- Home
- Entertainment
- TV Talk
- Amruthadhaare Serial Update: ಲಡ್ಡು ಬಂದು ಬಾಯಿಗೆ ಬಿತ್ತು ಅನ್ಕೊಂಡಿದ್ದ ಶಕುಂತಲಾಗೆ ಶಾಕ್ ಕೊಟ್ಟ ಗೌತಮ್!
Amruthadhaare Serial Update: ಲಡ್ಡು ಬಂದು ಬಾಯಿಗೆ ಬಿತ್ತು ಅನ್ಕೊಂಡಿದ್ದ ಶಕುಂತಲಾಗೆ ಶಾಕ್ ಕೊಟ್ಟ ಗೌತಮ್!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಜೀವಕ್ಕೆ ಅಪಾಯ ಬಂದಿತ್ತು. ಇನ್ನೊಂದು ಕಡೆ ಭೂಮಿಕಾ ಗರ್ಭಿಣಿ. ಶಕುಂತಲಾ, ರಾಜೇಂದ್ರ ಭೂಪತಿಯಂತಹ ದುಷ್ಟರಿಂದ ಇವರು ಬಚಾವ್ ಆಗ್ತಾರಾ ಎನ್ನೋ ಪ್ರಶ್ನೆ ಇನ್ನೊಂದು ಕಡೆಯಾಗಿದೆ.

ಗೌತಮ್ ದಿವಾನ್‌ನಿಂದಲೇ ನನ್ನ ಮನೆ ಹಾಳಾಯ್ತು ಅಂತ ರಾಜೇಂದ್ರ ಭೂಪತಿ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಗೌತಮ್ ವಿರುದ್ಧ ಕಿಡಿಕಾರುತ್ತಿದ್ದನು. ಗೌತಮ್‌ನನ್ನು ನಾಶ ಮಾಡಬೇಕು ಅಂತ ಈಗ ಒಳ್ಳೆಯವನು ಎನ್ನೋ ಥರ ಮುಖವಾಡ ಹಾಕಿಕೊಂಡು ಅವನೀಗ ಗೌತಮ್‌ಗೆ ಅಪಾಯ ತಂದಿದ್ದನು.
ಗೌತಮ್ ಈಗ ಅಪಾಯದಿಂದ ಬಚಾವ್ ಆಗಿದ್ದಾನೆ. ಈಗ ಅವನಿಗೆ ತನಗೇನಾದರೂ ಆಗಿದ್ರೆ ಏನು ಮಾಡೋದು ಎನ್ನುವ ಭಯ ಶುರುವಾಗಿದೆ. ಗಂಡನಿಗೆ ಯಾರೋ ಹೊಡೆದರು, ಕೊಲ್ಲೋಕೆ ಟ್ರೈ ಮಾಡಿದರು ಅಂತ ಗರ್ಭಿಣಿ ಭೂಮಿಕಾ ಚಿಂತೆಯಲ್ಲಿದ್ದಾಳೆ.
ಹೀಗಿರುವಾಗ ಗೌತಮ್ ತನ್ನ ಕುಟುಂಬಕ್ಕೆ ಒಳ್ಳೆಯದು ಮಾಡಬೇಕು ಎಂದು ನಿರ್ಧಾರಕ್ಕೆ ಬಂದಿದ್ದಾನೆ. ಮಲತಾಯಿ ಶಕುಂತಲಾ ಬಳಿ ಹೋಗಿ ಅವನು ವಿಲ್ ಬರೆಯುತ್ತೇನೆ ಎಂದು ಹೇಳಿದ್ದಾನೆ.
ಇಷ್ಟು ವರ್ಷಗಳಿಂದ ಒಳ್ಳೆಯವಳು ಎನ್ನೋ ಥರ ನಾಟಕ ಮಾಡುತ್ತಿದ್ದ ಶಕುಂತಲಾಗೆ ಆಸ್ತಿಯದ್ದೇ ಚಿಂತೆ ಆಗಿತ್ತು. ಇಡೀ ಆಸ್ತಿ ನನ್ನ ಮಕ್ಕಳಿಗೆ ಸಿಗಬೇಕು ಅಂತ ಅವಳು ಗೌತಮ್‌ಗೆ ಮದುವೆ ಆಗೋದನ್ನು ತಡೆದಿದ್ದಳು. ಅಷ್ಟೇ ಅಲ್ಲದೆ ಈಗ ಭೂಮಿಕಾಗೆ ಮಗು ಆಗೋದು ಅವಳಿಗೆ ಇಷ್ಟ ಇರಲಿಲ್ಲ.
ವಿಲ್ ಬರೆಯುತ್ತೇನೆ ಅಂತ ಹೇಳಿದ್ದು ಶಕುಂತಲಾಗೆ ಲಡ್ಡು ಬಂದು ಬಾಯಿಗೆ ಬಿತ್ತು ಎನ್ನೋ ಥರ ಆಗಿತ್ತು. ಆದರೆ ಅವಳಿಗೆ ಈಗ ಗೌತಮ್ ಶಾಕ್ ಕೊಟ್ಟಿದ್ದಾನೆ. ಹೌದು, ಗೌತಮ್ ತನ್ನ ಎಲ್ಲ ಆಸ್ತಿಯನ್ನು ಹೆಂಡ್ತಿ ಭೂಮಿಕಾಗೆ, ಮಗುಗೆ ಬರೆಯುವ ಯೋಚನೆ ಮಾಡಿದ್ದಾನೆ. ಇದನ್ನು ಎಲ್ಲರ ಮುಂದೆ ಹೇಳಿದಾಗ ಎಲ್ಲರೂ ಶಾಕ್ ಆಗಿದ್ದಾರೆ.
ಪತ್ನಿ ಭೂಮಿಕಾ ಒಳ್ಳೆಯವಳು, ಇಡೀ ಕುಟುಂಬವನ್ನು ನಡೆಸಿಕೊಂಡು ಹೋಗ್ತಾಳೆ ಅಂತ ಅವನು ಎಲ್ಲ ಆಸ್ತಿಯನ್ನು ಪತ್ನಿಗೆ ಬರೆಯಲು ನಿರ್ಧಾರ ಮಾಡಿದ್ದಾನೆ. ಇದು ನಿಜಕ್ಕೂ ಕಾರ್ಯರೂಪಕ್ಕೆ ಬರತ್ತಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಅಂದಹಾಗೆ ಮುಂದೆ ಏನಾಗುವುದು ಎಂಬ ಕುತೂಹಲ ಜಾಸ್ತಿ ಆಗಿದೆ. ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.