- Home
- Entertainment
- TV Talk
- ಜೀನ್ಸ್ ಜೊತೆ ಬಿಂದಿ… ಸೋಲೋ ಟ್ರಿಪ್ ಮಾಡ್ತಿರೋ Bhoomi Shetty ಲುಕ್ ಮೆಚ್ಚಿಕೊಂಡ ಫ್ಯಾನ್ಸ್
ಜೀನ್ಸ್ ಜೊತೆ ಬಿಂದಿ… ಸೋಲೋ ಟ್ರಿಪ್ ಮಾಡ್ತಿರೋ Bhoomi Shetty ಲುಕ್ ಮೆಚ್ಚಿಕೊಂಡ ಫ್ಯಾನ್ಸ್
Bhoomi Shetty : ಕನ್ನಡ ಕಿರುತೆರೆಯ ನಟಿ ಭೂಮಿ ಶೆಟ್ಟಿ ಟ್ರಾವೆಲ್ ಪ್ರಿಯೆ. ಹೆಚ್ಚಾಗಿ ಸೋಲೋ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಭೂಮಿ ಶೆಟ್ಟಿ, ಸದ್ಯ ವಾರಣಾಸಿ ಟ್ರಿಪ್ ಮಾಡಿದ್ದು, ಫೋಟೊಗಳನ್ನು ಶೇರ್ ಮಾಡಿದ್ದು, ಭೂಂಇ ಶೆಟ್ಟಿ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಭೂಮಿ ಶೆಟ್ಟಿ
ಕನ್ನಡ ಕಿರುತೆರೆ, ಬಿಗ್ ಬಾಸ್ ಹಾಗೂ ತಮಿಳು ಮತ್ತು ಕನ್ನಡ ಸಿನಿಮಾದಲ್ಲೂ ನಟಿ ಸೈ ಎನಿಸಿಕೊಂಡ ಬೆಡಗಿ ಭೂಮಿ ಶೆಟ್ಟಿ. ಈಕೆ ಟ್ರಾವೆಲ್ ಪ್ರಿಯೆಯಾಗಿದ್ದು, ಹೆಚ್ಚಾಗಿ ದೇಶ ವಿದೇಶದಲ್ಲಿ ಸೋಲೋ ಟ್ರಿಪ್ ಮಾಡುವ ಭೂಮಿ ಶೆಟ್ಟಿ ಇದೀಗ ವಾರಣಾಸಿ ಟ್ರಾವೆಲ್ ಮಾಡಿದ್ದಾರೆ.
ಭೂಮಿ ಶೆಟ್ಟಿ @ ವಾರಾಣಾಸಿ
ಭೂಮಿ ವಾರಾಣಾಸಿಯಲ್ಲಿ ಕೆಲವು ದಿನಗಳನ್ನು ಕಳೆದಿದ್ದು, ಅಲ್ಲಿನ ಸುಂದರ ತಾಣಗಳು, ದೈವೀಕತೆ, ಭಕ್ತಿಯಲ್ಲಿ ಲೀನವಾಗಿ, ಗಂಗಾನದಿಯಲ್ಲಿ ಸ್ನಾನ ಮಾಡಿ ಧನ್ಯರಾಗಿದ್ದಾರೆ. ಭೂಮಿ ಶೆಟ್ಟಿ ಜೀನ್ಸ್ ಧರಿಸಿದ್ರೂ ಬಿಂದಿ ಇಟ್ಟು ಮುದ್ದಾಗಿ ಕಾಣಿಸುತ್ತಿದ್ದು ಇವರ ಈ ಲುಕ್ ನ್ನು ಜನ ಇಷ್ಟಪಟ್ಟಿದ್ದಾರೆ.
ಜೀನ್ಸ್ ಜೊತೆ ಬಿಂದಿ
ಭೂಮಿ ಶೆಟ್ಟಿ ಯಾವಾಗ್ಲೂ ತಮ್ಮದೇ ಆದ ಫ್ಯಾಷನ್ ಸೆನ್ಸ್ ಹೊಂದಿದ್ದಾರೆ. ಅವರ ಲುಕ್ ಡಿಫರೆಂಟ್ ಆಗಿರುತ್ತದೆ. ಭೂಮಿ ಹೆಚ್ಚಾಗಿ ಜೀನ್ಸ್, ಟೀ ಶರ್ಟ್ ಧರಿಸಿ ಸುತ್ತಾಡುತ್ತಿದ್ದರೂ ಸಹ ಅದರ ಜೊತೆಗೆ ಅವರು ಧರಿಸುವ ಬಿಂದಿ ಅಭಿಮಾನಿಗಳ ಗಮನ ಸೆಳೆದಿದೆ.
ಸೋಲೋ ಟ್ರಿಪ್ ಬಗ್ಗೆ ಭೂಮಿ ಹೇಳಿದ್ದೇನು?
ಸೋಲೋ ಟ್ರಾವೆಲ್ ನನ್ನ ಜೀವನವನ್ನು ಬದಲಾಯಿಸಿತು. ಅದು ನನ್ನ ಜೀವವನ್ನು ಉಳಿಸಿತು. ನಾನು ಏನು ಅನ್ನೋದನ್ನು ಸಾಬೀತು ಪಡಿಸಲು ಅದನ್ನು ಆಯ್ಕೆ ಮಾಡಿಲ್ಲ. ನನ್ನನ್ನು ನಾನು ಆಯ್ಕೆ ಮಾಡಿಕೊಂಡದಕ್ಕಾಗಿ ನಾನು ಸೋಲೋ ಟ್ರಾವೆಲ್ ಶುರು ಮಾಡಿದೆ.
