MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ದಿಯಾ ಮದ್ವೆ ಫಿಕ್ಸ್​ ಆಗಿದೆ ಕಣೋ, ನಿನ್​ ಹುಡ್ಗಿ ಜೊತೆ ಹೋಗು: Amruthadhaare ಜೈದೇವ್​ಗೆ ಫ್ಯಾನ್ಸ್​ ಬುದ್ಧಿಮಾತು

ದಿಯಾ ಮದ್ವೆ ಫಿಕ್ಸ್​ ಆಗಿದೆ ಕಣೋ, ನಿನ್​ ಹುಡ್ಗಿ ಜೊತೆ ಹೋಗು: Amruthadhaare ಜೈದೇವ್​ಗೆ ಫ್ಯಾನ್ಸ್​ ಬುದ್ಧಿಮಾತು

ಸಹಸ್ರಾರು ಕೋಟಿ ಒಡೆಯನಾಗಿದ್ದ 'ಅಮೃತಧಾರೆ' ಸೀರಿಯಲ್‌ನ ಜೈದೇವ್ ಈಗ ಬೀದಿಗೆ ಬಿದ್ದಿದ್ದಾನೆ. ಪತ್ನಿ ದಿಯಾ ತಿರಸ್ಕರಿಸಿದ ನಂತರ, ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿಲನ್ ಪಾತ್ರವಾದರೂ ಜೈದೇವ್‌ನ ಈ ದುಸ್ಥಿತಿಯನ್ನು ಅಭಿಮಾನಿಗಳು ಸಹಿಸುತ್ತಿಲ್ಲ.

1 Min read
Author : Suchethana D
Published : May 06 2026, 07:42 PM IST
Share this Photo Gallery
  • FB
  • TW
  • Linkdin
  • Whatsapp
16
ಜೈದೇವನ ಸ್ಥಿತಿ ನೋಡಲು ಆಗ್ತಿಲ್ಲ
Image Credit : Zee Kamnada

ಜೈದೇವನ ಸ್ಥಿತಿ ನೋಡಲು ಆಗ್ತಿಲ್ಲ

ಅಮೃತಧಾರೆ ಸೀರಿಯಲ್​ (Amruthadhaare)ನಲ್ಲಿ ಸದ್ಯ ಜೈದೇವನ ಸ್ಥಿತಿ ನೋಡಲು ಆಗುತ್ತಿಲ್ಲ. ಸಹಸ್ರಾರು ಕೋಟಿ ಒಡೆಯನಾಗಿರೋ ಜೈದೇವ್​ ಈಗ ತುತ್ತು ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.

26
ದಿಯಾ ಮುಂದೆ ಗೋಳಾಟ
Image Credit : zee5

ದಿಯಾ ಮುಂದೆ ಗೋಳಾಟ

ಪತ್ನಿ ದಿಯಾಳ ಮನೆಯ ಮುಂದೆ ಬಂದು, ಆತ ಗೋಳಾಡುತ್ತಿದ್ದಾನೆ. ನನ್ನನ್ನು ನಾಯಿಯ ಥರ ನೋಡಬೇಡ, ಹೀಗೆ ಮಾಡಬೇಡ. ನಾನು ಬೀದಿಗೆ ಬಂದಿದ್ದೇನೆ ಎಂದೆಲ್ಲಾ ಅಳುತ್ತಿದ್ದರೂ, ಅವಳು ಕಾರಿನಲ್ಲಿ ಕೇರೇ ಮಾಡದೇ ಹೋಗಿದ್ದಾಳೆ.

Related Articles

Related image1
Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು
Related image2
Met Gala: 1800 ಕ್ಯಾರಟ್​ ವಜ್ರದಲ್ಲಿ ಮಿಂಚಿದ ಇಶಾ ಅಂಬಾನಿ- ರಾಜ ಮನೆತನದ ಆಭರಣ: ಕ್ಯೂಟ್​ ಫೋಟೋಸ್​ ಇಲ್ಲಿವೆ
36
ಜೈದೇವ್​ ವಿಷ್ಯದಲ್ಲಿ ಹಾಗಲ್ಲ
Image Credit : Zee Kamnada

ಜೈದೇವ್​ ವಿಷ್ಯದಲ್ಲಿ ಹಾಗಲ್ಲ

ಈ ದೃಶ್ಯಗಳನ್ನು ನೋಡಿದ ಜೈದೇವ್​ ಫ್ಯಾನ್ಸ್​ಗೆ ಭಾರಿ ನೋವು ಉಂಟಾಗಿದೆ. ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ವಿಲನ್​ಗಳನ್ನು ಕಂಡರೆ ಹೊರಗಡೆ ಅವರೇನಾದ್ರೂ ಸಿಕ್ಕರೆ ಅವರು ನಿಜಕ್ಕೂ ವಿಲನ್​ಗಳೇ ಎನ್ನುವ ಹಾಗೆ ಹಲವು ಅಭಿಮಾನಿಗಳು ಮಾಡುವುದು ಉಂಟು. ಆದರೆ ಜೈದೇವ್​ ವಿಷ್ಯದಲ್ಲಿ ಹಾಗಲ್ಲ.

