- Home
- Entertainment
- TV Talk
- BBK 12: ಗಿಲ್ಲಿ ನಟ, ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ? - ವೀಕ್ಷಕರ ಕೆಂಗಣ್ಣಿಗೆ ಗುರಿಯಾದ Kavya Shaiva
BBK 12: ಗಿಲ್ಲಿ ನಟ, ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ? - ವೀಕ್ಷಕರ ಕೆಂಗಣ್ಣಿಗೆ ಗುರಿಯಾದ Kavya Shaiva
BBK 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಒಂದು ಫೋನ್ ಇಡಲಾಗಿತ್ತು. ಆ ಫೋನ್ ತಗೊಂಡು ಸ್ಪರ್ಧಿಗಳ ಜೊತೆ ಮಾತನಾಡಬಹುದಿತ್ತು. ಆಗ ಚೈತ್ರಾ ಕುಂದಾಪುರ, ರಜತ್, ಕಾವ್ಯ ಶೈವ ಅವರು ಗಿಲ್ಲಿ ನಟನ ಮನೆಗೆ ಫೋನ್ ಮಾಡಿದ್ದರು.

ಕಾವು ಕಾವು ಎಂದರು
ಕಾವ್ಯ ಶೈವ ಹಾಗೂ ಗಿಲ್ಲಿ ನಟನ ಮಧ್ಯೆ ಒಳ್ಳೆಯ ಸ್ನೇಹ ಇತ್ತು. ಈ ಹಿಂದೆ ಕೂಡ ಇವರಿಬ್ಬರು ಒಟ್ಟಿಗೆ ರಿಯಾಲಿಟಿ ಶೋನಲ್ಲಿ ಕೆಲಸ ಮಾಡಿದ್ದರು. ನನಗೆ ಮದುವೆ ಆಗೋಕೆ ಕಾವ್ಯ ಶೈವ ಅಂಥ ಹುಡುಗಿ ಬೇಕು ಎಂದು ಗಿಲ್ಲಿ ಹೇಳಿದ್ದರು. ಸಾಕಷ್ಟು ಬಾರಿ ಅವರು ಕಾವು, ಕಾವು ಎಂದು ಹೇಳಿಕೊಂಡು ತಿರುಗಾಡುತ್ತಿರುತ್ತಾರೆ. ಕಾವ್ಯ ಅವರು ಅಣ್ಣ ಎಂದರೆ ಮಾತ್ರ ಗಿಲ್ಲಿ ಸಹಿಸೋದಿಲ್ಲ.
ರಾಖಿ ಕಟ್ಟಿಸಿಕೊಂಡು ದುಡ್ಡು ಕೊಟ್ಟಿಲ್ಲ
“ಹೆಲೋ ದೊಡ್ಡಮ್ಮ, ನಿಮ್ಮ ಮಗ ಟಾರ್ಚರ್ ಕೊಡ್ತಿದ್ದಾರೆ, ಹೇಳಿದ ಮಾತು ಕೇಳ್ತಿಲ್ಲ, ಮನೆಯಲ್ಲಿ ಹಾಗೆನೂ, ಅದಿಕ್ಕೆ ಇಲ್ಲಿ ಕಳಿಸಿದ್ದಾರಾ? ನನ್ನ ಹತ್ತಿರ ರಾಖಿ ಕಟ್ಟಿಸಿಕೊಂಡರೂ ಕೂಡ, ದುಡ್ಡು ಕೊಡಲಿಲ್ಲ, ಹೊರಗಡೆ ಬಂದಮೇಲೆ ತಗೊಳ್ತೀನಿ” ಎಂದು ಕಾವ್ಯ ಶೈವ ಹೇಳಿದ್ದರು.
ಗಿಲ್ಲಿಗೆ ಹುಡುಗಿ ನೋಡ್ತಿದ್ದಾರಾ?
“ಹೊರಗಡೆ ಹೆಣ್ಣು ನೋಡ್ತಿದ್ದಾರಾ? ಯಾವ ಥರದ ಹುಡುಗಿ ಬೇಕು? ನನ್ನ ಥರ ಹುಡುಗಿ ಬೇಡವಾ? ಏನಂಥ ಬುದ್ಧಿ ಕಲಿಸಿದ್ದಾರಾ? ಹೆಣ್ಣು ಮಗು ಹತ್ತಿರ ಏನು ಮಾತನಾಡಬೇಕು? ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ ಅವನು? ಅಕ್ಕ ಇದ್ದಾರಾ? ಆದರೂ ಲೈನ್ ಕ್ರಾಸ್ ಮಾಡಿ ಮಾತಾಡೋದು ಬಿಡೋದೆ ಇಲ್ಲ. ಏನಾದರೂ ಬೇಡ ಎಂದು ಹೇಳಿದರೆ ಲಿಮಿಟ್ ಕ್ರಾಸ್ ಮಾಡಬೇಡ ಎನ್ನೋದು ಗೊತ್ತಾ?” ಎಂದು ಕಾವ್ಯ ಶೈವ ಹೇಳಿದ್ದರು.
ಬೇರೆ ಯಾರಿಗೋ ಫೋನ್ ಮಾಡಿರಬೇಕು
ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ದೊಡ್ಡಮ್ಮ ಎಂದು ಅಡ್ರೆಸ್ ಮಾಡಿದಾಗ, ಗಿಲ್ಲಿ ಅವರು, “ಬೇರೆ ಯಾರಿಗೋ ಫೋನ್ ಮಾಡಿರಬೇಕು” ಎಂದರು. ಅದಾದ ಬಳಿಕ ಗಿಲ್ಲಿ ಅವರು, “ಕಾವ್ಯ ಶೈವನಂಥ ಹುಡುಗಿ ಬೇಕು, ಬೇರೆ ಬೇಡ, ಕಾವ್ಯನೇ ಬೇಕು” ಎಂದು ಹೇಳಿ ನಗೆಚಟಾಕಿ ಹಾರಿಸಿದರು.
ಗಿಲ್ಲಿ ನಟ ಮಾತಾಡೋದು ಕಾವ್ಯಗೆ ಇಷ್ಟ ಆಗಲ್ಲ
ಗಿಲ್ಲಿ ನಟ ಇಲ್ಲ ಅಂದರೆ ಕಾವ್ಯ ಶೈವ ಇಲ್ಲ, ಕಾವ್ಯ ಜೀರೋ ಎಂದು ಈಗಾಗಲೇ ಎಲಿಮಿನೇಟ್ ಆಗಿರುವ ರಿಷಾ ಗೌಡ ಹೇಳಿದ್ದರು. ಅಲ್ಲದೆ ರಿಷಾ ಗೌಡ, ಗಿಲ್ಲಿ ನಟ ಮಾತಾಡೋದು ಕಾವ್ಯಗೆ ಇಷ್ಟ ಆಗುತ್ತಿರಲಿಲ್ಲವಂತೆ. ಹೀಗಾಗಿ ಅವರು ಗಿಲ್ಲಿಯನ್ನು ಸೈಡ್‌ಗೆ ಕರೆದುಕೊಂಡು ಹೋಗಿ ಮಾತನಾಡಿದ್ದು ಇದೆಯಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

