Amruthadhaare ರೋಚಕ ಟ್ವಿಸ್ಟ್: ಜೈದೇವನಿಂದ ಆಕಾಶ್ ಕಿಡ್ನಾಪ್- ಮುಂದಾದದ್ದು ಭಯಾನಕ!
ಆಕಾಶ್, ಭೂಮಿಕಾ ಮತ್ತು ಗೌತಮ್ ಮಗ ಎಂಬ ಸತ್ಯ ತಿಳಿದ ಜೈದೇವ್ ಆತನನ್ನು ಅಪಹರಿಸಿದ್ದಾನೆ. ಮಿಂಚು ಬಿಡಿಸಿದ ಚಿತ್ರದ ಮೂಲಕ ಭೂಮಿಕಾಗೆ ಜೈದೇವನ ಕುತಂತ್ರದ ಬಗ್ಗೆ ಸುಳಿವು ಸಿಕ್ಕಿದ್ದು, ಆಸ್ತಿಗಾಗಿ ಜೈದೇವ್ ಏನು ಬೇಕಾದರೂ ಮಾಡುವ ಆತಂಕ ಎದುರಾಗಿದೆ.

ರೋಚಕ ತಿರುವು
ಅಮೃತಧಾರೆ (Amruthadhaare Serial) ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಈ ಹಿಂದೆ ಜೈದೇವ್ ಆಕಾಶ್ನನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ಅವನಿಗೇ ಚಳ್ಳೆಹಣ್ಣು ತಿನ್ನಿಸಿದ್ದ. ಮಲ್ಲಿ ಫೋಟೋ ತೋರಿಸಿದಾಗ ತನಗೆ ಗೊತ್ತೇ ಇಲ್ಲ ಎಂದಿದ್ದ.
ಫೋಟೋದಿಂದ ನಿಜ ಬಯಲು
ಆದರೆ, ಇದೀಗ ಫೋಟೋಶೂಟ್ ಸಂದರ್ಭದಲ್ಲಿ ಮಲ್ಲಿ, ಭೂಮಿಕಾ ಮತ್ತು ಆಕಾಶ್ ಇರುವ ಫೋಟೋ ಅನ್ನು ಮಿಂಚು ಅಲ್ಲಿಯೇ ಬೀಳಿಸಿ ಹೋಗಿದ್ದಳು. ಎಲ್ಲವೂ ಕೈಮೀರಿ ತನ್ನ ಪಾಲಿಗೆ ಏನೂ ಸಿಗದೇ ಹತಾಶನಾಗಿದ್ದ ಜೈದೇವನಿಗೆ ಈ ಫೋಟೋ ಸಿಕ್ಕಿತ್ತು.
ಸತ್ಯ ತಿಳಿದ ಜೈದೇವ್
ಅಲ್ಲಿಗೆ ಆಕಾಶ್ ತನಗೆ ಮೋಸ ಮಾಡಿದ್ದು ತಿಳಿಯಿತು ಮಾತ್ರವಲ್ಲದೇ ಆಕಾಶ್ ಭೂಮಿಕಾ ಮತ್ತು ಗೌತಮ್ ಮಗ ಎನ್ನುವ ಸತ್ಯವೂ ತಿಳಿಯಿತು. ಇನ್ನೇನು ತಡ?
ಚಿತ್ರ ಬಿಡಿಸಿದ ಮಿಂಚು
ಆಕಾಶ್ ಶಾಲೆಗೆ ಹೋಗಿ ಆತನನ್ನು ಕಿಡ್ನ್ಯಾಪ್ ಮಾಡಿದ್ದಾನೆ ಜೈದೇವ್. ಭೂಮಿಕಾ ಆತನಿಗಾಗಿ ಹುಡುಕಾಟ ನಡೆಸಿದಾಗ, ಮಿಂಚುಗೆ ಜೈದೇವನೇ ಇವನನ್ನು ಕರೆದುಕೊಂಡು ಹೋಗಿರಬಹುದು ಎನ್ನುವ ಡೌಟ್ ಬಂದು, ಅವನ ಚಿತ್ರ ಬಿಡಿಸಿ ಭೂಮಿಕಾಗೆ ತೋರಿಸಿದ್ದಾಳೆ.
ಭೂಮಿಕಾ ಶಾಕ್
ಅದನ್ನು ನೋಡಿ ಭೂಮಿಕಾ ಶಾಕ್ ಆಗಿದ್ದಾಳೆ. ಕೊನೆಗೆ, ಅವರು ಜೈದೇವನ ಬಳಿಗೆ ಬಂದಿದ್ದಾರೆ. ಇಲ್ಲಿ ಜೈದೇವ ತನ್ನ ಆಟ ಶುರುವಿಟ್ಟುಕೊಂಡಿದ್ದಾನೆ. ಏನು ಅನಾಹುತ ಮಾಡುತ್ತಾನೆಯೋ ಕಾದು ನೋಡಬೇಕಿದೆ.
ಆಸ್ತಿ ಬರೆಸಿಕೊಳ್ತಾನಾ
ಅಷ್ಟಕ್ಕೂ ಅಜ್ಜಿ ಎಲ್ಲಾ ಆಸ್ತಿಗಳನ್ನು ಗೌತಮ್ ಹೆಸರಿಗೆ ಮಾಡಿರುವ ಹಿನ್ನೆಲೆಯಲ್ಲಿ, ಆಕಾಶ್ನನ್ನು ಮುಂದಿಟ್ಟುಕೊಂಡು ಆ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡರೂ ಏನೂಆಶ್ಚರ್ಯವಿಲ್ಲ. ಸದ್ಯ ಆಕಾಶ್ಗೆ ಆತ ಏನು ಮಾಡಿಲ್ಲ ಎನ್ನುವುದೇ ಸಮಾಧಾನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

