Chaya Singh: 'ಅಮೃತಧಾರೆ' ಭೂಮಿಕಾ ರಿಯಲ್​ ಲೈಫ್​ ಪತಿ ಯಾರ್​ ಗೊತ್ತಾ?

ಜೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ಭೂಮಿಕಾ ಅಲಿಯಾಸ್​ ಛಾಯಾ ಸಿಂಗ್​ ಅವರ ರಿಯಲ್​ ಲೈಫ್​ ಪತಿ ಯಾರ್​ ಗೊತ್ತಾ?
 

Amruthadhare actress Chaya Singh real life story suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' (Amrutadhare) ವಿಭಿನ್ನ ಕಥಾಹಂದರ ಹೊಂದಿದ್ದು, ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿದೆ. ಈ ಚಿತ್ರದ ಕಥಾನಾಯಕಿ ಭೂಮಿಕಾ ಹಾಗೂ ಆಕೆಯ ಸುತ್ತ ಸುತ್ತಿರುವ ಮದುವೆಯ ಕಥೆ ಬಲು ರೋಚಕವಾಗಿದೆ. ಧಾರಾವಾಹಿಯಲ್ಲಿ ಸಿಡಿಮಿಡಿ ಎನ್ನುವ ಭೂಮಿಕಾ ಅವರ ನಿಜವಾದ ಹೆಸರು ಛಾಯಾ ಸಿಂಗ್​. ಅಂದಹಾಗೆ ಬಹುತೇಕರಿಗೆ ತಿಳಿದಿರುವಂತೆ ನಟಿ ಛಾಯಾ ಸಿಂಗ್​ ಸ್ಯಾಂಡಲ್‌ವುಡ್​ ನಟಿ.  2000ರಲ್ಲಿ ತೆರೆಕಂಡ 'ಮುನ್ನುಡಿ' ಅವರ ಮೊದಲ ಸಿನಿಮಾ. ವಿಶೇಷವೆಂದರೆ, ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಪ್ರಾರಂಭದ ಮೂರು ವರ್ಷ ಕನ್ನಡದಲ್ಲೇ ಗುರುತಿಸಿಕೊಂಡಿದ್ದ ಅವರು, ಆನಂತರ ತಮಿಳಿಗೆ ಕಾಲಿಟ್ಟರು. ನಂತರ ಮಲಯಾಳಂ, ತೆಲುಗು, ಬೆಂಗಾಲಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ.  ಮದುವೆಯಾದ ಬಳಿಕ ತಮ್ಮ 20 ವರ್ಷಗಳ ಬಣ್ಣದ ಲೋಕಕ್ಕೆ ಸ್ವಲ್ಪ ಬ್ರೇಕ್​ ಕೊಟ್ಟಿದ್ದರು. ಈಗ ಪುನಃ ಅಮೃತಧಾರೆ ಮೂಲಕ  ಕಿರುತೆರೆಗೆ ಮರಳಿದ್ದಾರೆ. 

ಅಮೃತಧಾರೆಯಲ್ಲಿ 35 ವರ್ಷವಾದರೂ ಮದುವೆಯಾಗದ ಹುಡುಗಿಯ ಪಾತ್ರ ಇವರದ್ದು. ನಾನು ಹೇಗಿದ್ದೀನೋ ಹಾಗೆ ಸ್ವೀಕರಿಸುವ ಹುಡುಗ ನನ್ನ ಸಂಗಾತಿಯಾಗಿ ಬರಬೇಕು ಅಂತ ಭೂಮಿಕಾ ಬಯಸುತ್ತಿದ್ದಾಳೆ. ಅದೇ ಇನ್ನೊಂದೆಡೆ ವರ್ಷ 45 ದಾಟಿದರೂ ಮದುವೆಯಾಗದ ನಾಯಕ ಗೌತಮ್​ ಜೊತೆ ಇವರ ಕಥೆ ಹೆಣೆಯಲಾಗಿದೆ.  ನಾಯಕನಾಗಿ ರಾಜೇಶ್ ನಟರಂಗ ನಟಿಸುತ್ತಿದ್ದು ಹಲವು ವರ್ಷಗಳ ಬಳಿಕ ಮತ್ತೆ ಧಾರಾವಾಹಿ (Serial) ಮರಳಿರುವುದು ಕೂಡ ವಿಶೇಷ.   ದೊಡ್ಡ ಕಂಪೆನಿಯ ಓನರ್ ಆಗಿದ್ದು, ಸಿಕ್ಕಾಪಟ್ಟೆ ಹಣ ಇದ್ರೂ ಕೂಡ ಗೌತಮ್‌ಗೆ ಅವನನ್ನು ಸಾಮಾನ್ಯ ವ್ಯಕ್ತಿಯಾಗಿ ಪ್ರೀತಿಸುವ ಸಂಗಾತಿ ಇಲ್ಲ. ಇವರಿಬ್ಬರು ಹೇಗೆ ಒಂದಾಗುತ್ತಾರೆ ಎನ್ನೋದು ಈ ಧಾರಾವಾಹಿ ಕಥೆ.  

ಪಟಪಟ ಮಾತನಾಡುವ ಸಿಕ್ರೆ ಸಾಕಾ? ಮದ್ವೆಯಾಗುವ ಹುಡುಗನ ಬಗ್ಗೆ ಅನುಶ್ರೀ ಹೇಳಿದ್ದೇನು?

ಇದು ರೀಲ್​ ಲೈಫ್​ ಸ್ಟೋರಿ ಆಯ್ತು. ಆದರೆ ರಿಯಲ್ ಲೈಫ್​ನಲ್ಲಿ ಈ ಭೂಮಿಕಾ (Bhoomika) ಪಾತ್ರಧಾರಿ ಛಾಯಾ ಸಿಂಗ್​ ಅವರ ಜೀವನವೇ ಬೇರೆ ರೀತಿ ಇದೆ. ಧಾರಾವಾಹಿಯಲ್ಲಿ ಭೂಮಿಕಾಕ್ಕೆ ಇನ್ನೂ  ಮದುವೆಯಾಗಿಲ್ಲ ನಿಜ. ಆದರೆ ನಿಜ ಜೀವನದಲ್ಲಿ ಛಾಯಾಗೆ ಮದುವೆಯಾಗಿದೆ. ಮದುವೆಯಾಗಿ 11 ವರ್ಷಗಳೇ ಕಳೆದಿವೆ! ಹೌದು. 

ಕೃಷ್ಣ ಎನ್ನುವವರ ಜೊತೆ ಛಾಯಾ ಅವರ ಮದುವೆಯಾಗಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಫೋಟೋ ಶೇರ್​  ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೆಡಗಿ  ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ  ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ  ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ  ನಟಿಸಿದ್ದಾರೆ.  ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು.

ಅಮೃತಧಾರೆ : ಮದ್ವೆಗೂ ಮೊದ್ವೇ ವಾಂತಿ ಮಾಡ್ಕೊಂಡು ಬಿಟ್ಳಲ್ಲಾ ಗೌತಮ್‌ ತಂಗಿ ಮಹಿಮಾ! ಮುಂದ?

ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.
   

Latest Videos
Follow Us:
Download App:
  • android
  • ios