- Home
- Entertainment
- TV Talk
- Amruthadhaare Serialಗೆ ಡಾ.ರಾಜ್ ಕುಮಾರ್ರ 'ಹಾಲು-ಜೇನು' ಚಿತ್ರದ ಟಚ್: ಅಂತ್ಯ ಏನಾಗುತ್ತೆ
Amruthadhaare Serialಗೆ ಡಾ.ರಾಜ್ ಕುಮಾರ್ರ 'ಹಾಲು-ಜೇನು' ಚಿತ್ರದ ಟಚ್: ಅಂತ್ಯ ಏನಾಗುತ್ತೆ
ಅಮೃತಧಾರೆ ಧಾರಾವಾಹಿಯಲ್ಲಿ ನಾಯಕಿ ಭೂಮಿಕಾಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಪತ್ನಿಯ ಆರೈಕೆಯಲ್ಲಿ ತೊಡಗಿರುವ ಗೌತಮ್, 1982ರ 'ಹಾಲು-ಜೇನು' ಚಿತ್ರವನ್ನು ನೆನಪಿಸುತ್ತಿದ್ದು, ಭೂಮಿಕಾಳ ಮುಂದಿನ ಕಥೆ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

ಭೂಮಿಕಾಗೆ ಕ್ಯಾನ್ಸರ್
ಅಮೃತಧಾರೆ ಸೀರಿಯಲ್ನಲ್ಲಿ ಸದ್ಯ ಭೂಮಿಕಾಗೆ ಕ್ಯಾನ್ಸರ್ ಎಂದು ಸಾಬೀತಾಗಿದೆ. ಗಂಡ ಗೌತಮ್ನಿಂದ ಗುಟ್ಟಾಗಿಟ್ಟಿದ್ದು ರಟ್ಟಾಗಿದೆ. ಈಗೇನಿದ್ದರೂ ಭೂಮಿಕಾಗೆ ಗೌತಮ್ನ ಆಸರೆ, ಪ್ರೀತಿಯೊಂದೇ ಬದುಕಿಗೆ ಇರುವ ಭರವಸೆ.
ವೈದ್ಯರ ಮಾತಿಗೆ ವೀಕ್ಷಕರ ಆಕ್ರೋಶ
ಭೂಮಿಕಾಗೆ ಕ್ಯಾನ್ಸರ್ ಇದೆ ಎಂದ ಆರಂಭದಲ್ಲಿ ವೈದ್ಯರು, ಕ್ಯಾನ್ಸರ್ ಪೀಡಿತರಿಗೆ ಸಾಯುವುದೊಂದೇ ದಾರಿ ಎನ್ನುವ ಅರ್ಥದಲ್ಲಿ ಮಾತನಾಡಿ ಅದೆಷ್ಟೋ ಕ್ಯಾನ್ಸರ್ ರೋಗಿಗಳಿಗೆ ಭಯ ಹುಟ್ಟಿಸಿದ್ದರು. ಎಷ್ಟೋ ಕ್ಯಾನ್ಸರ್ ಪೀಡಿತರು ಗುಣಮುಖರಾಗಿರುವ ಉದಾಹರಣೆ ಇದ್ದಾಗ, ಸೀರಿಯಲ್ಗಳಲ್ಲಿ ಇಂಥ ಮಾತುಗಳನ್ನಾಡಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಸೀರಿಯಲ್ನಲ್ಲಿ ಬರುವುದೆಲ್ಲಾ ನಿಜ ಎಂದು ನಂಬುವ ಅದೆಷ್ಟೋ ಮಂದಿಗೆ ಈ ಮಾತುಗಳು ಜೀವನದ ಭರವಸೆಯನ್ನೇ ಕಸಿದುಕೊಂಡಿದ್ದವು. ಆದರೆ ಇದೀಗ ಕ್ಯಾನ್ಸರ್ಗೂ ಚಿಕಿತ್ಸೆ ಇದೆ ಎಂದು ತೋರಿಸಿರುವುದು ಸಮಾಧಾನದ ಸಂಗತಿ.
