- Home
- Entertainment
- TV Talk
- Amruthadhaare Serial: ಅಂತೂ ಇಂತೂ ಭೂಮಿಕಾಗೆ ಹೊಟ್ಟೆ ಬಂತು! ಗೌತಮ್ ಕೇರ್ ನೋಡಿ ಕಳೆದುಹೋದ ಪ್ರೇಕ್ಷಕರು!
Amruthadhaare Serial: ಅಂತೂ ಇಂತೂ ಭೂಮಿಕಾಗೆ ಹೊಟ್ಟೆ ಬಂತು! ಗೌತಮ್ ಕೇರ್ ನೋಡಿ ಕಳೆದುಹೋದ ಪ್ರೇಕ್ಷಕರು!
ʼಅಮೃತಧಾರೆʼ ಧಾರಾವಾಹಿಯಲ್ಲಿ ಹೊಸ ಮನ್ವಂತರ. ಹೌದು, ಗೌತಮ್, ಭೂಮಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಜೇಂದ್ರ ಭೂಪತಿ ಕುತಂತ್ರ, ಇನ್ನೊಂದು ಕಡೆ ಶಕುಂತಲಾ ರಹಸ್ಯ ಕಂಡುಹಿಡಿಯುವಲ್ಲಿ ಬ್ಯುಸಿಯಾಗಿದ್ದ ಈ ಜೋಡಿ ಈಗ ತಮಗೆ ಟೈಮ್ ಕೊಡುತ್ತಿದೆ.

ಸದ್ಯ ಭೂಮಿಕಾ, ಗೌತಮ್ ಪರಸ್ಪರ ಇಬ್ಬರೂ ಸಮಯ ಕಳೆಯುತ್ತಿದ್ದಾರೆ. ಗೌತಮ್‌ಗೆ ಮಕ್ಕಳೆಂದರೆ ತುಂಬ ಇಷ್ಟ. ಈಗ ಅವನು ಪತ್ನಿ ಭೂಮಿಕಾಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ನನ್ನ ಹಾಗೆ ಯೋಚನೆ ಮಾಡುವವರು ಬೇಕು ಎಂದು ಭೂಮಿಕಾ ಬಯಸುತ್ತಿದ್ದಳು, ಅದರಂತೆ ಅವಳಿಗೆ ಪತಿ ಸಿಕ್ಕಿದ್ದಾನೆ.
ಭೂಮಿಕಾ ಮಗುವನ್ನು ಸಾಯಿಸಲು ಶಕುಂತಲಾ ರೆಡಿಯಾಗಿದ್ದಾಳೆ. ಇನ್ನೊಂದು ಕಡೆ ರಾಜೇಂದ್ರ ಭೂಪತಿ ಕೂಡ ಹಲ್ಲು ಮಸೆಯುತ್ತಿದ್ದಾನೆ. ಹೀಗಾಗಿ ಭೂಮಿಕಾಗೆ ಏನಾಗಲಿದೆ ಎಂಬ ಆತಂಕವೂ ಇದೆ.
ಗರ್ಭಿಣಿ ಭೂಮಿಕಾಗೆ ಗೌತಮ್ ಈಗ ಬಹಳ ಕೇರ್ ಮಾಡುತ್ತಿದ್ದಾನೆ. ರಾತ್ರಿ ಹೊತ್ತು ಚಳಿಯಲ್ಲಿ ಫೈಯರ್ ಕ್ಯಾಂಪ್ ವ್ಯವಸ್ಥೆ ಮಾಡೋದು, ಈಗತಾನೇ ತಲೆಸ್ನಾನ ಮಾಡಿದ ಪತ್ನಿಗೆ ಸಾಮ್ರಾಣಿ ಹೊಗೆಯಿಂದ ತಲೆಕೂದಲು ಒಣಗಿಸೋದು, ಪ್ರೀತಿಯಿಂದ ತಿಂಡಿ ತಿನಿಸೋದು ಹೀಗೆ ಗೌತಮ್ ಈಗ ಪತ್ನಿಗೆ ಫುಲ್ ಟೈಮ್ ಕೊಡ್ತಿದ್ದಾನೆ. ಈಗಾಗಲೇ ವಾಹಿನಿಯು ಪ್ರೋಮೋ ರಿಲೀಸ್ ಮಾಡಿದ್ದು, ವೀಕ್ಷಕರಂತೂ ಪದೇ ಪದೇ ವಿಡಿಯೋ ನೋಡ್ತಿದ್ದಾರೆ.
ಮೇ 31 ಸಂಜೆ 7 ಗಂಟೆಗೆ ಈ ಹೊಸ ಮನ್ವಂತರ ಎಪಿಸೋಡ್ ಪ್ರಸಾರ ಆಗಲಿದೆ. ಈ ಎಪಿಸೋಡ್ ನೋಡಿ ವೀಕ್ಷಕರು ಖುಷಿ ಆಗಿದ್ದಲ್ಲದೆ, ಭೂಮಿಕಾಗೆ ಹೊಟ್ಟೆ ಬಂದಿದ್ದು ನೋಡಿ ಮಗು ಗಂಡೋ? ಹೆಣ್ಣೋ ಎಂದು ಚರ್ಚೆ ಶುರು ಮಾಡಿದ್ದಾರೆ.
ನಟಿ ಛಾಯಾ ಸಿಂಗ್ ಅವರು ಭೂಮಿಕಾ ಆಗಿ, ರಾಜೇಶ್ ನಟರಂಗ ಅವರು ಗೌತಮ್ ದಿವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೈಸೂರು ಮಾಲತಿ, ಸ್ವಾತಿ ರಾಯಲ್, ಸಿಲ್ಲಿ ಲಲ್ಲಿ ಆನಂದ್, ಕರಣ್ ಕೆ ಆರ್, ಅಪೇಕ್ಷಾ, ಅನ್ವಿತಾ ಸಾಗರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.