ಪ್ರಯಾಣ ಶುರುವಾಗಿದ್ದು ಹೀಗೆ
ನಾನು 12 ನೇ ತರಗತಿಯ ನಂತರ ಮನೆಯಿಂದ ಹೊರಬಂದಾಗ, ನನಗೆ ಈ ಪ್ರಪಂಚದ ಬಗ್ಗೆ ಏನೂ ತಿಳಿದಿರಲಿಲ್ಲ. ಬದುಕಲು ಪ್ರಯತ್ನಿಸುತ್ತಿರುವ ಹುಡುಗಿ ನಾನಾಗಿದ್ದೆ. ನಗರ, ಉದ್ಯಮ, ಅವ್ಯವಸ್ಥೆ, ಸಂಬಂಧಗಳು ಎಲ್ಲೋ ದೃಢೀಕರಣವನ್ನು ಬೆನ್ನಟ್ಟುತ್ತಿದ್ದೆ. ನಾನು ಏನು ಅನ್ನೋದನ್ನು ಜನರು ನಂಬಬೇಕು ಎಂದು ಬಯಸಿದ್ದೆ. ಆದರೆ ನಂತರ ನನ್ನ ಪ್ರಯಾಣ ಶುರುವಾಯಿತು.
ಬ್ಯಾಕ್ ಪ್ಯಾಕಿಂಗ್ ಮಾಡಿ ಪ್ರಯಾಣ ಶುರು
ಬ್ಯಾಕ್‌ಪ್ಯಾಕಿಂಗ್ ಆಯಿತು. ನಂತರ ಇದ್ದಕ್ಕಿದ್ದಂತೆ, ಜೀವನ ಸರಳವಾಯಿತು. ಸ್ವಲ್ಪ ಇರೋದು ಸಕಾಗಿತ್ತು. ಒಂದು ಸಣ್ಣ ಪ್ಲ್ಯಾನ್, ಬೆಸ್ಟ್ ಪ್ಲ್ಯಾನ್ ಆಗಲು ಪ್ರಾರಂಭಿಸಿತು. ಎಲ್ಲರೂ ಸೋಲೋ ಟ್ರಾವೆಲ್ ಅನ್ನು ಧೈರ್ಯ ಅಂದುಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆ? ನೀವು ಒಮ್ಮೆ ಹೊರಗೆ ಹೆಜ್ಜೆ ಹಾಕಿದರೆ ಸಾಕು. ನಂತರ ನಿಧಾನವಾಗಿ, ಅರಿವಿಲ್ಲದೆಯೇ, ನೀವು ಧೈರ್ಯಶಾಲಿಯಾಗುತ್ತೀರಿ. ನಿರ್ಭೀತರಾಗುತ್ತೀರಿ. ದೂರ ದೂರ ಪ್ರಯಾಣಿಸಲು ಶುರು ಮಾಡುವಿರಿ.
ಮನೆ ಅಂದ್ರೆ ಏನು?
ಸೋಲೋ ಟ್ರಾವೆಲ್ ಮಾಡುವಾಗ ನಾನು ನಿಜವಾದ ಜನರನ್ನು ಭೇಟಿಯಾದೆ. ನನ್ನ ಕೆಲಸ ಅಥವಾ ಸಾಧನೆಗಳ ಬಗ್ಗೆ ಗೊತ್ತಿಲ್ಲದ ಜನರು, ನಾನು ಊಟ ಮಾಡಿದ್ದೇನೆಯೇ, ನನಗೆ ಸಹಾಯ ಬೇಕಾಗಿದೆಯೇ, ನಾನು ಅವರೊಂದಿಗೆ ಚಹಾ ಕುಡಿಯಲು ಇಷ್ಟಪಡುತ್ತೇನೆಯೇ ಎಂದು ಕೇಳುತ್ತಿದ್ದರು. ಆಗ ನನಗೆ ತಿಳಿದುಬಂದದ್ದು, ಮನೆ ಕೇವಲ ಒಂದು ಸ್ಥಳವಲ್ಲ. ಮನೆ ಎಂದರೆ ನೀವು ಮತ್ತೆ ಮತ್ತೆ ಕಂಡುಕೊಳ್ಳುವ ಭಾವನೆ, ಹೊಸ ನಗರಗಳು, ಹೊಸ ಮುಖಗಳು, ಹೊಸ ಕಥೆಗಳು.
ಕನಸು ಕಂಡ ಜೀವನ ನಡೆಸುತ್ತಿದ್ದೇನೆ
ನಾನು ಭೌತಿಕ ವಸ್ತುಗಳು, ಸೌಕರ್ಯ, ಮನೆಯ ಎಲ್ಲವೂ ಸ್ಥಿರವಾದುದು ಎಂದುಕೊಂಡಿದ್ದೆ. ಆದರೆ ನಾನು ಹೆಚ್ಚು ಪ್ರಯಾಣಿಸಿದಂತೆ, ನಾನು ಹಗುರವಾಗಿರಲು ಬಯಸಿದ್ದೆ. ಪ್ರತಿ ಪ್ರಯಾಣವು ನನ್ನನ್ನು ನನ್ನ ಹೊಸ ಟ್ರೆಂಡ್ ಗೆ ಪರಿಚಯಿಸುತ್ತದೆ.ಇಂದು, ನಾನು ಒಮ್ಮೆ ಕನಸು ಕಂಡ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ ಭೂಮಿ ಶೆಟ್ಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

