- Home
- Entertainment
- TV Talk
- ಅಂಜುತ್ತಲೇ ಮಾಡಿದ ಆ ವಿಡಿಯೋ ವೈರಲ್ ಆಯ್ತು: ಒಂದೂವರೆ ಕೋಟಿ ವ್ಯೂವ್ಸ್ ಕಂಡ ಬಗ್ಗೆ ನಟಿ ಅಭಿಜ್ಞಾ ಹೇಳಿದ್ದೇನು
ಅಂಜುತ್ತಲೇ ಮಾಡಿದ ಆ ವಿಡಿಯೋ ವೈರಲ್ ಆಯ್ತು: ಒಂದೂವರೆ ಕೋಟಿ ವ್ಯೂವ್ಸ್ ಕಂಡ ಬಗ್ಗೆ ನಟಿ ಅಭಿಜ್ಞಾ ಹೇಳಿದ್ದೇನು
'ಆಸೆ' ಸೀರಿಯಲ್‌ನಲ್ಲಿ ರೋಹಿಣಿ ಪಾತ್ರದಲ್ಲಿ ನಟಿಸುತ್ತಿರುವ ಅಭಿಜ್ಞಾ ಭಟ್, ಪಾತ್ರದ ರಹಸ್ಯ ಬಯಲಾಗುವ ಪ್ರೋಮೋ 14 ಮಿಲಿಯನ್ ವೀಕ್ಷಣೆ ಪಡೆದಿದ್ದಕ್ಕೆ ಭಾವುಕರಾಗಿದ್ದಾರೆ. ಆರಂಭದಲ್ಲಿ ಈ ಸಂಕೀರ್ಣ ಪಾತ್ರವನ್ನು ಒಪ್ಪಿಕೊಳ್ಳಲು ಅಂಜಿದ್ದೆ, ಆದರೆ ಸಿಗುತ್ತಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಆಸೆ ಸೀರಿಯಲ್ ಅಭಿಜ್ಞಾ ಭಟ್
ಅಭಿಜ್ಞಾ ಭಟ್ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಆಸೆ ಸೀರಿಯಲ್ನ ರೋಹಿಣಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಎಂದರೆ ಸೀರಿಯಲ್ ಪ್ರಿಯರಿಗೆ ತಿಳಿಯುತ್ತದೆ. ‘ರಾಮಾಚಾರಿ’, ‘ಸ್ನೇಹದ ಕಡಲಲ್ಲಿ’ ಸೇರಿದಂತೆ ಅನೇಕ ಧಾರಾವಾಹಿಗಳಿ ಅಭಿನಯಿಸಿರುವ, ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’, ʻಭರ್ಜರಿ ಬ್ಯಾಚುಲರ್ಸ್’ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ, ಬಿಗ್‌ಬಾಸ್ ಆಫರ್ ಸದ್ಯ ತಿರಸ್ಕರಿಸಿ ಸದ್ದು ಮಾಡಿದ್ದ, ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಅಭಿಜ್ಞಾ ಇದೀಗ ಕುತೂಹಲದ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

14 ಮಿಲಿಯನ್ ವ್ಯೂವ್ಸ್
ತಾವು ಅಂಜುತ್ತಲೇ ಮಾಡಿರುವ ಆ ವಿಡಿಯೋಗೆ 14 ಮಿಲಿಯನ್ಸ್ ವ್ಯೂವ್ಸ್ ಬಂದಿರುವ ಬಗ್ಗೆ ನಟಿ ಭಾವುಕರಾಗಿದ್ದಾರೆ. ಅದು ಆಸೆ ಸೀರಿಯಲ್ ಪ್ರೊಮೋದ ವಿಡಿಯೋ ಆಗಿದೆ. . ತಾಯಿ ಮಗನ ಸೆಂಟಿಮೆಂಟ್, ಸೂರ್ಯ-ಮೀನಾ ಜೋಡಿಯ ಛಲಬಿಡದೆ ದುಡಿಮೆ, ಮೀನಾ, ಸೂರ್ಯ ಮನೆಗೆ ತ್ಯಾಗ ಮಾಡುವುದು, ತಂದೆ ಮಗನ ಭಾಂದವ್ಯ, ಹೀಗೆ ಹಲವಾರು ಸನ್ನಿವೇಶಗಳನ್ನು ಒಳಗೊಂಡಿರುವ ಈ ಸೀರಿಯಲ್‌ನಲ್ಲಿ, ರೋಹಿಣಿ ಪಾತ್ರ ಮಹತ್ವ ಪಡೆದುಕೊಂಡಿದೆ.
ನಾಲ್ಕು ಬಾರಿ ರೋಲ್ ಚೇಂಜ್
ನಟಿ ಅಮೃತಾ ರಾಮಮೂರ್ತಿ ಅವರು ಈ ಪಾತ್ರವನ್ನು ಬಿಟ್ಟು ಹೋದ ಮೇಲೆ ಅದಕ್ಕೆ ಬಂದವರು ಅಭಿಜ್ಞಾ ಭಟ್ (Abhijna Bhat). ಅಷ್ಟಕ್ಕೂ ಈ ಸೀರಿಯಲ್ ಶುರುವಾದಾಗಿನಿಂದ ರೋಹಿಣಿ ಪಾತ್ರಕ್ಕೆ ಯಾಕೋ ಕಂಟಕ ಬರುತ್ತಲೇ ಇದೆ. ನಾಲ್ಕು ಬಾರಿ ಪಾತ್ರ ಬದಲಾಗಿದೆ. ಸಿಕ್ಕಾಪಟ್ಟೆ ಎಮೋಷನ್, ಶಕ್ತಿ ಎಲ್ಲವನ್ನೂ ಒಳಗೊಂಡಿರುವ ಈ ಪಾತ್ರಕ್ಕೆ ತಕ್ಕ ಪಾತ್ರಧಾರಿ ಸಿಕ್ಕರೂ ಅವರೆಲ್ಲರೂ ಸೀರಿಯಲ್ ಬಿಡುತ್ತಿದ್ದರಿಂದ ಈಗ ಆ ಪಾತ್ರಕ್ಕೆ ಜೀವ ತುಂಬುತ್ತಿರುವವರು ನಟಿ ಅಭಿಜ್ಞಾ ಭಟ್.
ನಟಿ ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ಆಸೆಯಲ್ಲಿ ನನ್ನ ಅಭಿನಯವನ್ನು ಮೆಚ್ಚಿ ಬಹಳಷ್ಟು ಸಂದೇಶಗಳು ಬರುತ್ತಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೋಮೋ 14 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ದ್ವೇಷ ಮತ್ತು ಪ್ರೀತಿಯಿಂದ ತುಂಬಿರುವ ಪಾತ್ರ. ಆದರೆ ತೊಳಲಾಟದ ಜೀವನ. ನಾನು ರೋಹಿಣಿಯಂತಹ ಪಾತ್ರಕ್ಕೆ ಎಂದಾದರೂ ಹೊಂದಿಕೊಳ್ಳುತ್ತೇನೆಯೇ ಎಂದು ಅಂಜಿದ್ದೆ. ಹತಾಶೆ, ಅತಿರೇಕದ, ಬಹಿಷ್ಕೃತದ ಜೀವನ ಇರುವ ಪಾತ್ರ. ಈ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಈ ರೋಲ್ನಲ್ಲಿ ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆಯೋ ಎನ್ನುವ ಭಯವಿತ್ತು. ಆದರೆ, ಇಷ್ಟೊಂದು ಪ್ರೀತಿ ಸಿಕ್ಕಿದೆ ಎಂದು ಭಾವುಕರಾಗಿದ್ದಾರೆ ನಟಿ.
ರೋಹಿಣಿ ಪಾತ್ರ ಏನು?
ಅಷ್ಟಕ್ಕೂ ರೋಹಿಣಿ ಪಾತ್ರದ ಕುರಿತು ಹೇಳುವುದಾದರೆ, ಎಳವೆಯಲ್ಲಿಯೇ ಅವಳಿಗೆ ಮದುವೆಯಾಗಿರುತ್ತದೆ. ಆತ ವಯಸ್ಸಿನಲ್ಲಿ ತುಂಬಾ ದೊಡ್ಡವ. ಒಂದು ಮಗುವಿನ ಬಳಿಕ ಆತ ಸತ್ತು ಹೋಗುತ್ತಾನೆ. ಅಲ್ಲಿ ರೋಹಿಣಿಯ ಕನಸೆಲ್ಲಾ ಕಮರಿ ಹೋಗುತ್ತದೆ. ಬಳಿಕ ಆಕೆ ಮಗನನ್ನು ಅಮ್ಮನ ಬಳಿಯೇ ಬಿಡುತ್ತಾಳೆ. ಅವಳ ಜೀವನದಲ್ಲಿ ಎಂಟ್ರಿ ಆಗುವವನು ಮನೋಜ್. ಅಲ್ಲಿಯೇ ಇರುವುದು ಟ್ವಿಸ್ಟ್. ತನ್ನ ಮೊದಲ ಜೀವನದ ಬಗ್ಗೆ ಪತಿಗೆ ಹೇಳಿಯೇ ಇರುವುದಿಲ್ಲ ರೋಹಿಣಿ. ಪತಿಯ ಮೇಲೆ ಅಪಾರ ಪ್ರೀತಿ ಇದ್ದರೂ, ಸುಳ್ಳಿನ ಮೇಲೆ ಸುಳ್ಳು ಹೇಳುವ ಪರಿಸ್ಥಿತಿ ಆಕೆಯದ್ದಾಗಿರುತ್ತದೆ. ಪ್ರೀತಿಯನ್ನು ಪಡೆಯುವುದಕ್ಕಾಗಿ ತಪ್ಪು ಹಾದಿ ಹಿಡಿಯುತ್ತಾಳೆ ರೋಹಿಣಿ.
14 ಮಿಲಿಯನ್ಸ್ ವ್ಯೂವ್ಸ್ ಏಕೆ?
ರೋಹಿಣಿ ರಹಸ್ಯ ಯಾವಾಗ ಬಯಲಾಗುತ್ತೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಕ್ಕಿದ್ದೇ ಈ ಪ್ರೊಮೋ. ಇದೇ ಒಂದೂವರೆ ಕೋಟಿ ವ್ಯೂವ್ಸ್ ಪಡೆದುಕೊಂಡಿದೆ. ರೋಹಿಣಿಯನ್ನ ಟ್ರಿಗರ್ ಮಾಡಿದ ಸೂರ್ಯ, ಸ್ವತಃ ಅವಳೇ ಸತ್ಯ ಹೇಳುವಂತೆ ಮಾಡಿದ್ದಾನೆ. ಈ ದೃಶ್ಯದ ಪ್ರೋಮೋಗೆ 14 ಮಿಲಿಯನ್ ವ್ಹೀವ್ಸ್ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

