- Home
- Entertainment
- TV Talk
- ಗೌತಮ್ ಕಣ್ಣೀರಿಗೆ ಕಾರಣವಾದ ಅದೃಶ್ಯ ಜೀವ! ಹೆಂಡ್ತಿ-ಮಗ ಸಿಕ್ಕ ಖುಷಿಯಲ್ಲಿ ಮರೆಯಲಿಲ್ಲ ಡುಮ್ಮಾ ಸರ್!
ಗೌತಮ್ ಕಣ್ಣೀರಿಗೆ ಕಾರಣವಾದ ಅದೃಶ್ಯ ಜೀವ! ಹೆಂಡ್ತಿ-ಮಗ ಸಿಕ್ಕ ಖುಷಿಯಲ್ಲಿ ಮರೆಯಲಿಲ್ಲ ಡುಮ್ಮಾ ಸರ್!
ಅಮೃತಧಾರೆ ಧಾರಾವಾಹಿಯಲ್ಲಿ, ಪತ್ನಿ ಭೂಮಿಕಾ ಮತ್ತು ಮಗ ಆಕಾಶ್ ಸಿಕ್ಕ ಖುಷಿಯಲ್ಲಿರುವ ಗೌತಮ್, ಮಗನ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸುತ್ತಾನೆ. ಆದರೆ ಇದೇ ಸಂಭ್ರಮದ ನಡುವೆ, ತನ್ನ ಕಾಣೆಯಾದ ಮಗಳನ್ನು ನೆನೆದು ಭಾವುಕನಾಗುತ್ತಾನೆ. ಗೌತಮ್‌ನ ಈ ತಂದೆಯ ಪ್ರೀತಿ ವೀಕ್ಷಕರ ಮನಗೆದ್ದಿದೆ.

ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್‌ಗೆ ಪತ್ನಿ ಭೂಮಿಕಾ ಮತ್ತು ಮಗ ಆಕಾಶ್ ಸಿಕ್ಕಿದ್ದಾರೆ. ತನ್ನನ್ನು ಹುಡುಕಿಕೊಂಡು ಗೌತಮ್ ಬಂದರೂ ಭೂಮಿಕಾ ಅಂತರ ಕಾಯ್ದುಕೊಂಡಿದ್ದಾಳೆ. ಪತ್ನಿ ಮತ್ತು ಮಗ ಸಿಕ್ಕ ಖುಷಿಯಲ್ಲಿರುವ ಗೌತಮ್, ಇಬ್ಬರು ತನ್ನಿಂದ ದೂರವಾಗಿದ್ದೇಕೆ ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಮಗನ ಬರ್ತ್ ಡೇ ಬಂದಿದ್ದು, ಅವನೊಂದಿಗೆ ಇಡೀ ದಿನ ಸಮಯ ಕಳೆಯಬೇಕೆಂದು ಗೌತಮ್ ಯೋಜನೆ ರೂಪಿಸಿಕೊಂಡಿದ್ದಾನೆ.
