ್ಷಗಳಿಂದ ನಟನೆ… 'ಅಮೃತಧಾರೆ' ನಟಿ ಛಾಯಾ ಸಿಂಗ್ ವಯಸ್ಸೆಷ್ಟು ಗೊತ್ತಾ?
Chaya Singh Birthday: ಕನ್ನಡ ಚಿತ್ರ ಮುನ್ನುಡಿಯಿಂದ ನಟನೆ ಆರಂಭಿಸಿ ಇದೀಗ, ಅಮೃತಧಾರೆಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಛಾಯಾ ಸಿಂಗ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿಯ ವಯಸ್ಸು, ಕರಿಯರ್, ಲವ್ ಸ್ಟೋರಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಛಾಯಾ ಸಿಂಗ್
ರಾಜಪೂತ ಕುಟುಂಬದಲ್ಲಿ ಹುಟ್ಟಿರುವ ಛಾಯಾ ಸಿಂಗ್ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕರ್ನಾಟಕದಲ್ಲೇ. ಇವರು ಕನ್ನಡ, ತಮಿಳು ಸೇರಿ, ಮಲಯಾಲಂ, ತೆಲುಗು ಹಾಗೂ ಭೋಜ್ ಪುರಿ ಸಿನಿಮಾಗಳು ಹಾಗೂ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕಳೆದ 245 ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ನಟಿ ಅಂದಿಗೂ ಇಂದಿಗೂ ಜನರ ಫೇವರಿಟ್.

ಮುನ್ನುಡಿಯಿಂದ ಆರಂಭಿಸಿದ ಜರ್ನಿ
ಛಾಯಾ ಸಿಂಗ್ ಕನ್ನಡದ ‘ಮುನ್ನುಡಿ’ ಸಿನಿಮಾ ಮೂಲಕ 19ನೇ ವಯಸ್ಸಿನಲ್ಲಿ ತಮ್ಮ ನಟನಾ ಜರ್ನಿ ಆರಂಭಿಸಿದರು. ಅಲ್ಲಿಂದ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ತಮಿಳು, ಮಲಯಾಳಂ, ಬೆಂಗಾಲಿ ತೆಲುಗು ಎಂಬಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.
ಛಾಯಾ ಸಿಂಗ್ ನಟಿಸಿದ ಪ್ರಮುಖ ಸಿನಿಮಾಗಳು
ಮುನ್ನುಡಿ, ಚಿಟ್ಟೆ, ತುಂಟಾಟ, ತಿರುಡಾ ತಿರುಡಿ, ಜೈ ಸೂರ್ಯ, ಆಕಾಶ ಗಂಗೆ, ಆನಂದ ಪುರತ್ತು ವೀಡು, ಮುಫ್ತಿ, ಆಕ್ಷನ್, ಕಾಕಿ, ಲಿಲ್ಲಿ ರಾಣಿ, ತಮಿಳರಸನ್, ಭೈರತಿ ರಣಗಲ್, ರಾಯಲ್ ಸಿನಿಮಾಗಳಲ್ಲಿ ಛಾಯಾ ಸಿಂಗ್ ನಟಿಸಿದ್ದಾರೆ. ಸದ್ಯ ಕನ್ನಡದಲ್ಲಿ ಅಮೃತಧಾರೆ, ತಮಿಳಿನಲ್ಲಿ ಗಟ್ಟಿಮೇಳಂ ಧಾರಾವಾಹಿಯಲ್ಲಿ ಛಾಯಾ ನಟಿಸುತ್ತಿದ್ದಾರೆ.
ಛಾಯಾ ಸಿಂಗ್ ವಯಸ್ಸೆಷ್ಟು?
ನಟಿ ಛಾಯಾ ಸಿಂಗ್ ನಟಿ ಮಾತ್ರವಲ್ಲ, ಇವರು ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು, ಅದನ್ನು ಮನ್ಮಥ ರಾಸ ಹಾಡಿನ ಮೂಲಕ ನಿರೂಪಿಸಿದ್ದಾರೆ. ಅಲ್ಲದೇ ಇವರು ನಿರೂಪಕಿ ಕೂಡ ಹೌದು. 25 ವರ್ಷಗಳ ನಟನಾ ಜರ್ನಿ ಹೊಂದಿರುವ ಛಾಯಾ ಸಿಂಗ್ ವಯಸ್ಸೆಷ್ಟು ಗೊತ್ತಾ? 45 ವರ್ಷ. ಹೌದು, ಮೇ 16, 1981ರಲ್ಲಿ ಹುಟ್ಟಿದ ಛಾಯಾ ಸಿಂಗ್ ಇಂದು ತಮ್ಮ 45ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
45ರಲ್ಲೂ ಫಿಟ್ ಆಗಿರಲು ಕಾರಣ ಏನು?
ಛಾಯಾ ಸಿಂಗ್ 45ನೇ ವಯಸ್ಸಿನಲ್ಲೂ 30ರ ಹುಡುಗಿಯಂತೆ ಫಿಟ್ ಆಗಿರಲು ಡಯೆಟ್ ಜೊತೆಗೆ ವರ್ಕೌಟ್ ಕೂಡ ಮಾಡುತ್ತಾರೆ. ಉತ್ತಮ ಆರೋಗ್ಯಕ್ಕೆ, ತೂಕ ಕಡಿಮೆ ಆಗಲು 80% ಡಯೆಟ್, 20 % ವರ್ಕೌಟ್ ಮುಖ್ಯ ಆಗುತ್ತದೆ ಎನ್ನುತ್ತಾರೆ. ಇದರ ಜೊತೆಗೆ ಛಾಯಾ ಸಿಂಗ್ ಅವರು ಹೆಚ್ಚು ನೀರು ಕುಡಿಯುತ್ತಾರೆ. ಇದರಿಂದ ದೇಹದಲ್ಲಿರುವ ಕಲ್ಮಷಗಳು ಹೊರಗಡೆ ಹೋಗುತ್ತವೆ. ಇದರಿಂದ ತೂಕ ಕೂಡ ಇಳಿಕೆ ಆಗುವುದು.
ಖಳನಾಯಕನನ್ನು ಪ್ರೀತಿಸಿ ಮದುವೆ
ಛಾಯಾ ಸಿಂಗ್ ಅವರದ್ದು ಲವ್ ಮ್ಯಾರೇಜ್. ಇವರ ಗಂಡ ಕೃಷ್ಣ. ತಮಿಳು ಸಿನಿಮಾವೊಂದಲ್ಲಿ ನಟಿಸುವಾಗ ಛಾಯಾ ಸಿಂಗ್, ಕೃಷ್ಣ ಅವರ ಭೇಟಿಯಾಗುತ್ತದೆ. ಈ ಸಿನಿಮಾದಲ್ಲಿ ಕೃಷ್ಣ ಅವರು ವಿಲನ್ ಆಗಿದ್ದರೆ, ಛಾಯಾ ಹೀರೋಯಿನ್ ಆಗಿದ್ದರು. ಅಲ್ಲಿಂದ ನಂತರ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ, 2012ರಲ್ಲಿ ಈ ಜೋಡಿ ಮದುವೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

