- Home
- Entertainment
- TV Talk
- Amruthadhaare Serial: ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಸೂಪರ್ ಹಿಟ್ ಸೀರಿಯಲ್ ಹೀರೋಯಿನ್! ಹೊಸ ಟ್ವಿಸ್ಟ್
Amruthadhaare Serial: ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಸೂಪರ್ ಹಿಟ್ ಸೀರಿಯಲ್ ಹೀರೋಯಿನ್! ಹೊಸ ಟ್ವಿಸ್ಟ್
Amruthadhaare Serial Today Episode Update: ಅಮೃತಧಾರೆ ಧಾರಾವಾಹಿಗೆ ಹೊಸ ಪಾತ್ರದ ಎಂಟ್ರಿಯಾಗಿದೆ. ಸೂಪರ್ ಹಿಟ್ ಧಾರಾವಾಹಿಯ ಹೀರೋಯಿನ್ ಎಂಟ್ರಿ ಕೊಟ್ಟಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್ ಅಜ್ಜಿಯ ಕನಕಾಭಿಷೇಕ ನಡೆಯುತ್ತಿದೆ. ಎಲ್ಲರೂ ಈ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಇನ್ನೊಂದು ಕಡೆ ಗೌತಮ್‌ಗೆ ಮಗಳು ಸಿಕ್ಕಿಲ್ಲ ಎನ್ನೋ ಬೇಸರ ಕೂಡ ಇದೆ. ಮಗಳಿಗೋಸ್ಕರ ಅವನು ತುಂಬ ಹುಡುಕಾಟ ಮಾಡುತ್ತಿದ್ದಾನೆ. ಮಗಳು ಹುಟ್ಟಿರೋ ವಿಷಯವೇ ಭೂಮಿಕಾಗೆ ಗೊತ್ತಿಲ್ಲ.
ಭೂಮಿಕಾಗೆ ಹೇಗೆ ತೊಂದರೆ ಕೊಡೋದು, ಹೇಗೆ ಅವಳ ಕೊಬ್ಬು ಇಳಿಸೋದು ಅಂತ ಶಕುಂತಲಾ, ಜಯದೇವ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಶಕುಂತಲಾ, ಜಯದೇವ್ ನಿಜವಾದ ಮುಖವನ್ನು ಹೇಗೆ ಎಲ್ಲರ ಮುಂದೆ ಬಯಲು ಮಾಡೋದು ಅಂತ ಭೂಮಿಕಾ ಯೋಚಿಸುತ್ತಿದ್ದಾಳೆ. ಒಟ್ಟಿನಲ್ಲಿ ಭೂಮಿಕಾ, ಶಕುಂತಲಾ ನಡುವೆ ನೇರ ಯುದ್ಧ ಶುರುವಾಗಿದೆ.
ಈಗ ಭೂಮಿಕಾ ಮನೆಗೆ ಹೊಸ ನಟಿಯ ಆಗಮನವಾಗಿದೆ. ಹೌದು, ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಅವರು ಈ ಧಾರಾವಾಹಿಯಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಕಾಣುತ್ತಿದೆ. ಏಕಾಏಕಿ ಹೊಸ ಪಾತ್ರ ಶುರುವಾಗಿರೋದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಕನಕಾಭಿಷೇಕದ ಮಧ್ಯೆ ಬಂದ ಗಂಗಾ, ಭೂಮಿಯನ್ನು ಹೊರಗಡೆ ಕರೆದು ಪ್ರೈವೇಟ್ ಆಗಿ ಮಾತಾಡ್ತಾಳೆ. “ನನ್ನ ಜೀವನ ಕಷ್ಟ ಆಗಿದೆ. ಚಿಕ್ಕಮಗಳೂರಿನ ನಿಮ್ಮ ಕಾಫಿ ಎಸ್ಟೇಟ್‌ನಲ್ಲಿ ನನಗೆ ಕೆಲಸ ಕೊಡಿಸಿ, ತುಂಬ ಉಪಕಾರ ಆಗುತ್ತದೆ. ಅಲ್ಲೇ ಸೆಟಲ್ ಆಗ್ತೀನಿ” ಅಂತ ಗೀತಾ ಅಲಿಯಾಸ್ ಗಂಗಾ ಹೇಳ್ತಾಳೆ. ಆಗ ಭೂಮಿಕಾ “ಓಕೆ” ಎನ್ನುತ್ತಾಳೆ.
ಹೊಸ ಪಾತ್ರಕ್ಕೂ, ಭೂಮಿಗೂ ಏನು ಸಂಬಂಧ, ಹೊಸ ಪಾತ್ರದ ಹಿನ್ನಲೆ ಏನು? ಇದ್ದಕ್ಕಿದ್ದಂತೆ ಹೊಸ ಪಾತ್ರ ಯಾಕೆ ಎಂಟ್ರಿ ಆಯ್ತು? ಇದರ ಹಿಂದೆ ಇರುವ ಕಥೆ ಏನು? ಈಗ ಇರುವ ಟ್ವಿಸ್ಟ್‌ಗಳ ಮಧ್ಯೆ ಹೊಸ ಕಥೆ ಶುರುವಾಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ.