Amruthadhaare: ಕಾರಿನ ಮೇಲೆ ಮಕ್ಕಳ ಕಿತಾಪತಿ-ಸ್ಟಿಕ್ಕರ್ ನೋಡಿ ಹೌಹಾರಿದ ಗೌತಮ್!
ಅಮೃತಧಾರೆ ಧಾರಾವಾಹಿಯಲ್ಲಿ, ಭೂಮಿಕಾ ಮತ್ತು ಮಕ್ಕಳು ಗೌತಮ್‌ನ ಪ್ರೀತಿಯ ಕಾರನ್ನು ಹುಡುಕಿದ್ದಾರೆ. ಆದರೆ, ಮಕ್ಕಳು ಕಾರಿನ ಮೇಲೆ 'ಭೂಮಿಕಾ ಗೌತಮ್' ಎಂದು ಸ್ಟಿಕ್ಕರ್ ಅಂಟಿಸಿದ್ದು, ಇದನ್ನು ನೋಡಿ ಗೌತಮ್ ಕೋಪಗೊಂಡಿದ್ದಾನೆ. ಗೌತಮ್ ಸ್ಟಿಕ್ಕರ್ ತೆಗೆಯಲು ಮುಂದಾದಾಗ ಭೂಮಿಕಾ ಎಂಟ್ರಿ ಕೊಟ್ಟಿದ್ದಾಳೆ.

ಸಿಕ್ಕಿತು ಕಾರು
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಗೌತಮ್‌ನ ಪ್ರೀತಿಯ ಕಾರನ್ನು ಭೂಮಿಕಾ ಮತ್ತು ಮಕ್ಕಳು ಸೇರಿ ಹುಡುಕಿ ತಂದುಕೊಟ್ಟಿದ್ದಾರೆ. ಈ ಕಾರಿನ ಮೇಲೆ ಗೌತಮ್ಗೆ ಸಿಕ್ಕಾಪಟ್ಟೆ ಅಟ್ಯಾಚ್ಮೆಂಟ್ ಇತ್ತು. ಕೊನೆಗೂ ಕಾರು ಸಿಕ್ಕಿದೆ.
ಮಕ್ಕಳಿಗೂ ಗೊತ್ತು ಸತ್ಯ
ಇದೀಗ ಗೌತಮ್ ಮತ್ತು ಭೂಮಿಕಾ ಯಾರು ಎನ್ನುವುದು ಮಕ್ಕಳಿಗೂ ತಿಳಿದಿದೆ. ಇದೇ ಕಾರಣಕ್ಕೆ ಮಿಂಚು ಮತ್ತು ಆಕಾಶ್ ಸೇರಿ ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ನೋಡಿ ಗೌತಮ್ ಕಂಗಾಲಾಗಿ ಹೋಗಿದ್ದು, ಅದನ್ನು ತೆಗೆಯುವಂತೆ ತಾಕೀತು ಮಾಡಿದ್ದಾನೆ. ಆದರೆ ಮಕ್ಕಳು ಮಾತ್ರ ಅದನ್ನು ತೆಗೆಯುವುದೇ ಇಲ್ಲ ಎಂದಿದ್ದಾರೆ.
ಭೂಮಿಕಾ ಗೌತಮ್ ಸ್ಟಿಕ್ಕರ್
ಅಷ್ಟಕ್ಕೂ ಆ ಕಾರಿನ ಮೇಲೆ ಮಕ್ಕಳು ಭೂಮಿಕಾ ಗೌತಮ್ ಎಂದು ಸ್ಟಿಕ್ಕರ್ ಅಂಟಿಸಿ, ಪಕ್ಕದಲ್ಲಿ ಮಿಂಚು- ಆಕಾಶ್ ಎಂದು ಬರೆದಿದ್ದಾರೆ. ಇದು ಬೇಡ, ಮೇಡಂಗೆ ಕೋಪ ಬರುತ್ತದೆ. ಇದನ್ನು ತೆಗೆಯಿರಿ ಎಂದು ಗೌತಮ್ ಏನೇ ಹೇಳಿದ್ರೂ ಮಕ್ಕಳು ಕೇಳಲಿಲ್ಲ.
ಹ್ಯಾಪ್ಪಿ ಫ್ಯಾಮಿಲಿ
ಅದೇ ವೇಳೆ ಮಿಂಚು ತನ್ನ ಕೈಯಲ್ಲಿ ಒಂದು ಸ್ಟಿಕ್ಕರ್ ಇಟ್ಟುಕೊಂಡಿದ್ದಳು. ಅದು ಏನು ಎಂದು ಕೇಳಿದಾಗ ಅದರ ಮೇಲೆ ಹ್ಯಾಪ್ಪಿ ಫ್ಯಾಮಿಲಿ ಎಂದು ಇತ್ತು. ಅದನ್ನು ಕಸಿದುಕೊಂಡ ಗೌತಮ್, ಇವೆಲ್ಲಾ ಬೇಡ ಎಂದಿದ್ದಾರೆ.
ಭೂಮಿಕಾ ಎಂಟ್ರಿ
ಇನ್ನೇನು ಸ್ಟಿಕ್ಕರ್ ಕೀಳಬೇಕು ಎಂದು ಗೌತಮ್ ಹೊರಟಾಗ ಅಲ್ಲಿಗೆ ಭೂಮಿಕಾ ಬಂದಿದ್ದಾಳೆ. ಅವಳು ಏನು ಮಾಡುತ್ತಾಳೆ ಎನ್ನುವುದು ಇನ್ನಷ್ಟೇ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