ಮಗನ ಬರ್ತ್ ಡೇ ಪ್ಲಾನ್
ಗೆಳೆಯ ಆನಂದ್ ಜೊತೆ ಮಗನ ಬರ್ತ್ ಡೇ ಪ್ಲಾನ್ ಕುರಿತು ಗೌತಮ್ ಮಾತನಾಡಿದ್ದಾನೆ. ಮಗನಿಗೆ ಏನು ಗಿಫ್ಟ್ ಕೊಡಿಸಬೇಕು ಎಂಬುದರ ಬಗ್ಗೆಯೂ ಆನಂದ್ ಜೊತೆ ಗೌತಮ್ ಚರ್ಚಿಸಿದ್ದಾರೆ. ಇಷ್ಟು ಸಂತಸದ ಸಮಯದಲ್ಲಿ ಗೌತಮ್ ತನ್ನ ಮಗಳನ್ನು ಮಾತ್ರ ಮರೆತಿಲ್ಲ. ಇಂದು ನನ್ನ ಮಗಳ ಸಹ ಬರ್ತ್ ಡೇ ಎಂದು ಗೌತಮ್ ಭಾವುಕನಾಗಿದ್ದಾನೆ. ಮಗಳನ್ನು ನೆನೆದ ಗೌತಮ್‌ನನ್ನು ನೋಡಿದ ವೀಕ್ಷಕರು, ಇವರೇ ನೋಡಿ ನಿಜವಾದ ತಂದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಗೌತಮ್ ಭಾವುಕತೆ
ಮಗ ಮತ್ತು ಹೆಂಡತಿ ಸಿಕ್ಕ ವಿಷಯದಲ್ಲಿ ಗೌತಮ್ ಮಾತ್ರ ಮಗಳನ್ನು ಮರೆತಿಲ್ಲ. ಅಷ್ಟು ಮಾತ್ರ ಮಗಳನ್ನು ನೆನಪು ಮಾಡಿಕೊಂಡು ಗೌತಮ್ ಭಾವುಕತೆ ಕಂಡು ವೀಕ್ಷಕರು ಗದ್ಗಗಿತರಾಗಿದ್ದಾರೆ. ಈ ಪ್ರೋಮೋ ನೋಡಿದ ವೀಕ್ಷಕರು ಆದಷ್ಟು ಬೇಗ ಗೌತಮ್ ಮತ್ತು ಭೂಮಿಕಾಳ ಮಗಳನ್ನು ತೋರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮ ಮನೆಯಲ್ಲೂ ಕನ್ನಡಿ ಇದೇರಿ... Body Shaming ಬಗ್ಗೆ Laskhmi Nivasa ಚಿನ್ನುಮರಿ ಗರಂ.…
ಅಪ್ಪುವಿನ ಬರ್ತ್ ಡೇ
ಭೂಮಿಕಾ ಮನೆ ಪತ್ತೆ ಮಾಡಿರುವ ಗೌತಮ್, ಮಲ್ಲಿಯನ್ನು ಮಾತನಾಡಿಸಿದ್ದಾನೆ. ತನ್ನಿಂದ ಭೂಮಿಕಾ ದೂರವಾಗಿದ್ದೇಕೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಇತ್ತ ಭೂಮಿಕಾ ಮತ್ತು ಮಲ್ಲಿ ಜೊತೆಯಾಗಿ ಅಪ್ಪುವಿನ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಇದನ್ನೂ ಓದಿ: Sudeep ಮಡಿಲಿನಲ್ಲಿ ಮಗುವಾಗಿ ಅಮ್ಮ: ಅದ್ಭುತ ಕಲೆಗೆ ಕಿಚ್ಚ ಭಾವುಕ- ಚಪ್ಪಲಿ ಬಿಟ್ಟು ಕೃತಿ ಸ್ವೀಕಾರ…
ದಿಯಾ ಬೇಬಿ ಪ್ಲಾನ್
ಇತ್ತ ಜೈದೇವ್ ಮತ್ತು ಶಕುಂತಲಾ ಬಳಿಯಲ್ಲಿರೋ ಹಣ ತನ್ನದಾಗಿಸಿಕೊಳ್ಳಲು ದಿಯಾ ಬೇಬಿ ಪ್ಲಾನ್ ಮಾಡಿಕೊಂಡಿದ್ದಾಳೆ. ಜೈದೇವ್ ಮೇಲೆ 600 ಕೋಟಿ ರೂಪಾಯಿ ಸಾಲ ಇರೋದರಿಂದ ಯಾವಾಗ ಬ್ಯಾಂಕ್‌ನವರು ಜಪ್ತಿ ಮಾಡ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.
ಇದನ್ನೂ ಓದಿ: Amruthadhaare: ಮಗನ ಹುಟ್ಟುಹಬ್ಬದಂದೇ ಭೂಮಿಕಾ ಪ್ರಾಣಕ್ಕೆ ಅಪಾಯ? ಛೇ ಇದೇನಾಗೋಯ್ತು?