ಜೀವನದ ಹೊಸ ಅಧ್ಯಾಯ ಆರಂಭಿಸಿದ ಅಮೃತಧಾರೆ ನಟಿ ಮೇಘಾ... Engagement Look ವೈರಲ್
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರದಲ್ಲಿ ನಟಿಸುತ್ತಿರುವ ಮೇಘಾ ಶೆಣೈ ಅವರು ರಿಯಲ್ ಲೈಫಲ್ಲಿ ಎಂಗೇಜ್ ಆಗಿದ್ದು, ನಿಶ್ಚಿತಾರ್ಥದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರಕ್ಕೆ ಇತ್ತೀಚೆಗಷ್ಟೇ ಧಾರಾವಾಹಿಯಲ್ಲಿ ಮದುವೆಯಾಗಿತ್ತು. ಇದೀಗ ರಿಯಲ್ ಲೈಫಲ್ಲಿ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗುತ್ತಿದ್ದಾರೆ.
ಹೌದು ಸುಧಾ ಪಾತ್ರಧಾರಿ ಮೇಘಾ ಶೆಣೈ ಅವರ ನಿಶ್ಚಿತಾರ್ಥ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದ್ದು, ನಟಿ ಇದೀಗ ಎಂಗೇಜ್ ಮೆಂಟ್ ಲುಕ್ ನ್ನು ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.
ಆರಂಭದಲ್ಲಿ ಎಂಗೇಜ್ ಮೆಂಟ್ ವಿಡೀಯೋ ಶೇರ್ ಮಾಡಿದ ಮೇಘಾ ಶೆಣೈ, ಅದರಲ್ಲಿ ಹುಡುಗನ ಮುಖ ರಿವೀಲ್ ಮಾಡಿದ್ದರು. ಆದರೆ ಮದುವೆಯಾಗುತ್ತಿರುವ ಹುಡುಗ ಯಾರು? ನಿಶ್ಚಿತಾರ್ಥ ಎಲ್ಲಿ ನಡೆಯಿತು ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಮೇಘಾ ಶೆಣೈ ಮಂಗಳೂರಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘಾ, ಇದೀಗ ಜೀವನದ ಹೊಸ ಅಧ್ಯಾಯವನ್ನು ಶುರು ಮಾಡಲು ತಯಾರಾಗಿ ನಿಂತಿದ್ದಾರೆ.
ಪಿಂಕ್ ಮತ್ತು ನೀಲಿ ಬಣ್ಣದ ಲಂಗ ದಾವಣಿ ಧರಿಸಿರುವ ಮೇಘಾ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ತಮ್ಮ ಫೋಟೊಗಳ ಜೊತೆಗೆ ನಟಿ ‘Stepping into my new chapter with grace & glitter” here is my engagement look’ ಎಂದು ಬರೆದುಕೊಂಡಿದ್ದಾರೆ.
ಆಗಸ್ಟ್ 21ರಂದು ಮೇಘಾ ಶೆಣೈ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನೂ, ನಿಶ್ಚಿತಾರ್ಥಕ್ಕೆ ಸುಧಾ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ಚಿತ್ಕಳಾ ಬಿರದಾರ್ ದಂಪತಿ ಸಮೇತ ಭಾಗಿಯಾಗಿದ್ದಾರೆ. ನಟಿಗೆ ಅಭಿಮಾನಿಗಳು ಹಾಗೂ ಇತರ ತಾರೆಯರು ಶುಭಾಶಯ ತಿಳಿಸಿದ್ದಾರೆ.
‘ಸುಂದರಿ' ಧಾರಾವಾಹಿಯ ಮೂಲಕ ನಟನೆ ಜರ್ನಿ ಶುರು ಮಾಡಿದ ಮೇಘಾ ಬಳಿಕ 'ಬ್ರಾಹ್ಮಿನ್ಸ್ ಕೆಫೆ', .ಜನುಮದ ಜೋಡಿ' ಧಾರಾವಾಹಿಯಲ್ಲಿ ಅಭಿನಯಿಸಿದರು. ಬಳಿಕ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ವಿಲನ್ ಆಗಿ ಸದ್ದು ಮಾಡಿದರು.
ಇದಲ್ಲದೇ 'ಮಹಾದೇವಿ' ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ, 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ, 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು. ನಂತರ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ಸುಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.