ಮನೆಯವರ ಪ್ರೀತಿಯ ಆರೈಕೆಯೇ ಮದ್ದು
ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆಯೊಂದೇ ಅಲ್ಲ, ಅದರ ಜೊತೆ ಮನೆಯವರ ಪ್ರೀತಿ, ಆರೈಕೆ, ಭರವಸೆಯ ಮಾತುಗಳು ಜೊತೆಗೆ ವೈದ್ಯರಿಂದಲೂ ಭರವಸೆಯ ಮಾತುಗಳು ಮುಖ್ಯ ಎನ್ನುವುದನ್ನು ಸದ್ಯ ಅಮೃತಧಾರೆ ಸೀರಿಯಲ್ ತೋರಿಸುತ್ತಿದ್ದು, ಪತ್ನಿ ಭೂಮಿಕಾಳನ್ನು ಗೌತಮ್ ನಡೆಸಿಕೊಳ್ಳುವ ರೀತಿ ಹಲವರಿಗೆ ಮಾದರಿಯಾಗಬೇಕಿದೆ.
ಹಾಯಾಗಿ ಕುಳಿತಿರು ನೀನು...
ಇದೀಗ, ಭೂಮಿಕಾಳನ್ನು ಕುಳ್ಳರಿಸಿ ತಾನೇ ಅಡುಗೆ ಮಾಡುತ್ತಿದ್ದಾನೆ ಗೌತಮ್. ಇದು ಡಾ.ರಾಜ್ ಮತ್ತು ಮಾಧವಿ ಅಭಿನಯದ 1982ರಲ್ಲಿ ಬಿಡುಗಡೆಗೊಂಡ ಹಾಲು-ಜೇನು ಚಿತ್ರವನ್ನು ನೆನಪಿಸುವಂತಿದೆ. ಅಲ್ಲಿ ಮಾಧವಿಗೆ ಕ್ಯಾನ್ಸರ್ ಆದಾಗ, ಡಾ.ರಾಜ್ ಅವರೇ ಅಡುವೆ ಮಾಡಿ, ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ... ಹಾಡು ಹೇಳಿದ್ದರು. ಅದನ್ನೇ ಈಗ ಈ ಸೀರಿಯಲ್ನಲ್ಲಿಯೂ ಸೇರಿಸಲಾಗಿದೆ.
ಅಲ್ಲಿ ಅಣ್ಣಾವ್ರು, ಇಲ್ಲಿ ಡುಮ್ಮಾ ಸರ್...
ಅಲ್ಲಿ ಅಣ್ಣಾವ್ರು, ಇಲ್ಲಿ ಡುಮ್ಮಾ ಸರ್... ಒಟ್ಟಿನಲ್ಲಿ ಹಾಲು ಜೇನಿನ ಸ್ಟೋರಿಯನ್ನು ಹಲವು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಆದರೆ ಹಾಲು ಜೇನು ಚಿತ್ರದಲ್ಲಿ, ನಾಯಕಿ ಮಾಧವಿ ಕ್ಯಾನ್ಸರ್ನಿಂದ ಕೊನೆಯಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೂ ಇದೆ. ಆಗ ಕ್ಯಾನ್ಸರ್ ರೋಗಕ್ಕೆ ಈಗಿನ ರೀತಿಯಲ್ಲಿ ಚಿಕಿತ್ಸೆ ಇರಲಿಲ್ಲ. ಏಕೆಂದರೆ ಇದು 1982ರ ಚಿತ್ರ. ಆಗಲೂ ಕ್ಯಾನ್ಸರ್ ಗೆದ್ದವರು ಇದ್ದರೂ, ಈಗಿನಷ್ಟು ಸರಳವಾಗಿರಲಿಲ್ಲ ಅಂದಿನ ಚಿಕಿತ್ಸೆಗಳು.
ಅಂತ್ಯ ಏನು?
ಆದರೆ ಇಂದು ಹಾಗಲ್ಲ. ಎಷ್ಟೋ ಮಂದಿ ಬದುಕಿದ್ದಾರೆ. ಅಲೋಪಥಿಯಲ್ಲಿ ಸಾಧ್ಯವಾಗದೇ ಇದ್ದವರು, ಕೆಲವು ಹೋಮಿಯೋಪಥಿ ಔಷಧಗಳಿಂದ ಹಾಗೂ ಕಿಮೋಥೆರಪಿ ಬಳಿಕವೂ ಮುದ್ರೆ, ಯೋಗ, ಧ್ಯಾನಗಳನ್ನು ಮೈಗೂಡಿಸಿಕೊಂಡು ಈ ರೋಗದಿಂದ ಹೊರಬಂದು ಗೆಲುವು ಸಾಧಿಸಿದವರು ಇದ್ದಾರೆ. ಆದ್ದರಿಂದ ಅಮೃತಧಾರೆಯಲ್ಲಿಯೂ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ದಿಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