46
ವಿಲನ್​ ಆದ್ರೂ ಚೆಂದ
Image Credit : Zee Kamnada

ವಿಲನ್​ ಆದ್ರೂ ಚೆಂದ

ಜೈದೇವ್​ ಪಾತ್ರಧಾರಿ ರಾಣವ್​ ಗೌಡ ಅವರ ಫ್ಯಾನ್ಸ್​ಗೆ ಜೈದೇವ್​ ವಿಲನ್​ ಆಗಿದ್ರೂ ಚೆಂದನೇ. ಮೆರೆಯುತ್ತಿದ್ದ ಜೈದೇವ್​ನನ್ನು ಈ ರೀತಿ ಬೀದಿಯಲ್ಲಿ ನೋಡುವುದು ಅವರಿಗೆ ಇಷ್ಟವಾಗುತ್ತಿಲ್ಲ.

56
ಕರ್ಕೊಂಡು ಹೋಗು ಪ್ಲೀಸ್​
Image Credit : Instagram

ಕರ್ಕೊಂಡು ಹೋಗು ಪ್ಲೀಸ್​

ಅಷ್ಟಕ್ಕೂ ರಾಣವ್​ ಗೌಡ ಅವರ ಮದುವೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನ ರಾಧಾ ಭಗವತಿ ಅವರ ಜೊತೆ ನೆರವೇರಲಿದೆ. ಅದಕ್ಕಾಗಿಯೇ ಭಾವಿ ಗಂಡನನ್ನು ಕರ್ಕೊಂಡು ಹೋಗು, ನಟನ ಸ್ಥಿತಿ ನೋಡಲು ಆಗ್ತಿಲ್ಲ ಎಂದು ಗೋಗರೆಯುತ್ತಿದ್ದಾರೆ ಸೀರಿಯಲ್​​ ಪ್ರೇಮಿಗಳು. ಅದೇ ಇನ್ನೊಂದೆಡೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರ ಮದುವೆಯೂ ಫಿಕ್ಸ್​ ಆಗಿರೋದ್ರಿಂದ ಇವಳನ್ನು ಬಿಟ್ಟುಬಿಡು ಎನ್ನುತ್ತಿದ್ದಾರೆ ಫ್ಯಾನ್ಸ್​.

66
ಫ್ಯಾನ್ಸ್ ನಿರಾಶೆ
Image Credit : Zee Kamnada

ಫ್ಯಾನ್ಸ್ ನಿರಾಶೆ

ಒಟ್ಟಿನಲ್ಲಿ ಜೈದೇವ್​ ಕ್ಯಾರೆಕ್ಟರ್​ ಹೀಗೆ ಬೀದಿಗೆ ಬಂದಿರುವುದನ್ನು ಹಲವರು ಸಹಿಸುತ್ತಿಲ್ಲ. ವಿಲನ್​ ಆಗಿರೋ ಆತನಿಗೆ ಇದು ಸರಿಯಾದ ಶಿಕ್ಷೆ ಎಂದು ಮತ್ತೆ ಕೆಲವರು ಹೇಳುತ್ತಿದ್ದರೂ, ಅಭಿಮಾನಿಗಳು ಮಾತ್ರ ನಿರಾಶರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಕನ್ನಡ ಧಾರಾವಾಹಿ
ಮದುವೆ
ಸಂಬಂಧಗಳು
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ನಮೃತಾ ಗೌಡ ಮುದ್ದಾದ ಫೋಟೊ ಶೂಟ್… ಫೋಟೊಗ್ರಾಫರ್ ಯಾರು ಗೊತ್ತಾ?
Recommended image2
Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು
Recommended image3
Amruthadhaare Serial: ಜಯದೇವ್‌ನನ್ನು ಬೀದಿಗೆ ತಂದ ದಿಯಾ ಬೇಬಿ; ಅಂಥ ದ್ವೇಷ ಏನಿತ್ತು?
Related Stories
Recommended image1
Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು
Recommended image2
Met Gala: 1800 ಕ್ಯಾರಟ್​ ವಜ್ರದಲ್ಲಿ ಮಿಂಚಿದ ಇಶಾ ಅಂಬಾನಿ- ರಾಜ ಮನೆತನದ ಆಭರಣ: ಕ್ಯೂಟ್​ ಫೋಟೋಸ್​ ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved