- Home
- Entertainment
- TV Talk
- Amruthadhaare ಸೆಟ್ನಲ್ಲಿ ಮಗ ಗೌತಮ್ ಜೊತೆ ಲೇಡಿ ವಿಲನ್ ಶಕುಂತಲಾ ಹೇಗೆ ಇರ್ತಾರೆ ನೋಡಿ
Amruthadhaare ಸೆಟ್ನಲ್ಲಿ ಮಗ ಗೌತಮ್ ಜೊತೆ ಲೇಡಿ ವಿಲನ್ ಶಕುಂತಲಾ ಹೇಗೆ ಇರ್ತಾರೆ ನೋಡಿ
'ಅಮೃತಧಾರೆ' ಧಾರಾವಾಹಿಯಲ್ಲಿ ಖಳನಾಯಕಿ ತಾಯಿ ಶಕುಂತಲಾ ಮತ್ತು ಮಗ ಗೌತಮ್ ಪಾತ್ರಗಳು ಜನಪ್ರಿಯವಾಗಿವೆ. ಆದರೆ ಈ ಪಾತ್ರಗಳನ್ನು ನಿರ್ವಹಿಸುತ್ತಿರುವ ವನಿತಾ ವಾಸು ಮತ್ತು ರಾಜೇಶ್ ನಟರಂಗ ಅವರು ನಿಜ ಜೀವನದಲ್ಲಿ ಉತ್ತಮ ಸ್ನೇಹಿತರಾಗಿದ್ದು, ಈ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಳ್ಳೆ ಮಗ, ಕೆಟ್ಟ ಅಮ್ಮ
ತುಂಬಾ ಒಳ್ಳೆಯ ಮಗ, ತೀರಾ ಕೆಟ್ಟ ಅಮ್ಮ ಅರ್ಥಾತ್ ಚಿಕ್ಕಮ್ಮ. ಇದು ಬಹುತೇಕ ಸೀರಿಯಲ್ಗಳಲ್ಲಿ ಮಾಮೂಲಾಗಿದೆ. ಅದೇ ರೀತಿ ಅಮೃತಧಾರೆ (Amruthadhaare)ಯಲ್ಲಿ ಕೂಡ.

ಹುಟ್ಟುಗುಣ
ಇಲ್ಲಿ ವಿಲನ್ ಶಕುಂತಲಾ ಮತ್ತು ಮಗ ಗೌತಮ್ ಸ್ಟೋರಿ. ಇದೀಗ ತನ್ನ ಸ್ವಂತ ಮಗ ಜೈದೇವ್ ಮನೆಯಿಂದ ಒದ್ದು ಹೊರಹಾಕಿದ ಬಳಿಕ ಶಕುಂತಲಾಗೆ ಗೌತಮ್ ಗತಿಯಾದ್ರೂ, ಸ್ವಂತ ಮಗನ ಮೇಲಿನ ವ್ಯಾಮೋಹ ಮಾತ್ರ ಹೋಗಿಲ್ಲ. ಅಷ್ಟಕ್ಕೂ ಹುಟ್ಟುಗುಣ ಸುಟ್ಟರೂ ಹೋಗಲ್ವಲ್ಲಾ ಹಾಗೆನೇ ಇದು.
ಯಾರೀ ಪಾತ್ರಧಾರಿಗಳು
ಸೀರಿಯಲ್ನಲ್ಲಿ ಗೌತಮ್ ಪಾತ್ರಧಾರಿಯಾಗಿ ರಾಜೇಶ್ ನಟರಂಗ (Rajesh Nataranga) ಹಾಗೂ ಶಕುಂತಲಾ ಆಗಿ ವನಿತಾ ವಾಸು ನಟಿಸುತ್ತಿದ್ದಾರೆ.
ಸೀರಿಯಲ್ನಲ್ಲಿ ಅಮ್ಮ-ಮಗ
ಸೀರಿಯಲ್ನಲ್ಲಿ ಈ ಅಮ್ಮ-ಮಗ ಹೇಗೆ ಇರಲಿ, ರಿಯಲ್ ಲೈಫ್ನಲ್ಲಿ ಮಾತ್ರ ರಾಜೇಶ್ ಮತ್ತು ವನಿತಾ ವಾಸು ಅವರ ತುಂಬಾ ಒಳ್ಳೆಯ ಫ್ರೆಂಡ್ಸ್. ಈ ಕುರಿತು ನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ರಿಯಲ್ ಲೈಫ್ ಫ್ರೆಂಡ್ಸ್
ಸೀರಿಯಲ್ ನಮಗೆ ಸಹೊದ್ಯೋಗಿಯನ್ನಾಗಿ ಮಾಡಿದೆ. ಆದರೆ ರಿಯಲ್ ಲೈಫ್ನಲ್ಲಿ ನಾವಿಬ್ಬರೂ ಫ್ರೆಂಡ್ಸ್ ಎಂದು ನಟಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

