- Home
- Entertainment
- TV Talk
- PHOTOS: Amruthadhaare Serial ನಟಿ ಮೇಘಾ ಶೆಣೋಯ್ ಮದುವೆಯಾಗಲಿರೋ ಭರತ್ ಸಿಂಗ್ ಯಾರು?
PHOTOS: Amruthadhaare Serial ನಟಿ ಮೇಘಾ ಶೆಣೋಯ್ ಮದುವೆಯಾಗಲಿರೋ ಭರತ್ ಸಿಂಗ್ ಯಾರು?
ಅಮೃತಧಾರೆ ಧಾರಾವಾಹಿಯಲ್ಲಿ ಇತ್ತೀಚೆಗೆ ಸುಧಾ ಹಾಗೂ ಸೃಜನ್ ಮದುವೆ ಆಗಿತ್ತು. ಈಗ ಸುಧಾ ಪಾತ್ರಧಾರಿ ನಟಿ ಮೇಘಾ ಶೆಣೈ ಅವರು ರಿಯಲ್ ಆಗಿ ಎಂಗೇಜ್ ಆಗಿದ್ದಾರೆ.

ಗ್ರ್ಯಾಂಡ್ ಫೋಟೋಶೂಟ್
ಮೇಘಾ ಶೆಣೈ ಅವರು ಎಂಗೇಜ್‌ಮೆಂಟ್ ಪ್ರಯಕ್ತ ಗ್ರ್ಯಾಂಡ್ ಆಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಚಿತ್ಕಳಾ ಬಿರಾದಾರ್ ಭಾಗಿ
ಕೆಲವೇ ದಿನಗಳ ಹಿಂದೆ ಮೇಘಾ ಶೆಣೈ ಹಾಗೂ ಭರತ್ ಸಿಂಗ್ ಅವರ ನಿಶ್ಚಿತಾರ್ಥ ನಡೆದಿದೆ. ಈ ನಿಶ್ಚಿತಾರ್ಥದಲ್ಲಿ ಅಮೃತಧಾರೆ ಧಾರಾವಾಹಿ ನಟಿ ಚಿತ್ಕಳಾ ಬಿರಾದಾರ್ ಕೂಡ ಭಾಗಿಯಾಗಿದ್ದರು.
ಭರತ್ ಸಿಂಗ್ ಎಲ್ಲಿಯವರು?
ಮೇಘಾ ಶೆಣೈ ಹಾಗೂ ಭರತ್ ಸಿಂಗ್ ಅವರು ಕುಟುಂಬಸ್ಥರ ಸಾಕ್ಷಿಯಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಭರತ್ ಸಿಂಗ್ ಅವರು ಬೆಂಗಳೂರಿನವರು ಎನ್ನಲಾಗಿದೆ.
ಭರತ್ ಏನು ಮಾಡ್ತಾರೆ?
ಭರತ್ ಸಿಂಗ್ ಉದ್ಯೋಗ ಏನು? ಕುಟುಂಬದ ಹಿನ್ನಲೆ ಬಗ್ಗೆ ಮೇಘಾ ಶೆಣೈ ಅವರೇ ಮಾಹಿತಿ ನೀಡಬೇಕಿದೆ. ಅಂದಹಾಗೆ ಮೇಘಾ ಶೆಣೈ ಹಾಗೂ ಭರತ್ ಅವರದ್ದು ಲವ್ ಅಥವಾ ಅರೇಂಜ್ ಮ್ಯಾರೇಜ್ ಎಂಬ ಬಗ್ಗೆಯೂ ಕೂಡ ಮಾಹಿತಿ ಇಲ್ಲ.
ಸುಂದರವಾದ ಲೆಹೆಂಗಾ
ಮೇಘಾ ಶೆಣೋಯ್ ಅವರು ಪಿಂಕ್, ಗ್ರೀನ್ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಅಂದಹಾಗೆ ಭರತ್ ಅವರು ಕಪ್ಪು ಸೂಟ್‌ನಲ್ಲಿ ಮಿಂಚಿದ್ದಾರೆ.
ಸುಧಾ ಪಾತ್ರದ ಕಥೆ ಏನು?
ಅಂದಹಾಗೆ ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಹಾಗೂ ಸೃಜನ್‌ಗೆ ಬೇರೆ ಮನೆ ಮಾಡಿಕೊಡಲಾಗುವುದಂತೆ. ಹೀಗಾಗಿ ಮುಂದಿನ ದಿನಗಳಲ್ಲಿ ಸುಧಾ ಪಾತ್ರ ಇರಲಿದೆಯೋ? ಇಲ್ಲವೋ ಎಂಬ ಬಗ್ಗೆ ಅನುಮಾನ ಶುರುವಾಗಿದೆ.
ಸೃಜನ್ ಪಾತ್ರದ ಕಥೆ ಏನು?
ಸುಧಾ ಪಾತ್ರಕ್ಕೆ ಈಗ ಸೃಜನ್ ಜೊತೆ ಎರಡನೇ ಮದುವೆ ಆಗಿದೆ. ಇನ್ನು ಭೂಮಿ ಹಾಗೂ ಶಕುಂತಲಾ ಯುದ್ಧಕ್ಕೆ ಸೃಜನ್ ಸಹಾಯ ಮಾಡುತ್ತಿದ್ದನು. ಮುಂದಿನ ದಿನಗಳಲ್ಲಿ ಯಾವ ರೀತಿ ಕಥೆ ಸಾಗಲಿದೆ ಎಂದು ಕಾದು ನೋಡಬೇಕಿದೆ.