- Home
- Entertainment
- TV Talk
- Amruthadhaare Serial Update: ಮಲ್ಲಿ ಮಾಡಿದ ಮಹಾಪ್ಲ್ಯಾನ್‌ಗೆ ತತ್ತರಿಸಿ, ಬೀದಿಯಲ್ಲಿ ಬಿದ್ದ ಜಯದೇವ್
Amruthadhaare Serial Update: ಮಲ್ಲಿ ಮಾಡಿದ ಮಹಾಪ್ಲ್ಯಾನ್‌ಗೆ ತತ್ತರಿಸಿ, ಬೀದಿಯಲ್ಲಿ ಬಿದ್ದ ಜಯದೇವ್
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ಗೆ ಈಗ ರೆಕ್ಕೆ ಕತ್ತರಿಸಿದಂತಾಗಿದೆ. ಅವನ ಬ್ಯಾಂಕ್ ಅಕೌಂಟ್‌ಗಳೆಲ್ಲವೂ ಈಗ ಫ್ರೀಜ್ ಆಗಿದೆ. ಅವನು ಮಲ್ಲಿಯನ್ನು ಹುಡುಕಿಕೊಂಡು ವಠಾರಕ್ಕೆ ಬಂದಿದ್ದಾನೆ. ಆದರೆ ಅವನಿಗೆ ಮಂಗಳಾರತಿ ಆಗಿದೆ.

ಪುಟಾಣಿಗಳ ಕಣ್ಣಿಗೆ ಬಿದ್ದ ಸತ್ಯವಿದು!
ಜಯದೇವ್ ಈಗ ಮಲ್ಲಿಯ ಫೋನ್ ಟ್ರ್ಯಾಪ್ ಮಾಡಿದಾಗ, ಅವಳು ಎಲ್ಲಿದ್ದಾಳೆ ಎನ್ನುವ ಲೊಕೇಶನ್ ಸಿಕ್ಕಿದೆ. ಅದನ್ನು ಹುಡುಕಿಕೊಂಡು ಅವನು ವಠಾರಕ್ಕೆ ಬಂದಿದ್ದಾನೆ. ಮಲ್ಲಿಯನ್ನು ಹುಡುಕಿಕೊಂಡು ಜಯದೇವ್ ಬಂದಿದ್ದಾನೆ ಎಂದು ಆಕಾಶ್, ಮಿಂಚುಗೆ ಗೊತ್ತಾಗಿದೆ. ಅದನ್ನು ಅವರು ಮಲ್ಲಿಗೆ ತಿಳಿಸಿದರು.
ಮಲ್ಲಿಗೆ ಬಂದ ಸಮಸ್ಯೆ ಬಗೆಹರಿದಿದೆ
ಆಕಾಶ್ ಹಾಗೂ ಮಿಂಚುವಿನಿಂದ ವಿಷಯ ತಿಳಿದ ಮಲ್ಲಿ, ಆ ವಠಾರದ ಮನೆಯ ಮಾಲೀಕರ ಬಳಿ ಹೋಗಿ, “ಅವನು ಹೆಣ್ಣು ಮಕ್ಕಳ ವಿಷಯದಲ್ಲಿ ಸರಿ ಇಲ್ಲ” ಎನ್ನೋ ಥರ ಮಾತನಾಡಿದ್ದಳು. ಆಮೇಲೆ ಅವರು ಜಯದೇವ್ ಬಳಿ ಕೂಗಾಡಿದ್ದಾರೆ. ಜಯದೇವ್ ಕೂಡ ಬಾಯಿಗೆ ಬಂದ ಹಾಗೆ ಮಾತನಾಡಿದ್ದನು. ಎಲ್ಲರೂ ಸೇರಿಕೊಂಡು ಅವನನ್ನು ಕಾರ್ ಬಳಿ ನೂಕಿದ್ದಾರೆ. ಅಲ್ಲಿಗೆ ಮಲ್ಲಿಗೆ ಬಂದ ಸಮಸ್ಯೆ ಬಗೆಹರಿದಿದೆ.
ದೇವಸ್ಥಾನದಲ್ಲಿ ಗೌತಮ್, ಭೂಮಿಕಾ
ಮಗ-ಸೊಸೆ ದೂರ ಆಗಿದ್ದಾರೆ ಎಂದು ತಿಳಿದು, ಅದನ್ನು ನಾನೇ ಸರಿ ಮಾಡಬೇಕು ಎಂದು ಭಾಗ್ಯಮ್ಮ ಮನೆಯಿಂದ ಹೊರಬಂದಿದ್ದಾಳೆ. ಈ ಮೂವರು ಏಕಕಾಲಕ್ಕೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಂಡಿಕಾಳಿ ದೇವಸ್ಥಾನದಲ್ಲಿ ಗೌತಮ್ ಹಾಗೂ ಭೂಮಿಕಾ, ಭಾಗ್ಯಮ್ಮ ಇದ್ದಾರೆ. ಭೂಮಿಕಾಳನ್ನು ಭಾಗ್ಯಮ್ಮನಿಗೆ ಮಾತು ಬಂದಿದೆ, ಭೂಮಿಕಾ ಎಂದು ಅವಳು ಕರೆದಿದ್ದಾಳೆ.
ಪ್ಲ್ಯಾನ್ ಮಾಡುತ್ತಲಿರುವ ಜಯದೇವ್
ಈ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗಬೇಕಿದೆ. ಇನ್ನೊಂದು ಕಡೆ ಜಯದೇವ್ ಈಗ ಮತ್ತೆ ಗೌತಮ್‌ಗೆ ಮರಳು ಮಾಡಿ ಮತ್ತೆ ಆಸ್ತಿಯನ್ನು ಪಡೆದುಕೊಳ್ಳೋ ಪ್ಲ್ಯಾನ್‌ನಲ್ಲಿದ್ದಾನೆ, ಮಲ್ಲಿ ಜೀವನ ಹಾಳಾಗಬೇಕು, ಅವಳು ಖುಷಿ ಆಗಿರಲಬಾರದು ಎಂದು ಬಯಸುತ್ತಿದ್ದಾನೆ.
ಪಾತ್ರಧಾರಿಗಳು ಯಾರು?
ಗೌತಮ್, ಭೂಮಿಕಾ ಬಾಳಲ್ಲಿ ಜಯದೇವ್ ಮತ್ತೆ ಆಟ ಆಡುವ ಸಾಧ್ಯತೆ ಇದೆ. ಹೀಗಾಗಿ ಈ ಧಾರಾವಾಹಿ ಕತೆ ಏನಾಗಲಿದೆಯೋ ಏನೋ!
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಜಯದೇವ್ ಪಾತ್ರದಲ್ಲಿ ರಾಣವ್ ಗೌಡ, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

